Advertisement

ಆಹಾರ ಪದ್ದತಿ‌ ಕುರಿತು ವಿಧಾ‌ನ ಸಭೆಯಲ್ಲೂ ಚರ್ಚೆ: ವಿಶ್ವೇಶ್ವರ ಹೆಗಡೆ‌ ಕಾಗೇರಿ

01:05 PM Oct 02, 2021 | Team Udayavani |

ಶಿರಸಿ: ಆರೋಗ್ಯ ಕ್ಷೇತ್ರ ಎಚ್ಚರಿಕೆ ವಹಿಸಿ ಕೊಳ್ಳಬೇಕು. ಇದಕ್ಕೆ ಕಲಬೆರಕೆ ಆಹಾರ ಸಮಸ್ಯೆ ಮಾಡುತ್ತಿದೆ. ಈ ಕುರಿತು ಸದನದಲ್ಲಿ  ಆಹಾರವನ್ನು ಪದ್ದತಿಯ ಬಗ್ಗೆ ಚರ್ಚೆ ಮಾಡಬೇಕಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ‌ ಕಾಗೇರಿ ಪ್ರತಿಪಾದಿಸಿದರು.

Advertisement

ಶನಿವಾರ ಅವರು ಉತ್ತರ ಕನ್ನಡದ ಶಿರಸಿಯ ವೇದ ಆರೋಗ್ಯ ಕೇಂದ್ರದಲ್ಲಿ ಧನ್ವಂತರಿ‌ ಪ್ರತಿಮೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಮ್ಮ ಆರೋಗ್ಯದ ಜವಬ್ದಾರಿ ನಮ್ಮದೇ. ಜೀವನ ಶೈಲಿ, ಆತುರ ಗಳಿಗೆ ಆರೋಗ್ಯ ಕೆಡಿಸುತ್ತಿದೆ‌. ರೋಗ ಲಕ್ಷಣ‌ ನೋಡಿದರೆ ಪ್ರತಿಯೊಬ್ಬರಿಗೂ ಆತಂಕ ಉಂಟು ಮಾಡುತ್ತಿದೆ. ಉಭಯ ಸರಕಾರಗಳು ಎಷ್ಟು ಹಣ ಆರೋಗ್ಯ ಕ್ಷೇತ್ರಕ್ಕೆ ಚೆಲ್ಲಿದರೂ ಪ್ರಯೋಜನ ಆಗದು. ಆರೋಗ್ಯ ಕ್ಷೇತ್ರದ ಸಮಸ್ಯೆಗೆ ಕಲಬೆರೆಕೆ ಆಹಾರ ಸಮಸ್ಯೆ ಮಾಡುತ್ತಿದೆ ಎಂದು ಹೇಳಿದರು.

ಬಾಯರುಚಿಗೆ ತಿನ್ನೋದು, ಅನಗತ್ಯ ಓಡಾಟ‌ ಕಡಿಮೆ ಮಾಡಬೇಕು ಎಂದು ಸ್ಪೀಕರ್ ಸಲಹೆ ಮಾಡಿದರು.

ಈ ವೇಳೆ ಹೈಕೋರ್ಟ್ ವಕೀಲ ಎಂ.ಎಸ್.ಭಾಗ್ವತ್, ಡಾ. ವೆಂಕಟರಮಣ ಹೆಗಡೆ, ಸಂಗೀತಾ ಹೆಗಡೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next