Advertisement

ನಾರಾಯಣ ಹೃದಯಾಲಯದ ವೈಟ್‌ಫೀಲ್ಡ್‌ನ ಘಟಕದ ಕಾರ್ಯ ಸ್ಥಗಿತ

09:57 AM Nov 10, 2019 | sudhir |

ಹೃದಯ ಶಸ್ತ್ರ ಚಿಕಿತ್ಸೆಗೆ ಹೆಸರುವಾಸಿಯಾಗಿದ್ದ ನಾರಾಯಣ ಹೃದಯಾಲಯಕ್ಕೆ ಸಂಕಷ್ಟಕ್ಕೆ ಎದುರಾಗಿದ್ದು, ಬೆಂಗಳೂರಿನ ವೈಟ್‌ಫಿಲ್ಡ್‌ನಲ್ಲಿರುವ ಘಟಕವನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.

Advertisement

2013 ರಲ್ಲಿ ನಗರದ ವೈಟ್‌ಫೀಲ್ಡ್‌ನಲ್ಲಿ ನಾರಾಯಣ ಹೃದಯಾಲದ ಘಟಕವೊಂದನ್ನು ಸ್ಥಾಪನೆ ಮಾಡಿ ಉತ್ತಮ ದರ್ಜೆಗೆ ಏರಿಸಲಾಗಿತು. ಸುಮಾರು 9ಕ್ಕೂ ಹೆಚ್ಚು ಕಾರ್ಯಾಚರಣಾ ಹಾಸಿಗೆಗಳೊಂದಿಗೆ 1.1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಘಟಕವನ್ನು ನಿರ್ಮಿಸಲಾಗಿತ್ತು.

ಆದರೆ ಹೃದಯ ಹಾಗೂ ಓಂಕಾಲಾಜಿ ವಿಭಾಗವನ್ನು ಹೊರತು ಪಡಿಸಿ ಜನರಲ್‌ ವಿಭಾಗ ಹಾಗೂ ಅಲ್ಪಾವಧಿಯ ಘಟಕಗಳಲ್ಲಿ ಜನಸಂದಣಿ ಇಳಿಕೆಯಾಗಿದೆ. ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫ‌ಲಗೊಂಡಿದ್ದು, ವಿವಿಧ ಕಾರಣಗಳಿಗಾಗಿ ಘಟಕವನ್ನು ಮುಚ್ಚುತ್ತಿರುವುದಾಗಿ ಸಂಸ್ಥೆ ತಿಳಿಸಿದೆ.

ಕಂಪನಿಯ ಹೂಡಿಕೆದಾರರು ನೀಡಿರುವ ಪ್ರಕಾರ ನಾರಾಯಣ ಹೃದಯಾಲಯ ಒಡೆತನದಲ್ಲಿ ಒಟ್ಟು 21 ಆಸ್ಪತ್ರೆಗಳನ್ನು ಹೊಂದಿದ್ದು, ಇದರ ಜೊತೆಗೆ ಇತರೆ ಎರಡು ಆಸ್ಪತ್ರೆಗಳನ್ನು ನಿರ್ವಹಿಸುತ್ತಿದೆ. ಇದರೊಂದಿಗೆ ಏಳು ಹೃದಯ ಕೇಂದ್ರಗಳು, 19 ಪ್ರಾಥಮಿಕ ಆರೋಗ್ಯ ಸೌಲಭ್ಯ ಕೇಂದ್ರಗಳು ಮತ್ತು ಕೇಮನ್‌ ದ್ವೀಪ ಪ್ರದೇಶದಲ್ಲಿ ಒಂದು ಆಸ್ಪತ್ರೆ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next