Advertisement

ವಿವಿಧ ಇಲಾಖೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ

03:23 PM Dec 25, 2020 | Suhan S |

ಮಳವಳ್ಳಿ: ವಿವಿಧ ಇಲಾಖೆಗಳು ನೀಡಿರುವ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸಿದರು.

Advertisement

ಪಟ್ಟಣದಲ್ಲಿ ಅಧ್ಯಕ್ಷೆ ರಾಧಾ ನಾಗರಾಜು ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯ ಆರಂಭದಲ್ಲಿ ಕಾಂಗ್ರೆಸ್‌ ಸದಸ್ಯರಾದ ಶಿವಸ್ವಾಮಿ, ರಾಜಶೇಖರ್‌ ಮತ್ತು ಮಹೇಶ್ವರಿ ಅವರು 14ನೇ ಹಣಕಾಸುಯೋಜನೆಯ ಹಣಕಾಸು ನಿಧಿಯನ್ನು ಪಟ್ಟಣದ 18 ವಾರ್ಡ್‌ಗಳಿಗೆ ಮಾತ್ರ ಹಂಚಿಕೆ ಮಾಡಿದ್ದು, ಉಳಿದ 5 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಸದಸ್ಯರು ಇರುವುದರಿಂದ ಅನುದಾನ ನೀಡದೆ ಮುಖ್ಯಾಧಿಕಾರಿ ಕೆ.ಎಸ್‌. ಗಂಗಾಧರ್‌ ಅವರು, ಶಾಸಕ ಡಾ.ಕೆ.ಅನ್ನದಾನಿ ಅವರ ಕೈಗೊಂಬೆಯಂತೆ ವರ್ತಿಸಿ ತಾರತಮ್ಯ ಮಾಡುತ್ತಿದ್ದು, ಇದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲ ವಾರ್ಡ್‌ ಅಭಿವೃದ್ಧಿ: ಉಪಾಧ್ಯಕ್ಷ  ಟಿ.ನಂದಕುಮಾರ್‌ ಮಾತನಾಡಿ, ಹಿಂದೆಶಾಸಕರಾಗಿದ್ದ ಪಿ.ಎಂ.ನರೇಂದ್ರ ಸ್ವಾಮಿ ಅವರ ಕಾಲದಲ್ಲೂ ಸಾಕಷ್ಟು ತಾರತಮ್ಯ ಮಾಡಿದ್ದು, ಈಗಿನ ಶಾಸಕರು ಎಲ್ಲ ವಾರ್ಡ್‌ ಗಳ ಅಭಿವೃದ್ಧಿಗೆಮುಂದಾಗಿದ್ದಾರೆ ಎಂದರು.

ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷ ಟಿ.ನಂದಕುಮಾರ್‌, ಜೆಡಿಎಸ್‌ ಸದಸ್ಯರಾದಪ್ರಶಾಂತ್‌ ಕುಮಾರ್‌, ಸಿದ್ದರಾಜು ಅವರು ಮುಂದಿನ ದಿನಗಳಲ್ಲಿ ಅನುದಾನ ನೀಡುವ ಭರವಸೆ ನೀಡಿದರು.

ಕಾಮಗಾರಿಯಲ್ಲಿ ಗುಣಮಟ್ಟವಿಲ್ಲ: ಪುರಸಭೆ ವ್ಯಾಪ್ತಿಯಲ್ಲಿ ಕಳೆದ 2 ವರ್ಷ ನಡೆದಿರುವ ಅಭಿವೃದ್ಧಿಕಾಮಗಾರಿಗಳು ಗುಣಮಟ್ಟದಿಂದ ನಡೆದಿಲ್ಲ. ಈ ಸಂಬಂಧ ಗುತ್ತಿಗೆದಾರರ ವಿರುದ್ಧ ಕ್ರಮತೆಗೆದುಕೊಂಡು ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸುಮಾಡಬೇಕು ಎಂದು ಎಲ್ಲ ಸದಸ್ಯರು ಆಗ್ರಹಿಸಿದರು. 9ನೇ ವಾರ್ಡ್‌ನ ಸದಸ್ಯೆ ಸವಿತಾ ಮಾತನಾಡಿ,ತಮ್ಮ ವಾರ್ಡ್‌ನಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸಿ, ಎರಡು ವರ್ಷ ಕಳೆದರೂ ಉದ್ಘಾಟನೆ ಮಾಡಿಲ್ಲ.ಇದರಿಂದ ಜನರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.

Advertisement

ಕೊಳವೆ ಬಾವಿಯಿಂದ ನೀರು ಪೂರೈಕೆ: ಇದಕ್ಕೆಉತ್ತರಿಸಿದ ಮುಖ್ಯಾಧಿಕಾರಿ ಕೆ.ಎಸ್‌.ಗಂಗಾಧರ್‌,ಕಾವೇರಿ ನೀರನ್ನು ನೇರವಾಗಿ ಶುದ್ಧ ನೀರಿನ ಘಟಕಕ್ಕೆಸಂಕರ್ಪ ಕಲ್ಪಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸದ್ಯದಲ್ಲಿಯೇ ಕೊಳವೆ ಬಾವಿಯಿಂದ ನೀರುಪೂರೈಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಸದಸ್ಯ ಪ್ರಶಾಂತ್‌ಕುಮಾರ್‌ ಮಾತನಾಡಿ, ಪುರಸಭೆ ಯಲ್ಲಿ ಇ-ಸ್ವತ್ತು ಮಾಡಿಸಲು ಜನರುಪರದಾಡುತ್ತಿದ್ದು, ಸರ್ಕಾರದಿಂದ ಬಿಡುಗಡೆಯಾಗಿರುವ ಸುತ್ತೋಲೆಯ ಬಗ್ಗೆ ಮಾಹಿತಿ ನೀಡಿ ಎಂದರು.

ಪ್ರಮಾಣ ವಚನ: ಸಭೆ ಆರಂಭದಲ್ಲಿ ಸದಸ್ಯರುಪ್ರಮಾಣ ವಚನ ಸ್ವೀಕರಿಸಿದರು. ಬಹುತೇಕ ಸದಸ್ಯರುದೇವರ ಹೆಸರಿನಲ್ಲಿ ಸ್ವೀಕರಿಸಿದರೆ, ಉಪಾಧ್ಯಕ್ಷಟಿ.ನಂದಕುಮಾರ್‌ ಅವರು ಡಾ.ಅಂಬೇಡ್ಕರ್‌ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಹೆಸರಿನಲ್ಲಿಹಾಗೂ ಇನ್ನು ಕೆಲ ಸದಸ್ಯರು ಡಾ. ಅಂಬೇಡ್ಕರ್‌ ಹೆಸರಿನಲ್ಲಿ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next