Advertisement

ಸರ್ಕಾರಗಳಿಂದ ತಾರತಮ್ಯ ನೀತಿ: ಡಾ|ವಿಜಯಲಕ್ಷ್ಮೀ

05:15 PM Mar 31, 2018 | Team Udayavani |

ಮಾನ್ವಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗನವಾಡಿ ಕೇಂದ್ರಗಳ ಖಾಸಗೀಕರಣ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿರ ಬಗ್ಗೆ ತಾರತಮ್ಯ ನೀತಿ ಅನುಸರಿಸುತ್ತಿವೆ ಎಂದು ಅಂಗನವಾಡಿ ಫೆಡರೇಷನ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ| ಡಿ.ವಿ.ವಿಜಯಲಕ್ಷ್ಮೀ ಆರೋಪಿಸಿದರು.

Advertisement

ಪಟ್ಟಣದ ಟಿಎಪಿಸಿಎಂಎಸ್‌ ಅವರಣದಲ್ಲಿ ಶುಕ್ರವಾರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್‌ (ಎಐಟಿಯುಸಿ) ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯರ 6ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
 
ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಕೈಬಿಡಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಡ ಮಕ್ಕಳಿಗೆ ಶಿಕ್ಷಣದ ಅರಿವು ಮೂಡಿಸುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಪ್ರಗತಿ ಕಾರ್ಯಗಳಲ್ಲಿ ಕರ್ತವ್ಯ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಸುಮಾರು 18000 ರೂ. ವೇತನ ನೀಡಬೇಕು ಹಾಗೂ ಸೇವೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ 3000 ರೂ. ನಿವೃತ್ತಿ ವೇತನ ನೀಡಬೇಕು. ಆರೋಗ್ಯ, ವೇತನ ಹೆಚ್ಚಳ, ಭದ್ರತೆಗೆ ಆದ್ಯತೆ ನೀಡಬೇಕು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು. ಅಧ್ಯಕ್ಷತೆ ವಹಿಸಿದ್ದ ಅಂಗನವಾಡಿ ಫೆಡರೇಷನ್‌ ರಾಜ್ಯಾಧ್ಯಕ್ಷ ಎಚ್‌.ಕೆ.ರಾಮಚಂದ್ರಪ್ಪ ಅಂಗನಸಿರಿ ಕೈಪಿಡಿ ಬಿಡುಗಡೆ ಮಾಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ಶಿವಣ್ಣ, ರಾಷ್ಟ್ರೀಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಎ.ಜ್ಯೋತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಜಯಮ್ಮ, ಅಂ.ಫೆ. ಜಿಲ್ಲಾಧ್ಯಕ್ಷ ಡಿ.ಎಚ್‌. ಕಂಬಳಿ ಮಾತನಾಡಿದರು. ರಾಷ್ಟ್ರ ಪ್ರಶಸ್ತಿ ವಿಜೇತೆ ಕವಿತಾ ಮಿಶ್ರಾ, ಎಐಟಿಯುಸಿ ಜಿಲ್ಲಾ ಪದಾಧಿಕಾರಿಗಳಾದ ದೇವೇಂದ್ರಪ್ಪ ಪತ್ತಾರ, ಭಾಷುಮಿಯ್ನಾ, ಎಸ್‌.ಎಂ.ಶಫಿ, ಶ್ರೀಶೈಲರೆಡ್ಡಿ, ಶಾಂತಾ ಸೀಕಲ್‌, ಸಂಗಯ್ಯಸ್ವಾಮಿ ಚಿಂಚರಕಿ, ತಾಲೂಕು ಅಧ್ಯಕ್ಷೆ ಕಾಳಮ್ಮ, ಗಿರಿಜಮ್ಮ, ಶಿವಮ್ಮ, ಅಮರಮ್ಮ ಪಾಟೀಲ, ಶಾವಮ್ಮ, ಕೆ.ಮೀರ್‌, ವೀರಬಸಮ್ಮ, ಆದಿಲಕ್ಷ್ಮೀ, ಸವಿತಾ, ಯಂಕಮ್ಮ ನಾಯಕ, ದಾಕ್ಷಾಯಣಿ ಪೋತ್ನಾಳ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next