Advertisement
ಅಂಗಡಿ ಮುಂಗಟ್ಟುಗಳಲ್ಲಿ ಶೇ.50ರಷ್ಟು ಡಿಸ್ಕೌಂಟ್ ಘೋಷಿಸಿದ್ದರೆ, ಫ್ಲಿಪ್‌ಕಾರ್ಟ್, ಅಮೆಜಾನ್ ಸೇರಿದಂತೆ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಶೇ.80ರ ವರೆಗೆ ವಿವಿಧ ವಸ್ತುಗಳಿಗೆ ರಿಯಾಯಿತಿ ಘೋಷಣೆ ಮಾಡಿದ್ದಾರೆ.ಶೇ.40ರಷ್ಟು ರಿಯಾಯಿತಿ: ಗೃಹೋಪಯೋಗಿ ವಸ್ತುಗಳಾದ ಟಿವಿ, ಪ್ರಿಡ್ಜ್, ಎ.ಸಿ. ವಾಷಿಂಗ್ ಮೆಷಿನ್‌ಗಳ ಮೇಲೆ ಶೇ.20-ಶೇ.40ರ ವರೆಗೆ ರಿಯಾಯಿತಿ ಇದೆ.
Related Articles
Advertisement
ವಾರ್ಡ್‌ರೋಬ್ ರಿಫ್ರೆಶ್: ಸಿದ್ಧ ಉಡುಪು ಮತ್ತಿತ್ರ ಬ್ರಾಂಡೆಡ್ ವಸ್ತುಗಳ ಮೇಲೆ ಶೇ.18ರಷ್ಟು ತೆರಿಗೆ ಹಾಕಲು ನಿರ್ಧರಿಸಿರುವುದರಿಂದ ಜನಪ್ರಿಯ ಬ್ರಾಂಡ್‌ಗಳಾದ ವುಡ್‌ಲ್ಯಾಂಡ್ ಬಿಬಾ, ವ್ಯಾನ್ ಹ್ಯೂಸೆನ್, ಅಲೆನ್ ಸಾಲಿ ಮತ್ತಿತರ ಬ್ರಾಂಡ್‌ಗಳು ತಮ್ಮ ವಸ್ತುಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿವೆ.
ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿಯೂ ಉಡುಗೆ-ತೊಡುಗೆ, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹೆಚ್ಚಿನ ಎಲ್ಲ ಐಟಂಗಳನ್ನು ಫ್ಲಿಪ್ ಕಾರ್ಟ್, ಅಮೆಜಾನ್‌ನಲ್ಲಿ ಶೇ.60ರಿಂದ ಶೇ.80ರ ವರೆಗೆ ರಿಯಾಯಿತಿ ನೀಡಲಾಗಿದೆ. ಅಮೆಜಾನ್‌ನಲ್ಲಿ ಅದಕ್ಕೆ “ವಾರ್ಡ್‌ರೋಬ್ ರಿಫ್ರೆಶ್ ‘ ಎಂದು ಹೆಸರಿಸಲಾಗಿದೆ. ಮಿಂತ್ರಾದಲ್ಲಿ ಶೀಘ್ರದಲ್ಲಿಯೇ ಆರನೇ ಆವೃತ್ತಿಯ “ಎಂಡ್ ಆಫ್ ಸೀಸನ್ ಸೇಲ್’ ಶುರುವಾಗಿ, ಭಾರಿ ಜನಪ್ರಿಯತೆ ಗಳಿಸಿದೆ.
ಆಫರ್‌ಗಳ ಝಲಕ್ಪ್ರಮುಖ ಉಡುಗೆ ತೊಡುಗೆಗಳ ಬ್ರಾಂಡ್‌ಗಳಲ್ಲಿ
ನೈಕ್- ಕೆಲ ವಸ್ತುಗಳ ಮೇಲೆ ಶೇ.50ರಷ್ಟು ರಿಯಾಯಿತಿ.
ಇನ್ನು ಕೆಲವು ಪಾದರಕ್ಷೆಗಳ ಮೇಲೆ ಶೇ.25-35 ಡಿಸ್ಕೌಂಟ್
ಲಿವೈಸ್- ಎಲ್ಲ ಮಾದರಿ ಜೀನ್ಸ್ ಮೇಲೆ ಫ್ಲಾಟ್ ಶೇ.40 ರಿಬೇಟುಕೆಲವು ದಿರಿಸು ಕೊಂಡರೆ ಶೇ.50 ರಿಯಾಯಿತಿ
ಪುಮಾ- ಶೇ.40
ಆ್ಯರೋ- ಎರಡು ಶರ್ಟ್ ಕೊಂಡರೆ 2 ಉಚಿತ
ಐದಕ್ಕಿಂತ ಹೆಚ್ಚು ಶರ್ಟ್ ಕೊಂಡರೆ ಟೋಟಲ್ ಬಿಲ್‌ನಲ್ಲಿ ಶೇ.40ರಷ್ಟು ರಿಯಾಯಿತಿ ಶೇ.80ರ ವರೆಗೆ ಡಿಸ್ಕೌಂಟ್ ನೀಡಿದ್ದರಿಂದ 20 ಮಿಲಿಯ ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಾರೆಂಬ ವಿಶ್ವಾಸವಿದೆ. ಇಷ್ಟು ಮಾತ್ರವಲ್ಲದೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.18ರಷ್ಟು ಮಾರಾಟ ಹೆಚ್ಚಾಗಿದೆ. ಪ್ರತಿ ದಿನ 3 ಲಕ್ಷ ವಸ್ತುಗಳನ್ನು ಗ್ರಾಹಕರಿಗೆ ನೀಡಲು ನಿರ್ಧರಿಸಿದ್ದೇವೆ.
– ಅನಂತ ನಾರಾಯಣ, ಮಿಂತ್ರಾ-ಜಬಂಗ್ ಸಿಇಓ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿರುವ ಆ್ಯರೋ ಶರ್ಟ್ ಶೋರೂಮ್‌ನ ಸ್ಟೋರ್ ಮ್ಯಾನೇಜರ್ ಜೀವನ್ ಕುಮಾರ್ ಹೇಳುವುದೇ ಬೇರೆ. ಹಿಂದಿನ ವರ್ಷದಂತೆ ಈ ವರ್ಷವೂ ಕಂಪನಿ ವತಿಯಿಂದ ಶೇ.40ರಷ್ಟು ರಿಯಾಯಿತಿ ಕೊಡಲಾಗಿದೆ. ಸಾಮಾನ್ಯವಾಗಿ ಬೇಸಗೆ ಮುಕ್ತಾಯವಾಗಿ ಮಳೆಗಾಲ ಬರುತ್ತಿರುವಂತೆ ಹಳೆಯ ಸಂಗ್ರಹ ಮುಗಿಸಲು ಕಂಪನಿ ವಿವಿಧ ರೀತಿಯ ದುಸ್ತುಗಳ ಮೇಲೆ ಡಿಸ್ಕೌಂಟ್ ನೀಡುತ್ತೇವೆ. ಹೊಸತಾಗಿ ಜಾರಿಯಾಲಿರುವ ವ್ಯವಸ್ಥೆ ಮತ್ತು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಭರಪೂರ ಡಿಸ್ಕೌಂಟ್‌ಗೆ ಹೆಚ್ಚಿನ ಅರ್ಥ ಕಲ್ಪಿಸುವುದು ಬೇಡ ಎಂದು “ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಪ್ಯಾಂಟಲೂನ್ಸ್ ಮಳಿಗೆಯಲ್ಲಿ ಮಾರುಕಟ್ಟೆ ಮೌಲ್ಯ 10 ಸಾವಿರ ರೂ.ಗಳಷ್ಟು ಖರೀದಿ ಮಾಡಿದರೆ, 5 ಸಾವಿರ ರೂ.ಗಳಷ್ಟು ಆಫರ್ ಕೊಡುತ್ತಿದ್ದಾರೆ. ಮುಂದಿನ ತಿಂಗಳ 1ರಿಂದ ಜಿಎಸ್‌ಟಿ ಜಾರಿ ಹಿನ್ನೆಲೆಯಲ್ಲಿ ಇಂಥ ಡಿಸ್ಕೌಂಟ್ ಸೇಲ್ ಮಾಡುತ್ತಿದ್ದಿರಾ ಎಂಬ ಪ್ರಶ್ನೆಗೆ ಮಳಿಗೆಯ ಜಾಣತನದಿಂದ ಉತ್ತರಿಸಿದ ಮಳಿಗೆಯ ಅಧಿಕಾರಿ, ನವದೆಹಲಿ. ಮುಂಬೈ, ಗುರುಗಾಂವ್‌ನಲ್ಲಿಯೂ ಇದೇ ಮಾದರಿ ಆಫರ್ ಇದೆ ಎಂದು ಹೇಳಿದ್ದಾರೆ.ಆದರೆ ನವದೆಹಲಿ, ಮುಂಬೈನಲ್ಲಿರುವ ಜನಪ್ರಿಯ ಬ್ರಾಂಡ್‌ಗಳಾಗಿರುವ ನೈಕ್, ಲಿವೈಸ್, ಅಡಿಡಾಸ್, ಪೂಮಾ, ಆ್ಯರೋ ಗಳ ಪ್ರಧಾನ ಕಚೇರಿಗಳಿಂದಲೇ ಭಾರಿ ಪ್ರಮಾಣದ ಡಿಸ್ಕೌಂಟ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮುಂದಿನ ತಿಂಗಳಿನಿಂದ ಹೊಸ ತೆರಿಗೆ ವ್ಯವಸ್ಥೆ ಜಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಶೇ.80ರ ವರೆಗೆ ಡಿಸ್ಕೌಂಟ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿವೆ. ಜಿಎಸ್‌ಟಿ ಜಾರಿಯಿಂದ ವಸ್ತುಗಳ ದರದಲ್ಲಿ ಏರಿಕೆಯಾಗುತ್ತದೆ ಎಂಬ ಹೆದರಿಕೆ ಬೇಡ. ಅಗತ್ಯ ವಸ್ತುಗಳು, ಅನುಕೂಲಕರ ಮತ್ತು ಐಷಾರಾಮಿ ಎಂದು ವಿಭಾಗಿಸಿದ್ದರಿಂದ ಜನರಿಗೆ ತೊಂದರೆ ಏನೂ ಆಗದು. ಸದ್ಯ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಡಿಸ್ಕೌಂಟ್ ಸೇಲ್ ಮುಂದಿನ ವ್ಯವಹಾರಗಳಿಗೆ ಅನುಕೂಲವಾಗಲಿ ಎಂದು ನಡೆಯುತ್ತಿದೆ.
– ರಮೇಶ್ ಕಟ್ಟಾ, ಚಾರ್ಟರ್ಡ್ ಅಕೌಂಟೆಂಟ್ ಸದ್ಯಕ್ಕೆ ಜಿಎಸ್‌ಟಿಯಿಂದ ದರ ಏರಿಕೆಯಾಗಲಾರದು ಎಂದು ಮೇಲ್ನೋಟಕ್ಕೆ ಕಂಡರೂ ವಸ್ತು ಸ್ಥಿತಿ ಹಾಗೆ ಇರದು. ನಿಜಕ್ಕೂ ಹೇಳುವುದಾದರೆ, ಹೊಸ ತೆರಿಗೆ ಪದ್ಧತಿ ಜಾರಿಗೆ ಪೂರ್ಣ ಪ್ರಮಾಣದ ಸಿದ್ಧತೆಯೇ ನಡೆದಿಲ್ಲ ಎಂದು ಕಾಣುತ್ತದೆ.
– ಕೆ.ಈಶ್ವರ ಭಟ್, ಷೇರುಪೇಟೆ ತಜ್ಞ. – ಸದಾಶಿವ ಖಂಡಿಗೆ