Advertisement

SEP ಜಾರಿಯಿಂದ ವಿದ್ಯಾರ್ಥಿಗಳ ನಡುವೆ ತಾರತಮ್ಯ: ಕೋಟ ಶ್ರೀನಿವಾಸ ಪೂಜಾರಿ

11:29 PM Dec 23, 2023 | Team Udayavani |

ಕೋಟ: ರಾಜ್ಯ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯ ಬದಲಿಗೆ ರಾಜ್ಯ ಶಿಕ್ಷಣ ನೀತಿ ಎಸ್‌ಇಪಿಯನ್ನು ಜಾರಿಗೊಳಿಸಿದೆ. ಆದರೆ ಸೆಂಟ್ರಲ್‌ ಸಿಲೆಬಸ್‌ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ನಡುವೆ ತಾರತಮ್ಯ ಉಂಟಾಗಲಿದ್ದು, ರಾಜ್ಯದ ವಿದ್ಯಾರ್ಥಿಗಳು ಕೆಲವು ಸೌಲಭ್ಯದಿಂದ ವಂಚಿತರಾಗಲಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಕಾವಡಿ ಸ. ಹಿ. ಪ್ರಾ. ಶಾಲೆಯಲ್ಲಿ ಡಿ. 23ರಂದು ಜರಗಿದ ಶತಮಾನೋತ್ಸವ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಸಂಕಷ್ಟದಲ್ಲಿ ಸರಕಾರಿ ಶಾಲೆಗಳು
ರಾಜ್ಯದಲ್ಲಿ 48 ಸಾವಿರ ಸರಕಾರಿ ಶಾಲೆಗಳಿದ್ದು, 22 ಸಾವಿರ ಕೋಟಿ ರೂ. ಅನುದಾನವನ್ನು ಇದಕ್ಕಾಗಿ ಸರಕಾರ ವರ್ಷಕ್ಕೆ ಖರ್ಚು ಮಾಡುತ್ತಿದೆ. ಆದರೂ ಮುಂದಿನ 10 ವರ್ಷದಲ್ಲಿ ವಿದ್ಯಾರ್ಥಿ ಗಳ ಕೊರತೆಯಿಂದ 5 ಸಾವಿರಕ್ಕೂ ಹೆಚ್ಚು ಶಾಲೆಗಳು ಮುಚ್ಚಲಿವೆ. ಸರಕಾರಿ ಶಾಲೆಗಳ ಉಳಿವಿಗೆ ಎಲ್ಲರೂ ಪಣತೊಡ ಬೇಕಿದೆ. ಶತಮಾನೋತ್ಸವ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿದೆ ಎಂದರು.

ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಶುಭ ಹಾರೈಸಿದರು.ನಿವೃತ್ತ ಪ್ರಾಂಶುಪಾಲ ಬಿ. ಸೀತಾರಾಮ ಶೆಟ್ಟಿ ಶತಮಾನೋತ್ಸವ ಸ್ಮರಣ ಸಂಚಿಕೆಯ ಮುಖಪುಟದ ರಕ್ಷಾಕವಚ ಬಿಡುಗಡೆಗೊಳಿಸಿದರು. ಹವರಾಲು ಮಹಾಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ.ಉದಯಚಂದ್ರ ಶೆಟ್ಟಿ ಹಾಗೂ ದಾನಿಗಳಾದ ಪ್ರಪುಲ್ಲ ಜೆ. ಶೆಟ್ಟಿ ಚಾಂಪಾಡಿ ಬಾಲವನ ಉದ್ಘಾಟಿಸಿದರು. ವಡ್ಡರ್ಸೆ ಗ್ರಾ. ಪಂ. ಅಧ್ಯಕ್ಷ ಲೋಕೇಶ್‌ ಕಾಂಚನ್‌ ಅಧ್ಯಕ್ಷತೆ ವಹಿಸಿದ್ದರು.

ಎಸ್‌ಡಿಎಂಸಿ ಅಧ್ಯಕ್ಷ ಗುರುರಾಜ್‌ ಕಾಂಚನ್‌, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮನಾಭ ಕಾಂಚನ್‌, ಮಂದಾರ್ತಿ ವಲಯ ಶಿಕ್ಷಣ ಸಂಯೋಜಕ ರಾಘವ ಶೆಟ್ಟಿ, ವಕೀಲ ಪ್ರಸಾದ್‌ ಹೆಗ್ಡೆ, ದಾನಿಗಳಾದ ಡಾ| ವಸಂತ್‌ ಶೆಟ್ಟಿ, ಬಾಬಣ್ಣ ಎಸ್‌. ಅಲ್ಸೆಬೆಟ್ಟು, ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಶಿವರಾಮ ಶೆಟ್ಟಿ (ಭೂಮಿಕಾ), ಕಾವಡಿ, ಉಲ್ಲಾಸ್‌ ಕುಮಾರ್‌ಶೆಟ್ಟಿ, ಕಾವಡಿ, ಉಪಾಧ್ಯಕ್ಷರಾದ ಮಂಜುನಾಥ ಹೆಬ್ಟಾರ್‌, ನೀಲಕಂಠ ರಾವ್‌, ಲೀಲಾವತಿ ಶೆಟ್ಟಿ, ಸುನೀಲ್‌ ಕುಮಾರ್‌ ಶೆಟ್ಟಿ, ಸುರೇಶ್‌ ಶೆಟ್ಟಿ, ಸುಧಾಕರ್‌ ಜಿ. ಕಾಂಚನ್‌ , ನಾರಾಯಣ ಪೂಜಾರಿ, ಸುಕುಮಾರ್‌ ಶೆಟ್ಟಿ, ಜತೆ ಕಾರ್ಯದರ್ಶಿ ಯೋಗೀಶ್‌ ಎಂ. ಶೆಟ್ಟಿ, ಖಜಾಂಚಿ ಅಶೋಕ್‌ ಕುಮಾರ್‌ಶೆಟ್ಟಿ ಹೆಗ್ಡೆ ಹೌಸ್‌, ಜತೆ ಖಜಾಂಚಿ ನಾಗರಾಜ ಇದ್ದರು.

Advertisement

ಶತಮಾನೋತ್ಸವ ಸಮಿತಿ ಅಧ್ಯಕ್ಷ ಕೆ.ಚಂದ್ರಶೇಖರ ಶೆಟ್ಟಿ ಸ್ವಾಗತಿಸಿ, ದೈ. ಶಿಕ್ಷಣ ಶಿಕ್ಷಕ ಸತೀಶ್‌ ಕುಮಾರ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next