ಹೊಸದಿಲ್ಲಿ : ಉತ್ತರ ಮತ್ತು ಈಶಾನ್ಯ ದಿಲ್ಲಿಯಲ್ಲಿನ ಸುಮಾರು 70 ಲಕ್ಷ ಬಳಕೆದಾರರಿಗೆ ವಿದ್ಯುತ್ ಪೂರೈಸುವ ಪವರ್ ಡಿಸ್‌ಕಾಮ್ ಟಿಪಿಡಿಡಿಎಲ್ ಕಂಪೆನಿ ತನಗೆ ವಿದ್ಯುತ್ ಕಳ್ಳತನದಿಂದಾಗಿ 150 ಕೋಟಿ ರೂ.ಗಳ ವಾರ್ಷಿಕ ನಷ್ಟ ಉಂಟಾಗಿದೆ ಎಂದು ಹೇಳಿಕೊಂಡಿದೆ.
ನರೇಲಾ ಮತ್ತು ಬವಾನಾ ಪ್ರದೇಶಗಳಲ್ಲಿನ 24 ಗ್ರಾಮಗಳ ವಿದ್ಯುತ್ ಪೂರೈಕೆಯಲ್ಲಿ ತನಗೆ ಶೇ.50ರಿಂದ ಶೇ.60ರಷ್ಟು ತಾಂತ್ರಿಕ ಮತ್ತು ವಾಣಿಜ್ಯ ನಷ್ಟ ಉಂಟಾಗಿದೆ ಎಂದು ಕಂಪೆನಿಯು ಹೇಳಿಕೊಂಡಿದೆ.
ಹಾಗಿದ್ದರೂ 2002ರಲ್ಲಿ ದಿಲ್ಲಿ ವಿದ್ಯುತ್ ಮಂಡಳಿಯಿಂದ ತಾನು ಕಾರ್ಯಭಾರವನ್ನು ವಹಿಸಿಕೊಂಡ ಬಳಿಕದಲ್ಲಿ ಈ ವರೆಗೆ ಒಟ್ಟಾರೆ ತಾಂತ್ರಿಕ ಮತ್ತು ವಾಣಿಜ್ಯ ನಷ್ಟವನ್ನು ಶೇ.53ಕ್ಕೆ ಇಳಿಸಿರುವುದಾಗಿ ಟಿಪಿಡಿಡಿಎಲ್ ಹೇಳಿದೆ.