Advertisement

ಅಶಿಸ್ತು: ಸೈನಿಗೆ ಅಪಮೌಲ್ಯ ಅಂಕ

01:48 AM Aug 06, 2019 | Sriram |

ಲಾಡರ್‌ಹಿಲ್‌: ಮೊದಲ ಟಿ20 ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ್ದ ಬೌಲರ್‌ ನವದೀಪ್‌ ಸೈನಿ ಐಸಿಸಿ ನಿಯಮ ಉಲ್ಲಂ ಸಿರುವುದಕ್ಕೆ ಒಂದು ಅಪಮೌಲ್ಯ ಅಂಕದ ದಂಡಕ್ಕೆ ಗುರಿಯಾಗಿದ್ದಾರೆ.

Advertisement

ಮೊದಲ ಟಿ20 ಪಂದ್ಯದಲ್ಲಿ ನಿಕೋಲಸ್‌ ಪೂರನ್‌ ಅವರನ್ನು ಔಟ್‌ ಮಾಡಿದ್ದ ವೇಳೆ ಸೈನಿ ಅಶಿಸ್ತು ಪ್ರದರ್ಶಿಸಿದ್ದರು. ಆಕ್ರಮಣಕಾರಿಯಾಗಿ ವರ್ತಿಸಿ ನಿಯಮ ಗಾಳಿಗೆ ತೂರಿದ್ದರು. ಬಳಿಕ ತನ್ನ ತಪ್ಪನ್ನು ಸೈನಿ ಒಪ್ಪಿಕೊಂಡಿದ್ದರಿಂದ ಪಂದ್ಯದ ಸಂಭಾವನೆ ಕಡಿತಕ್ಕೆ ಗುರಿಯಾಗುವುದು ಅಥವಾ ಒಂದು ಪಂದ್ಯ ಅಮಾನತಿಗೆ ಒಳಗಾಗು ವುದರಿಂದ ತಪ್ಪಿಸಿಕೊಂಡಿದ್ದಾರೆ. ನವದೀಪ್‌ ಪದಾರ್ಪಣೆ ಪಂದ್ಯ ದಲ್ಲೇ ಈ ರೀತಿಯ ದಂಡಕ್ಕೆ ಒಳಗಾಗಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next