Advertisement

ಕಾವೇರಿ, ಅಣೆಕಟ್ಟು ಸುರಕ್ಷತೆ ಬಗ್ಗೆ ಚರ್ಚೆ ನಡೆಸಿರುವೆ

11:36 PM Aug 11, 2019 | Lakshmi GovindaRaj |

ಮಂಡ್ಯ: “ಮೊದಲ ಬಾರಿಗೆ ಸಂಸತ್‌ ಅಧಿವೇಶನದಲ್ಲಿ ಭಾಗವಹಿಸಿ ಹಲವಾರು ವಿಷಯಗಳ ಕುರಿತು ಮಾತ ನಾಡಿದ್ದು ಒಂದು ರೋಚಕ ಅನುಭವ. ಅದನ್ನು ಅರಗಿಸಿಕೊಳ್ಳಲು ನನಗೆ ಇನ್ನೂ ಹಲವು ದಿನಗಳು ಬೇಕು’ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು.

Advertisement

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೆಆರ್‌ಎಸ್‌ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತಿದ್ದೇನೆ. ಅಣೆಕಟ್ಟು ಸುರಕ್ಷತೆ ಮಸೂದೆ ವಿಷಯ ಪ್ರಸ್ತಾಪಕ್ಕೆ ಬಂದ ಸಮಯದಲ್ಲಿ ಕೆಆರ್‌ಎಸ್‌ ವಿಚಾರವನ್ನು ಮಂಡಿಸಿ ವಾಸ್ತವಾಂಶವನ್ನು ಗಮನಕ್ಕೆ ತಂದಿದ್ದೇನೆ. ಮುಂದೆ ಗಣಿ ಮತ್ತು ಭೂ ವಿಜ್ಞಾನ ಸಚಿವರು ಇದರ ಬಗ್ಗೆ ಗಮನ ಹರಿಸಿ ನಂತರದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಕೆರೆಗಳ ಸಂರಕ್ಷಣೆ, ನೀರು ತುಂಬಿಸುವುದು, ಅದರ ಬಳಕೆ ಎಲ್ಲವೂ ಕೇಂದ್ರದ ಕೈಯ್ಯಲ್ಲೂ ಇಲ್ಲ. ರಾಜ್ಯದ ಕೈಯ್ಯಲ್ಲೂ ಇಲ್ಲ. ಅದೆಲ್ಲವೂ ಪ್ರಾಧಿಕಾರದ ಹಿಡಿತದಲ್ಲಿದೆ. ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದೇನೆ. ಮುಂದೆ ನಮಗೂ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next