Advertisement

ನೀರು ಪೋಲು ಮಾಡಿದರೆ ಸಂಪರ್ಕ ಕಡಿತ

02:55 PM May 03, 2017 | Harsha Rao |

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಗೆ ನೀರು ಪೂರೈಸುವ ಬಜೆ ಜಲಾಶಯದಲ್ಲಿ ಸಂಗ್ರಹವಿರುವ ನೀರಿನ ಮಟ್ಟ ಡೆಡ್‌ ಸ್ಟೋರೇಜ್‌ಗೆ ತಲುಪಿರುವುದರಿಂದ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸದೆ ಕನಿಷ್ಠ ಬಳಕೆ ಮಾಡಬೇಕು. ಅನಧಿಕೃತ ನೀರಿನ ಸಂಪರ್ಕ, ಕಟ್ಟಡ ಕಟ್ಟಲು, ಅಂಗಳ, ವಾಹನ, ರಸ್ತೆ ತೊಳೆಯಲು ಬಳಸುತ್ತಿರುವುದು ಕಂಡುಬಂದಲ್ಲಿ
ಅಂತಹ ನೀರಿನ ಸಂಪರ್ಕವನ್ನು ತತ್‌ಕ್ಷಣವೇ ಕಡಿತ ಗೊಳಿಸಲಾಗುವುದು ಎಂದು ನಗರ ಸಭಾಧ್ಯಕ್ಷರು ಹಾಗೂ ಪೌರಾ ಯುಕ್ತರು ತಿಳಿಸಿದ್ದಾರೆ.

Advertisement

ಅನಧಿಕೃತ ನೀರಿನ ಸಂಪರ್ಕ ಹೊಂದಿದ್ದ 1,700 ಮನೆಗಳು, ಅದಲ್ಲದೆ ಮೀಟರ್‌ ಬಳಸದೆ ಸಂಪರ್ಕ ಹೊಂದಿದ್ದ 167 ಮನೆಗಳ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಶೀರೂರು ಪ್ರದೇಶದಿಂದ ಈಗಾಗಲೇ ತಲಾ 100 ಎಚ್‌ಪಿಯ 3 ಬೋಟ್‌ ಪಂಪ್‌ಗ್ಳ (300 ಎಚ್‌ಪಿ) ಮೂಲಕ ಅಲ್ಲಿ ಸಂಗ್ರಹವಿರುವ ನೀರನ್ನು ಹಾಯಿಸಿ ಬಜೆ ಅಣೆಕಟ್ಟಿಗೆ ಹರಿದು ಬಂದ ಈ ನೀರು ಶುದ್ಧೀಕರಿಸಿ ದಿನ ಬಿಟ್ಟು ದಿನ ಸರಬರಾಜು ಮಾಡಲಾಗುತ್ತಿದೆ. ಮಾಣೈ, ಭಂಡಾರಿಬೆಟ್ಟು ಹಾಗೂ ಪುತ್ತಿಗೆ ಪ್ರದೇಶದಲ್ಲಿ ಅಲ್ಲಲ್ಲಿ ಸಂಗ್ರಹವಿರುವ ನೀರನ್ನು ಡ್ರೆಜ್ಜಿಂಗ್‌ ಮಾಡಿ ಉಡುಪಿ ನಗರಕ್ಕೆ ಪೂರೈಸಲಾಗುವುದು.

ಸಂಬಂಧಪಟ್ಟ ವಾರ್ಡ್‌ಗಳಲ್ಲಿ ಕುಡಿಯುವ ನೀರು ಪೂರೈಕೆ ಆಗದಿದ್ದಲ್ಲಿ ಅದೇ ದಿನ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 

ಸಹಾಯವಾಣಿ
ನೀರಿನ ಪೈಪ್‌ ಒಡೆದು ಹೋದಲ್ಲಿ, ಸೋರುತ್ತಿದ್ದಲ್ಲಿ ಅಥವಾ ನೀರನ್ನು ಪೋಲು ಮಾಡಿದ್ದು ಕಂಡುಬಂದಲ್ಲಿ ಸಾರ್ವಜನಿಕರು ಜನಹಿತ/ಜಲಹಿತದ ಸಹಾಯವಾಣಿ ದೂರವಾಣಿ ಸಂಖ್ಯೆ 080-23108108ಕ್ಕೆ ದೂರು ನೀಡಬಹುದು. ನಗರ ಸಭೆಯ ವತಿಯಿಂದಲೂ ಕಣ್ಗಾವಲು ಇಡಲಾಗುತ್ತದೆ.

ನಗರಸಭೆಗೆ ಸಹಕರಿಸಿ
ನೀರಿನ ಲಭ್ಯತೆ ಪ್ರಮಾಣ ತೀರಾ ಕಡಿಮೆ ಇರುವುರಿಂದ ಉಡುಪಿಯ ನಾಗರಿಕರು ನೀರನ್ನು ಮಿತವಾಗಿ ಬಳಸಿ, ನಗರಸಭೆಯೊಂದಿಗೆ ಸಹಕರಿಸಬೇಕಾಗಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಹಾಗೂ ಪೌರಾಯುಕ್ತ ಮಂಜುನಾಥಯ್ಯ ವಿನಂತಿಸಿಕೊಂಡಿದ್ದಾರೆ.

Advertisement

ಬಣ್ಣ ಬದಲಾವಣೆ: ಹಾನಿಯಿಲ್ಲ
ಡ್ರೆಜ್ಜಿಂಗ್‌ ಮಾಡಿ ನೀರು ಸರಬರಾಜು ಮಾಡುತ್ತಿರುವುದರಿಂದ ನೀರಿನ ಬಣ್ಣದಲ್ಲಿ ಸ್ವಲ್ಪಮಟ್ಟಿನ ಬದಲಾವಣೆ ಕಂಡುಬರುತ್ತಿದೆ. ಈ ನೀರನ್ನು ಬಜೆಯ ನೀರು ಶುದ್ಧೀಕರಣ ಘಟಕದಲ್ಲಿ ಕ್ಲೋರಿನ್‌ ಗ್ಯಾಸ್‌ ಉಪಯೋಗಿಸಿ ಸಂಪೂರ್ಣ ಶುದ್ಧೀಕರಿಸಿ ಕೊಡುತ್ತಿರುವುದರಿಂದ ಕುಡಿಯಲು ಯಾವುದೇ ಸಮಸ್ಯೆಯಿಲ್ಲ. ಅದರಲ್ಲಿರುವ ಬ್ಯಾಕ್ಟೀರಿಯಾಗಳು ಸಹ ಸಾಯುತ್ತಿವುದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ .
– ಬಿ. ರಾಘವೇಂದ್ರ 
ಪರಿಸರ ಅಭಿಯಂತ

Advertisement

Udayavani is now on Telegram. Click here to join our channel and stay updated with the latest news.

Next