Advertisement

ಶಿಸ್ತುಬದ್ಧ ಮಕ್ಕಳ ಯಕ್ಷಸಪ್ತಾಹ

06:53 PM Jul 18, 2019 | Team Udayavani |

ಉದ್ಯಮಿ ಹರಿ ರಾವ್‌ ಮತ್ತು ಅವರ ಪುತ್ರ ಪ್ರಸನ್ನ ರಾವ್‌ “ಮಕ್ಕಳ ಪ್ರತಿಭೆಗೊಂದು ಅವಕಾಶ’ ಎಂಬ ಸದಾಶಯದೊಂದಿಗೆ ತಮ್ಮ ಶ್ರೀ ರಾಮ ಕಲಾ ವೇದಿಕೆ ವತಿಯಿಂದ ಶ್ರೀ ರಾಮ ಸಭಾಂಗಣದಲ್ಲಿ ಸಂಯೋಜಿಸಿದ ಸಪ್ತದಿನ ಮಕ್ಕಳ ಯಕ್ಷಗಾನ ವೈಭವ ಕಾರ್ಯಕ್ರಮವು ಸಮರ್ಪಕವಾದ ಪ್ರದರ್ಶನ, ಅಚ್ಚುಕಟ್ಟಾದ ವ್ಯವಸ್ಥೆ, ಪ್ರೀತಿಯ ಆದರಾತಿಥ್ಯ, ಪ್ರತಿ ತಂಡದ ಪ್ರಮುಖರಿಗೆ ಗೌರವಾರ್ಪಣ, ಸಭಾ ಸಮಾರಂಭ ಮತ್ತು ಸಮಯ ಪರಿಪಾಲನೆಗಳಿಂದಾಗಿ ಅತ್ಯಂತ ಯಶಸ್ವಿ ಎನಿಸಿತು.

Advertisement

ಕ್ರಮವಾಗಿ “ಶ್ರೀ ಪಾಂಚಜನ್ಯ’ (ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು), “ವೀರ ವರ್ಮ ಕಾಳಗ’ (ಶ್ರೀಶಾ ಯಕ್ಷಗಾನ ತರಬೇತಿ ಕೇಂದ್ರ ತಳಕಲ ಬಜಪೆ), “ಶಿವಭಕ್ತ ವೀರಮಣಿ’ (ಯಕ್ಷರಾಧನ ಕಲಾ ಕೇಂದ್ರ ಉರ್ವ), “ಶ್ರೀ ಕೃಷ್ಣ ಲೀಲಾಮೃತ’ (ಶುಭ ವರ್ಣ ಯಕ್ಷ ಸಂಪದ ಮರಕಡ) “ಅತಿಕಾಯ – ಇಂದ್ರಜಿತು ಕಾಳಗ’ (ಯಕ್ಷ ಕಲಾ ಸಂಘ ವರಕೋಡಿ ಬಂಟ್ವಾಳ) “ಯೋಗಿನಿ ಸಂಧಾನ’ (ಶ್ರೀ ಮಹಾಲಿಂಗೇಶ್ವರ ಯಕ್ಷ ಕಲಾ ಸಂಘ ರಾಯಿ) ಕೊನೆಯ ದಿವಸ ಯಕ್ಷ-ಗಾನ ವೈಭವ ಮತ್ತು ಗುರುಪುರ ಕೈಕಂಬದ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ತರಬೇತಿ ಕೇಂದ್ರದ ರಕ್ಷಿತ್‌ ಶೆಟ್ಟಿ ಪಡ್ರೆ ಶಿಷ್ಯ ವೃಂದದವರಿಂದ “ಮೀನಾಕ್ಷಿ ಕಲ್ಯಾಣ – ನರಕಾಸುರ ವಧೆ’ ಯಕ್ಷಗಾನಗಳು ಪ್ರದರ್ಶನಗೊಂಡವು.

ಗುರುಪುರ ಕೈಕಂಬದ ಈ ಪರಿಸರದಲ್ಲಿ ಪ್ರಥಮ ಬಾರಿ ಜರಗಿದ ಈ ಮಕ್ಕಳ ಯಕ್ಷಗಾನ ಸಪ್ತಾಹದಲ್ಲಿನ ಮಕ್ಕಳ ಅಭಿನಯದ ಚೆಲುವು, ನಿರೂಪಣೆ ಉತ್ಸಾಹಗಳು ನಮ್ಮ ಯಕ್ಷಗಾನ ಕಲೆಗೆ ಸುಂದರವಾದ ಭವಿಷ್ಯವಿದೆ ಎಂಬ ವಿಶ್ವಾಸ ಮೂಡಿಸಿತು.

ರಮೇಶ್‌ ರಾವ್‌ ಕೈಕಂಬ

Advertisement

Udayavani is now on Telegram. Click here to join our channel and stay updated with the latest news.

Next