Advertisement
ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ| ನರೇಂದ್ರ ಎಲ್. ನಾಯಕ್,ಇಂದಿನ ಯುವ ಜನಾಂಗದವರು ವ್ಯಾಸಂಗದಲ್ಲಿ ಆಸಕ್ತಿ ತೋರಿಸಿ ವಿದ್ಯಾಬ್ಯಾಸದ ಜತೆಗೆ ಶಿಸ್ತು ಮತ್ತು ಸಾಮ್ಯತೆಯನ್ನು ಬೆಳೆಸಿ ಕೊಳ್ಳಬೇಕು. ಗುರು-ಹಿರಿಯರಿಗೆ ಗೌರವ ಸಲ್ಲಿಸುವ ಪ್ರಾಮುಖ್ಯವನ್ನು ಯುವ ಪೀಳಿಗೆಯಲ್ಲಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಡೀನ್ ಡಾ| ಎಸ್.ಎಂ. ಶಿವಪ್ರಕಾಶ್ ಮಾತನಾಡಿ, ವಿದ್ಯಾರ್ಥಿ ಜೀವನ ನಮಗೆಲ್ಲರಿಗೂ ಆ ದೇವರು ಕೊಟ್ಟ ವರ ಮತ್ತು ಮರೆಯಲಾಗದಂಥಹ ಸಮಯ. ಅದೇ ರೀತಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಜೀವನದ ರೂಪುರೇಖೆಗಳನ್ನು ರಚಿಸುವರೇ ಆದರೆ ಅದು ಇಂತಹ ಕಾಲೇಜು ಮಟ್ಟದಲ್ಲಿ ಸಾಧ್ಯ ಎಂದರು.
Related Articles
Advertisement
ಸಿಬಂದಿ ಸಲಹೆಗಾರರಾದ ಮನೋಜ್ ಕುಮಾರ್ ಆಟೋಟ ಸ್ಪರ್ಧೆಗಳನ್ನು ನಡೆಸಿದ ವರದಿಯನ್ನು ಮಂಡಿಸಿದರು. ಡಾ| ಸುರೇಶ್ ಟಿ. ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ತೃತಿಯ ಬಿ.ಎಫ್.ಎಸ್ಸಿ. ವಿದ್ಯಾರ್ಥಿ ಗಳಾದ ವೇವ್ ರೈಡರ್ಸ್ ಕಾಲೇಜಿನ ವಾರ್ಷಿಕ ದಿನಾಚರಣೆಯ ನಾಮಾಂಕಿ ತವಾದ ಸ್ವರ್ಣ ತರಂಗದ ಮುಖ್ಯ ಭೂಮಿಕೆಯನ್ನು ವಹಿಸಿದ್ದರು.
ವಿಜೇತರುದ್ವಿತೀಯ ಬಿ.ಎಫ್.ಎಸ್ಸಿ.ಯ ವಿದ್ಯಾ ರ್ಥಿಗಳು ಸಾಂಸ್ಕೃತಿಕ, ಆಟೋಟ ಸ್ಪರ್ದೆಗಳಲ್ಲಿ ಮೊದಲ ವಿಜೇತರರಾಗಿ ಬಹುಮಾನ ಸ್ವೀಕರಿಸಿದರೆ, ತೃತೀಯ ಬಿ.ಎಫ್.ಎಸ್ಸಿ. ವಿದ್ಯಾರ್ಥಿಗಳು ದ್ವಿತೀಯ ವಿಜೇತರಾಗಿ ಬಹುಮಾನ ಸ್ವೀಕರಿಸಿದರು.ವಿದ್ಯಾರ್ಥಿನಿ ಪೂರ್ಣಾ ಶ್ರೀ ಮತ್ತು ವಿದ್ಯಾರ್ಥಿ ಪುನೀತ್ ಕುಮಾರ್ ನಿರೂಪಿಸಿದರು. ನಿರ್ಮಿತಾ ಉಚ್ಚಿಲ್ ವಂದಿಸಿದರು. ಬಹುಮಾನ ವಿತರಣೆ
ಸಾಂಸƒತಿಕ ಮತ್ತು ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಕಾಲೇಜಿನ ಸಿಬಂದಿ ವರ್ಗ ಮತ್ತು ವಿದ್ಯಾರ್ಥಿ ವೃಂದದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಈ ವೇಳೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ ಮತ್ತು ಕೃಷಿ ವಿಜ್ಞಾನ ಕೇಂದ್ರದ ಪ್ರಧಾನ ವಿಜ್ಞಾನಿ, ಮುಖ್ಯಸ್ಥ ಡಾ| ಎ.ಟಿ. ರಾಮಚಂದ್ರ ನಾಯ್ಕ ಪಾಲ್ಗೊಂಡಿದ್ದರು.