Advertisement

ಏನೇ ಸಮಸ್ಯೆ ಇದ್ದರೂ ಚರ್ಚಿಸಿ ಬಗೆಹರಿಸಿಕೊಳ್ಳಿ

09:30 PM Oct 20, 2019 | Team Udayavani |

ಕೊಳ್ಳೇಗಾಲ: ನಾಲ್ಕು ವರ್ಷಗಳಿಂದಲೂ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಬಹಳ ಅನುಭವವಾಗಿದೆ. ಮುಂದುವರೆದ ಜನಾಂಗದವರು ಸಹಕಾರ ಸಂಘ ಮಾಡಿ ಮುಂದುವರೆಯುತ್ತಾರೆ. ಆದರೆ ನಮ್ಮ ಜನಾಂಗದ ನೌಕರರು ನೀವು ಸಹಕಾರ ಸಂಘ ಮಾಡಿ ಎಂದು ಹಲವು ಬಾರಿ ಹೇಳಿದ್ದೆ ಇದೀಗ ಸಹಕಾರ ಸಂಘ ರಚನೆ ಮಾಡಿ ಒಳ್ಳೆಯ ದಿಕ್ಕಿನಲ್ಲಿ ಸಾಗುತ್ತಿರುವುದು ನನಗೆ ಸಂತೋಷ ತಂದಿದೆ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು. ಪಟ್ಟಣದ ಗುರುಭವನದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಪ್ಪಾರ ನೌಕರರ ಅಭಿವೃದ್ಧಿ ಸಹಕಾರ ಸಂಘದಿಂದ ನೌಕರರಿಗೆ ಏರ್ಪಡಿಸಿದ್ದ ಅಭಿನಂದನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ನೌಕರರಿಗೆ ಸಲಹೆ: ಸಹಕಾರ ಕ್ಷೇತ್ರದಲ್ಲಿ ಹಣ ವಹಿವಾಟುಗಳು ನಡೆದಿರುವುದರಿಂದ ಮನಃನಾ§ಪಗಳು ಹೆಚ್ಚಾಗುತ್ತಿದ್ದು ವರ್ಷದ ಒಂದು ದಿನ ಏರ್ಪಡಿಸಿದ್ದ ವಾರ್ಷಿಕ ಸಭೆಯಲ್ಲಿ ಏನೇ ಸಮಸ್ಯೆ ಇದ್ದರೂ ಚರ್ಚೆ ನಡೆಸಿ ಅಲ್ಲೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಪ್ಪಾರ ಭವನ ನಿರ್ಮಾಣ: ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ನಮ್ಮ ಜನಾಂಗದವರು ಸೇರಿಕೊಂಡು ಟ್ರಸ್ಟ್‌ ರಚನೆ ಮಾಡಿಕೊಂಡು 6 ಕೋಟಿ ವೆಚ್ಚದಲ್ಲಿ ಉಪ್ಪಾರ ಭವನ ನಿರ್ಮಾಣ ಮಾಡುತ್ತಿದ್ದೇವೆ. 8 ತಿಂಗಳಲ್ಲಿ ಕಾಮಗಾರಿ ಮುಗಿಸಿ ಉದ್ಘಾಟನೆ ಮಾಡುತ್ತೇವೆ. ಈ ಭವನದಲ್ಲಿ ನಿಮ್ಮ ಸಹಕಾರ ಸಂಘದ ಚಟುವಟಿಕೆಗಳನ್ನು ನಡೆಸಲು ಸಹ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.

ಸಮಾಜ ಸೇವೆಗೆ ಒತ್ತು ನೀಡಿ: ಜನಾಂಗದಲ್ಲಿ ಬಡವರೆ ಹೆಚ್ಚಾಗುತ್ತಿದ್ದು ಕೆಲವರು ಹೊರಟುತನದಿಂದಿದ್ದಾರೆ. ಅಂಥವರಿಗೆ ನಿಮ್ಮ ಸಹಕಾರ ಸಂಘದಿಂದ ತಿಳಿವಳಿಕೆ ಹೇಳಿ ಸಮಾಜದಲ್ಲಿ ಒಳ್ಳೆಯ ಮನುಷ್ಯನಾಗಿ ಬಾಳುವೆ ನಡೆಸುವಂತೆ ಅವರಿಗೆ ಅರಿವು ಮೂಡಿಸಿ. ಆರ್ಥಿಕವಾಗಿ ಮುಂದೆ ಬರಲು ಸಹಕಾರ ನೀಡಬೇಕು. ಸಮಾಜ ಸೇವೆಗಳಿಗೆ ಹೆಚ್ಚು ಒತ್ತು ನೀಡಬೇಕು. ಇತರೆ ಜನಾಂಗದವರೊಡನೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು ಒಳ್ಳೆಯ ಕೆಲಸವನ್ನು ಮಾಡಲು ಸಾಧ್ಯವಾಗದಿದ್ದರೆ ಕೆಟ್ಟ ಕೆಲಸವನ್ನು ಮಾಡಬಾರದು ಎಂದು ಕಿವಿ ಮಾತು ಹೇಳಿದರು.

ಶಾಸಕರಿಗೆ ಸಲಹೆ: ಪೊಲೀಸ್‌ ಇಲಾಖೆಯ ಇನ್ಸ್‌ಪೆಕ್ಟರ್‌ ಶಿವಕುಮಾರ್‌ ಮಾತನಾಡಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚು ಉಪ್ಪಾರ ಜನಾಂಗದವರಿದ್ದು ಇವರಲ್ಲಿ ಬಡವರೇ ಹೆಚ್ಚಾಗಿ ಜೀವನ ಸಾಗಿಸುತ್ತಿದ್ದು, ರಾಜ್ಯದಲ್ಲಿ ಉಪ್ಪಾರ ಜನಾಂಗದ ಏಕೈಕ ಶಾಸಕರಿದ್ದು ಕೆಲವು ಗ್ರಾಮದಲ್ಲಿ ಉಪ್ಪಾರ ಜನಾಂಗ ವಾಸಮಾಡುವ ಹಳ್ಳಿಗಳಿಗೆ ಭೇಟಿ ನೀಡಿ ಅವರ ಸಮಸ್ಯೆ ಕೇಳಿದರೆ ಅವರಿಗೆ ಸಂತೋಷ ಉಂಟಾಗುತ್ತದೆ. ನೀವು ಈ ಕೆಲಸವನ್ನು ಮಾಡಬೇಕೆಂದು ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಸಲಹೆ ನೀಡಿದರು.

Advertisement

ಸಂಘ ಲಾಭದಲ್ಲಿದೆ: ಸಹಕಾರ ಸಂಘದ ಅಧ್ಯಕ್ಷ ರವಿ ಮಾತನಾಡಿ, ಸಹಕಾರ ಸಂಘ ರಚನೆ ಮಾಡಿ ಷೇರುದಾರರಿಂದ 20 ಲಕ್ಷ ರೂ. ಸಂಗ್ರಹಿಸಿದ ಹಣವನ್ನು ನೌಕರರಿಗೆ ಸಾಲ ನೀಡಲಾಗಿದೆ. ಸಂಘದಲ್ಲಿ ಹಣದ ಕೊರತೆ ಇದ್ದು ಸರ್ಕಾರಿ ನೌಕರರು ಠೇವಣಿ ಇಟ್ಟರೆ ಸಂಘ ಬೆಳೆಯಲು ಸಾಧ್ಯವಾಗುತ್ತದೆ. ಈಗಾಗಲೇ 40,375 ರೂ. ಬಡ್ಡಿಯು ಸಂಘದಲ್ಲಿ ಲಾಭಗಳಿಸಿದೆ ಎಂದು ತಿಳಿಸಿದರು.

ಸದಸ್ಯತ್ವ ಪಡೆಯಿರಿ: ಗೃಹ ನಿರ್ಮಾಣ ಸಹಕಾರ ಸಂಘ ಮಾಡಲು ಮುಂದಾಗಿದ್ದೇವೆ ಈಗಾಗಲೇ ಚಾಮರಾಜನಗರ-ಮೈಸೂರು ಜಿಲ್ಲೆಯ ತಿ.ನರಸೀಪುರ ಕೇಂದ್ರಗಳಲ್ಲಿ ಭೂಮಿಯನ್ನು ಗುರುತು ಮಾಡಲಾಗಿದೆ. ನೌಕರರು ಇದ್ದಕ್ಕೂ ಸಹ ಸದಸ್ಯತ್ವವನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು. ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಬಡ್ತಿ ಹೊಂದಿದ ಅಧಿಕಾರಿಗಳು ಮತ್ತು ನೌಕರರಿಗೆ ಹಾಗೂ ಇಲಾಖೆಗಳಲ್ಲಿ ಸಾಧನೆ ಮಾಡಿದ ಅಧಿಕಾರಿಗಳಿಗೆ ಮತ್ತು ನೌಕರರಿಗೆ, ನಿವೃತ್ತಿ ಹೊಂದಿದ ಅಧಿಕಾರಿಗಳಿಗೆ ಮತ್ತು ನೌಕರರನ್ನು ಸನ್ಮಾನಿಸಿ ಗೌರವಿಸಿದರು.

ಇನ್ಸ್‌ಪೆಕ್ಟರ್‌ ಚಿಕ್ಕರಾಚಶೆಟ್ಟಿ, ಚಾಮರಾಜನಗರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಣ್ಣ, ಸಹಕಾರ ಸಂಘದ ಉಪಾಧ್ಯಕ್ಷ ಮಹದೇವು, ಆರ್‌ಎಫ್ಒ ಸುಂದರ್‌, ಕೆಯುಟಿ ಅಧ್ಯಕ್ಷ ಮಹದೇವ, ಚಾಮರಾಜನಗರ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲ ಮಾದೇಶ, ನಿರ್ದೇಶಕ ನಾರಾಯಣ್‌, ತಲಕಾಡು ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಬಸವರಾಜು, ಸಂಘದ ಗೋವಿಂದರಾಜು, ಸೋಮಣ್ಣ, ನಟರಾಜು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next