Advertisement
ಸುಟ್ಟತ್‌ಮಲೆ ಆಸುಪಾಸಿನಲ್ಲಿ ಹರಳು ಕಲ್ಲು ದಂಧೆ ವ್ಯಾಪಕವಾಗಿರುವ ಬಗ್ಗೆ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಇದೀಗ ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷರು ಭೇಟಿ ನೀಡಿದ್ದು, ಹರಳು ಕಲ್ಲು ತೆಗೆಯಲು 50 ಅಡಿಗಿಂತಲೂ ಹೆಚ್ಚು ಆಳದ ಹಲವು ಗುಂಡಿಗಳನ್ನು ತೋಡಿರುವುದು ಪತ್ತೆಯಾಯಿತು. ಕೆಲವು ಹೊಂಡಗಳಿಗೆ ಮರದ ಹಲಗೆಗಳನ್ನು ಹಾಕಿ ಮುಚ್ಚಿರುವುದೂ ಗಮನಕ್ಕೆ ಬಂದಿದೆ ಎನ್ನಲಾಗಿದೆ.
ಸುಟ್ಟತ್‌ನಲೆ, ಕಡಮಕಲ್ಲು ಪ್ರದೇಶದ ಕೆಲವು ಸ್ಥಳಗಳು ದ.ಕ. ಜಿಲ್ಲಾ ಅರಣ್ಯ ವ್ಯಾಪ್ತಿಗೆ ಬರುತ್ತದೋ ಕೊಡಗು ಜಿಲ್ಲಾ ವ್ಯಾಪ್ತಿಗೆ ಬರುತ್ತದೋ ಎಂಬ ಮಾಹಿತಿ ಇಲ್ಲದಿರುವುದು ಮತ್ತು ಉಭಯ ಜಿಲ್ಲೆಯ ಅರಣ್ಯ ಇಲಾಖೆಯವರಲ್ಲಿ ಸಮನ್ವಯದ ಕೊರತೆ ಇರುವುದರಿಂದ ಅನ್ಯರು ಕಾಡು ಪ್ರವೇಶಿಸಲು ಅವಕಾಶವಾಗುತ್ತಿದೆ. ಕೊಡಗು ಭಾಗದಿಂದ ಇಲ್ಲಿಗೆ ಬಂದು ದಂಧೆ ನಡೆಸುತ್ತಿರುವುದೇ ಇದಕ್ಕೆ ಸಾಕ್ಷಿ. ಇಲಾಖೆಯಲ್ಲಿ ಸಿಬಂದಿ ಕೊರತೆ, ಆಧುನಿಕ ಉಪಕರಣಗಳ ಕೊರತೆ ಇದೆ. ಅರಣ್ಯ ಇಲಾಖೆಯ ಶೆಡ್‌ಗಳಲ್ಲಿ ಮೂಲ ಸೌಕರ್ಯ ಕೊರತೆಯೂ ಕಂಡುಬಂದಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು. ಸಿಬಂದಿಗೆ ಮೂಲ ಸೌಕರ್ಯ
ಅರಣ್ಯ ರಕ್ಷಕರಿಗೇ ರಕ್ಷಣೆ ಇಲ್ಲದ ಸ್ಥಿತಿ ಇದೆ. ಅವರಿಗೆ ಮೂಲಸೌಕರ್ಯ, ಸೂಕ್ತ ಆಯುಧಗಳು, ಉತ್ತಮ ವೇತನ ನೀಡುವ ಬಗ್ಗೆ ಸದ್ಯದಲ್ಲೇ ದ.ಕ., ಕೊಡಗು ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸುತ್ತೇನೆ ಎಂದು ರವಿ ಕುಶಾಲಪ್ಪ ಹೇಳಿದರು.
Related Articles
Advertisement
ಏನಿದು ಪ್ರಕರಣ?ಸುಟ್ಟತ್‌ಮಲೆ ಅರಣ್ಯ ಪ್ರದೇಶದಲ್ಲಿ ಕೆಜಿಗೆ ಸಾವಿರಾರು ರೂ. ಬೆಲೆ ಬಾಳುವ ಹರಳು ಕಲ್ಲುಗಳ ನಿಕ್ಷೇಪವಿದ್ದು, ಅಕ್ರಮವಾಗಿ ಹಣ ಗಳಿಸುವ ದುರುದ್ದೇಶದಿಂದ ಕೆಲವು ಅಲ್ಲಿ ನೆಲವನ್ನು ಬಗೆದು ಹರಳು ಕಲ್ಲುಗಳನ್ನು ಸಂಗ್ರಹಿಸುವ ಪ್ರಕ್ರಿಯೆ ಹಲವು ವರ್ಷಗಳ ಹಿಂದೆಯೇ ನಡೆಯುತ್ತಿರುವ ಬಗ್ಗೆ ವರದಿಯಾಗಿತ್ತು. ಒಂದೊಮ್ಮೆ ನಿಂತಿದ್ದ ಈ ದಂಧೆ ಇದೀಗ ಮತ್ತೆ ಆರಂಭವಾಗಿದೆ. ಹರಳು ಕಲ್ಲು ದಂಧೆಯನ್ನು ನಿಲ್ಲಿಸದೇ ಇದ್ದಲ್ಲಿ ದುರಂತ ಕಟ್ಟಿಟ್ಟ ಬುತ್ತಿ. ಪಶ್ಚಿಮ ಘಟ್ಟ, ಪರಿಸರ ಉಳಿಯಲು ಇದನ್ನು ತಡೆಯುವುದು ಅನಿವಾರ್ಯ. ಸರಕಾರ, ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಇದು ಆನೆಗಳ ಆವಾಸ ಸ್ಥಾನವಾಗಿದ್ದು, ಇಂತಹ ಚಟುವಟಿಕೆಗಳಿಂದ ಅವುಗಳ ಸ್ವತ್ಛಂದ ಓಡಾಟಕ್ಕೆ ಅಡ್ಡಿಯಾಗುತ್ತಿದೆ. ಇದೇ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಆನೆಗಳು ನಾಡಿನತ್ತ ನುಗ್ಗಿ ಸಂಘರ್ಷಕ್ಕೆ ಕಾರಣವಾಗುತ್ತಿದೆ.
– ರವಿಕುಶಾಲಪ್ಪ,
ಅಧ್ಯಕ್ಷರು ಪಶ್ಚಿಮ ಘಟ್ಟಗಳ ಕಾರ್ಯಪಡೆ