Advertisement

ಚರ್ಚಾಕೂಟ ಮತ್ತು ವಿದ್ಯಾರ್ಥಿ

09:56 PM Oct 01, 2019 | mahesh |

ಮಕ್ಕಳ ಬೆಳವಣಿಗೆಗಾಗಿ ವಿದ್ಯಾಸಂಸ್ಥೆಗಳು ಅನೇಕ ಕಾರ್ಯಕ್ರಮ, ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು ಸಾಮಾನ್ಯ ವಿಷಯ. ತರಗತಿಯೊಳಗೆ ನಾಲ್ಕು ಗೋಡೆಯ ಮಧ್ಯೆ ಹೇಳಿಕೊಡುವುದಕ್ಕೆ ಸಾಧ್ಯವಿಲ್ಲದ ಅದೆಷ್ಟೋ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿಯೂ ಹೌದು. ಜತೆಗೆ ಮಕ್ಕಳ ಬುದ್ಧಿವಂತಿಕೆ ಹೆಚ್ಚಾಗುವುದಕ್ಕೂ, ಯೋಚನಾ ಲಹರಿಯಲ್ಲಿನ ಪ್ರಬುದ್ಧತೆಯನ್ನು ಹೆಚ್ಚಿಸುವ ದೃಷ್ಟಿಯಿಂದಲೂ ಇವುಗಳು ತೀರಾ ಮುಖ್ಯ.

Advertisement

ಹೀಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಸಂಸ್ತೆಗಳು ಅಥವಾ ಇನ್ನಿತರ ಸಮಸ್ಥೆಗಳು ನಡೆಸುವ ಚರ್ಚಾ ಸ್ಪರ್ಧೆಗಳು ಮಕ್ಕಳ ತೀಕ್ಷ್ಣತೆಯನ್ನು ಒರೆಗೆ ಹಚ್ಚುವ ಕೆಲಸವನ್ನು ಮಾಡುತ್ತವೆ ಎಂಬುದು ನೂರಕ್ಕೆ ನೂರು ಸತ್ಯ. ವಿದ್ಯಾರ್ಥಿಗಳಿಗೆ ತಿಳಿದ, ತಿಳಿಯದ, ತಮ್ಮ ವೈಚಾರಿಕತೆಗಿಂತ ಭಿನ್ನವಾದ ಇನ್ನೊಂದು ರೀತಿಯ ಯೋಚನಾ ಪ್ರಪಂಚಕ್ಕೆ ತೆರೆದುಕೊಳ್ಳುವ ದೃಷ್ಟಿಯಿಂದಲೂ ಚರ್ಚಾಕೂಟಗಳು ಪ್ರಮುಖ ಪಾತ್ರ ವಹಿಸುತ್ತವೆ. ತಮ್ಮ ತಿಳಿವಳಿಕೆ ವ್ಯಾಪ್ತಿಯನ್ನು ಮತ್ತೊಂದಷ್ಟು ವಿಶಾಲವಾಗಿಸಿಕೊಳ್ಳುವ ನಿಟ್ಟಿನಲ್ಲಿ ಚರ್ಚಾ ಕೂಟಗಳು ಸಹಕರಿಸುತ್ತವೆ.

ಪ್ರಸ್ತುತ ವಿದ್ಯಮಾನಗಳನ್ನು ತಿಳಿದುಕೊಳ್ಳುವ ಗುಣ, ಹಂಬಲ, ವಿಮರ್ಶಿಸುವ ಚಾಕ ಚಕ್ಯತೆ ಈ ಎಲ್ಲಾ ವಿಷಯಗಳಲ್ಲಿಯೂ ವಿದ್ಯಾರ್ಥಿಗಳು ಪರಿಪಕ್ವವಾಗುವುದಕ್ಕೆ ಚರ್ಚಾಕೂಟಗಳಿಂದ ಸಹಾಯವಾಗುತ್ತದೆ. ಜತೆಗೆ ಎದುರಿನವನಿಗೆ ಸಮಂಜಸವಾಗಿ ಉತ್ತರ ನೀಡುವುದು ಹೇಗೆ ಎನ್ನುವುದನ್ನು ಕಲಿತುಕೊಳ್ಳುವಲ್ಲಿಯೂ ಪೂರಕವಾಗಿ ಕೆಲಸ ಮಾಡುತ್ತವೆ. ಜತೆಗೆ ಸರಿ ತಪ್ಪುಗಳ ಬಗ್ಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ, ಗಂಭೀರ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಹಾಗೂ ಅನೇಕ ಭಿನ್ನತೆಗಳ ನಡುವೆಯೂ ಬದುಕು ಸಾಗಿಸಬಹುದಾದ ಶಕ್ತಿಯನ್ನು ಚರ್ಚೆಗಳು ಕಲಿಸಿಕೊಡುತ್ತವೆ.

ಸ್ಪರ್ಧಾತ್ಮಕ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿಯೂ ಚರ್ಚಾ ಕೂಟಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವೂ ಇಂತಹ ಕಾರ್ಯಕ್ರಮಗಳ ಆಯೋಜನೆಯಿಂದಾಗಿ ಹೆಚ್ಚಾಗುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹ ಬೇಡ. ಒಟ್ಟಾರೆಯಾಗಿ ಹೇಳ‌ಬೇಕೆಂದಾದರೆ ವಿದ್ಯಾರ್ಥಿಗಳು ಬೆಳವಣಿಗೆಗೆ ಚರ್ಚಾ ಕೂಟಗಳು ಸಹಾಯ ಮಾಡುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.

ಆರೋಗ್ಯಪುರ್ಣ ಚರ್ಚೆಗಳಿಂದಾಗಿ ಕೆಲವು ವಿಷಯಗಳ ಬಗ್ಗೆ ನಾವು ಹೊಂದಿರುವ ತಪ್ಪು ಕಲ್ಪನೆಗಳನ್ನು ಬದಲಾಯಿಸಿಕೊಳ್ಳಲು ಅವಕಾಶವಾದಂತಾಗುತ್ತದೆ. ಜತೆಗೆ ಇಂತಹ ಸ್ಪರ್ಧೆಗಳನ್ನು ಏರ್ಪಡಿಸುವುದರಿಂದಾಗಿ ಒಂದಷ್ಟು ಜನರ ಪರಿಚಯ, ಸ್ನೇಹಗಳು ಸಂಭವಿಸುವುದು ಸಾಧ್ಯ. ನಮಗೆ ತಿಳಿಯದೇ ಇರುವ ವಿಷಯಗಳ ಬಗ್ಗೆ ಅವರಿವರ ಅಭಿಪ್ರಾಯ, ಅದರ ಮತ್ತೂಂದಷ್ಟು ವ್ಯಾಪ್ತಿಯನ್ನು ಕರಗತ ಮಾಡಿಕೊಳ್ಳುವ ದೃಷ್ಟಿಯಿಂದಲೂ ಚರ್ಚೆಗಳು ಹೆಚ್ಚು ಸೂಕ್ತ ದಾರಿ ಎನ್ನಬಹುದು.

Advertisement

ಭುವನ ಬಾಬು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next