Advertisement

ಟ್ರಂಪ್‌-ಮೋದಿ ಭೇಟಿ ವೇಳೆ ವೀಸಾ ಕುರಿತು ಚರ್ಚೆ?

02:17 PM Jun 14, 2017 | Harsha Rao |

ವಾಷಿಂಗ್ಟನ್‌: ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನಡುವಿನ ಮುಂದಿನ ಭೇಟಿ ಭಾರತ-ಅಮೆರಿಕ ಬಾಂಧವ್ಯ ವೃದ್ಧಿಗೆ ಹೊಸ ದೃಷ್ಟಿಕೋನ ದೊರಕಿಸಲಿದೆ ಎಂದು ಶ್ವೇತಭವನ ಹೇಳಿದೆ. 

Advertisement

ಜೂ.26ರಂದು ವಿಶ್ವದ ಎರಡು ಅತಿ ದೊಡ್ಡ ದೇಶಗಳ ನಾಯಕರು ಭೇಟಿಯಾಗಲಿದ್ದು, ಭಯೋತ್ಪಾದನೆ ಯಿಂದ, ದ್ವಿಪಕ್ಷೀಯ ಸಂಬಂಧ ವೃದ್ಧಿವರೆಗೆ, ಜತೆಗೆ ಭಾರತಕ್ಕೆ ಕಳವಳಕಾರಿಯಾಗಿರುವ ಎಚ್‌1ಬಿ ವೀಸಾ ಬಗ್ಗೆ ಚರ್ಚಿಸಲಿದ್ದಾರೆ. ಈ ಭೇಟಿ ಸಂಬಂಧ ವೃದ್ಧಿ  ಯೊಂದಿಗೆ ಎರಡೂ ದೇಶಗಳ ಜನರಿಗೆ ಫ‌ಲಕಾರಿ ಯಾಗಲಿದೆ ಎಂಬ ಆಶಯವಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸಿಯಾನ್‌ ಸ್ಪೈಸರ್‌ ತಮ್ಮ ನಿತ್ಯದ ಮಾಧ್ಯಮ ಸಭೆಯಲ್ಲಿ ಹೇಳಿದ್ದಾರೆ. ಮೋದಿ-ಟ್ರಂಪ್‌ ಭೇಟಿ ವಿಶ್ವಮಟ್ಟದಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ. 

ಜನವರಿಯಲ್ಲಿ ಟ್ರಂಪ್‌ ಅವರ ಅಧಿಕಾರ ಸ್ವೀಕಾರ ವೇಳೆ ಮೋದಿ ಅವರು ಶುಭಾಶಯ ಕೋರಿ ಕರೆ ಮಾಡಿದ್ದು, ಈ ವೇಳೆ ವಾಷಿಂಗ್ಟನ್‌ಗೆ ಟ್ರಂಪ್‌ ಆಹ್ವಾನಿ ಸಿದ್ದರು. ಎಚ್‌1ಬಿ ವೀಸಾ ನಿಯಮಾವಳಿಯನ್ನು ಟ್ರಂಪ್‌ ಅಧಿಕಾರಕ್ಕೆ ಬಂದ ಬಳಿಕ ಕಠಿನಗೊಳಿಸಿದ್ದು, ಈ ಬಗ್ಗೆ ಭಾರತ ತೀವ್ರ ಕಳವಳ ಹೊಂದಿದೆ. ಜತೆಗೆ ಇತ್ತೀಚೆಗೆ ಪ್ಯಾರಿಸ್‌ ಹವಾಮಾನ ಬದಲಾವಣೆ ಕುರಿತ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಟ್ರಂಪ್‌ ಹೇಳಿ ದ್ದಾರೆ. ಇದನ್ನೂ ಪ್ರಧಾನಿ ಮೋದಿ ಮಾತುಕತೆಯಲ್ಲಿ ಪ್ರಸ್ತಾ ವಿಸಲಿದ್ದಾರೆಯೇ ಎಂದು ಕಾದು ನೋಡಬೇಕಿದೆ. 

ಬುದ್ಧಿವಂತಿಕೆಯಿಂದ ಟ್ರಂಪ್‌ ಜತೆ ವ್ಯವಹರಿಸಿ: ಅಮೆರಿಕ ಅಧ್ಯಕ್ಷ ಟ್ರಂಪ್‌ ಜತೆ ವ್ಯವಹರಿಸುವಾಗ ತಾಳ್ಮೆ, ಬುದ್ಧಿವಂತಿಕೆ ಮತ್ತು ವೈಯಕ್ತಿಕವಾಗಿ ವ್ಯವಹರಿ ಸುವಂತೆ ಹಿರಿಯ ಅಧಿಕಾರಿ ಅಮಿಯಾ ಚಂದ್ರ ಹೇಳಿದ್ದಾರೆ. “ಇಂಡಿಯನ್‌ ಫಾರಿನ್‌ ಟ್ರೇಡ್‌ ಟ್ರಂಪ್‌ಡ್‌ ಅಪ್‌ ಆರ್‌ ಡೌನ್‌’ ಹೆಸರಿನ ಪುಸ್ತಕ ಬಿಡುಗಡೆ ವೇಳೆ ಮಾತನಾಡಿದ ಅವರು  ಟ್ರಂಪ್‌ ಅವರ ಕಾರ್ಯಗಳನ್ನು ಅಂದಾಜಿಸುವ ಮೊದಲು ಅವರ ಮಾನಸಿಕತೆ ಬಗ್ಗೆ ಅರಿಯ ಬೇಕಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next