ಹಾಸನ: ಜಿಲ್ಲಾಧಿಕಾರಿ ಅಕ್ರಂಪಾಷಾ ತಮ್ಮ ಕಚೇರಿಯ ವಿವಿಧ ವಿಭಾಗಗಳಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿ ಸಕಾಲಕ್ಕೆ ಕಚೇರಿಗೆ ಆಗಮಿಸದ ಅಧಿಕಾರಿಗಳು ಮತ್ತು ನೌಕರರನ್ನು ತರಾಟೆಗೆ ತೆಗೆದುಕೊಂಡರು.
ಓಡೋಡಿ ಬಂದರು: ಬೆಳಗ್ಗೆ 10 ಗಂಟೆಗೆ ಕಚೇರಿಗೆ ಹಾಜರಾದ ಅಕ್ರಂಪಾಷಾ, ತಮ್ಮ ಕಚೇರಿ ಸಂಕೀರ್ಣದ ವಿವಿಧ ಕೊಠಡಿಗಳಿಗೆ ಭೇಟಿ ನೀಡಿದಾಗ ಬಹುಪಾಲು ಅಧಿಕಾರಿ ಗಳು ಮತ್ತು ನೌಕರರು ಕಚೇರಿಗೆ ಬಾರದಿ ದ್ದರಿಂದ ಕುರ್ಚಿಗಳು ಖಾಲಿ ಇದ್ದವು. ಕೆಲವು ಕೊಠಡಿಗಳಲ್ಲಿ ಒಬ್ಬ ನೌಕರನೂ ಇಲ್ಲದಿದ್ದನ್ನು ಕಂಡು ಆಕ್ರೋಶಗೊಂಡ ಜಿಲ್ಲಾಧಿಕಾರಿ, ಕಚೇರಿಗೆ ನಿಗದಿತ ಸಮಯಕ್ಕೆ ಬಾರದ ಅಧಿ ಕಾರಿಗಳು ಮತ್ತು ನೌಕರರ ಮಾಹಿತಿ ಸಂಗ್ರಹಿಸಿದರು. ಜಿಲ್ಲಾಧಿಕಾರಿ ಅವರು ಪರಿವೀಕ್ಷಣೆ ಮಾಡುತ್ತಿರುವ ವಿಷಯ ತಿಳಿದು ಓಡೋಡಿ ಬಂದ ಕೆಲವು ಅಧಿಕಾರಿ ಗಳು ಹಾಗೂ ನೌಕ ರರ ಮಾಹಿತಿ ಪಡೆದ ಜಿಲ್ಲಾಧಿಕಾರಿಯವರು ಶನಿವಾರದಿಂದ ನಿಗದಿತ ಸಮಯ ದೊಳಗೆ ಕಚೇರಿಯಲ್ಲಿ ಹಾಜರಿರದಿದ್ದರೆ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ನಿಗಾವಹಿಸಿ: ನೌಕರರು ಸಕಾಲದಲ್ಲಿ ಕಚೇರಿಗೆ ಆಗಮಿಸದಿದ್ದರಿಂದ ಸಾರ್ವಜನಿ ಕರು ಸ್ಪಂದನ ಕೇಂದ್ರ, ಆಧಾರ್ ಕೇಂದ್ರದಲ್ಲಿ ಕಾಯುತ್ತಿದ್ದಾರೆ ಎಂದು ಹೇಳಿದ ಜಿಲ್ಲಾಧಿ ಕಾರಿ ಅಕ್ರಂಪಾಷಾ, ಸಾರ್ವಜನಿಕರಿಗೆ ತೊಂದರೆ ಆಗದಂತೆ ನೌಕರರು ನಿಗಾವಹಿಸ ಬೇಕು ಎಂದು ತಾಕೀತು ಮಾಡಿದರು.
ಸ್ವಚ್ಛತೆ ಬಗ್ಗೆ ನಿಗಾ ಇರಲಿ: ಕಚೇರಿ ಸಂಕೀರ್ಣದ ಸ್ವಚ್ಛತೆ ಬಗ್ಗೆಯೂ ಪರಿಶೀಲನೆ ನಡೆಸಿ ಕಚೇರಿಯ ಆವರಣವನ್ನು ಸ್ವಚ್ಛವಾಗಿ ಸಿಕೊಳ್ಳಬೇಕು ಎಂದು ನೌಕರರಿಗೆ ಸೂಚನೆ ನೀಡಿದರು. ತಾವು ಕಾರ್ಯಭಾರ ವಹಿಸಿ ಕೊಂಡಾಗಿನಿಂದಲೂ ಆಡಳಿತದಲ್ಲಿ ಸುಧಾ ರಣೆ ತರುವ ನಿಟ್ಟಿನಲ್ಲಿ ಸಾಕಷ್ಟು ಕ್ರಮ ಕೈಗೊಳ್ಳುತ್ತಿದ್ದೇನೆ. ಗ್ರಾಮ ವಾಸ್ತವ್ಯ, ರೈತರ ಪೌತಿ ಖಾತೆ, ನಿರಾಶ್ರಿತ ಕೇಂದ್ರಕ್ಕೆ ಭೇಟಿ, ನಗರ ಸಂಚಾರ ಸೇರಿದಂತೆ ಹಲವು ಕ್ರಮ ಗಳನ್ನು ಕೈಗೊಳ್ಳಲಾಗಿದೆ. ಇನ್ನು ಮುಂದೆ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿವೀಕ್ಷಣೆ ಮಾಡುವುದನ್ನು ಮುಂದುವರಿಸಲಾಗುವುದು ಎಂದರು.
ಕೆಲಸ ಮುಗಿದ ಬಳಿಕ ವಾಹನ ಕೊಂಡೊಯ್ಯಿರಿ: ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಕೆಲಸಕ್ಕೆ ಬರುವ ಸಾರ್ವಜನಿಕರು ಕಚೇರಿ ಆವರಣದಲ್ಲಿ ಕೆಲಕಾಲ ತಮ್ಮ ವಾಹನಗಳನ್ನು ನಿಲ್ಲಿಸಿ, ಕೆಲಸ ಮುಗಿದ ತಕ್ಷಣ ತೆಗೆದುಕೊಂಡು ಹೋಗಬೇಕು. ಕೆಲವು ಸಾರ್ವಜನಿಕರು, ವಿವಿಧ ಇಲಾಖೆ ನೌಕರರು ತಮ್ಮ ವಾಹನಗಳನ್ನು ಜಿಲ್ಲಾಧಿ ಕಾರಿ ಕಚೇರಿ ಆವರಣದಲ್ಲಿ ಬೆಳಗ್ಗೆ ನಿಲ್ಲಿಸಿ ಸಂಜೆ ತೆಗೆದುಕೊಂಡು ಹೋಗುವ ಪರಿಪಾಠ ಬೆಳೆಸಿಕೊಂಡಿದ್ದಾರೆ.
ಇನ್ನು ಮುಂದೆ ವಾಹನ ನಿಲುಗಡೆ ಉಸ್ತುವಾರಿಗೆ ಡಿ.ಗ್ರೂಪ್ ನೌಕರನನ್ನು ನೇಮಿಸಲಾಗುವುದು. ಯಾರು ಎಷ್ಟು ಸಮಯ ವಾಹನ ನಿಲುಗಡೆ ಮಾಡುತ್ತಾರೆ ಎಂಬುದನ್ನು ಆ ನೌಕರ ಮಾಹಿತಿ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗುವುದು ಎಂದೂ ಹೇಳಿದರು.