ಕಾಪು: ಮಳೆಗಾಲದಲ್ಲಿ ಎದುರಾಗ ಬಹುದಾದ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಕಾಪು ತಾ. ಆಡಳಿತ ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಅಧಿಕಾರಿಗಳು ಈಗಾಗಲೇ ಸಭೆಯನ್ನೂ ನಡೆಸಿದ್ದಾರೆ. ಅಗತ್ಯವಾಗಿ ಬೇಕಿರುವ ದೋಣಿ ಮಾಲಕರು, ಈಜುಗಾರರು, ಮರ ಕಟ್ಟರ್‌ಗಳು, ಜೆಸಿಬಿ ಮಾಲಕರು, ಜನರೇಟರ್ ವ್ಯವಸ್ಥೆ, ಗಂಜಿ ಕೇಂದ್ರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
30 ರೆಸ್ಕೂ ಸೆಂಟರ್, 16 ಪಿಡಿಒ, 11 ಗ್ರಾಮ ಕರಣಿಕರು
ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಪಂಚಾಯತ್ ಕಟ್ಟಡ, ಶಾಲಾ ಕಟ್ಟಡ, ಸರಕಾರಿ ಆಸ್ಪತ್ರೆ, ಪಂಚಾಯತ್ ಕಟ್ಟಡಗಳನ್ನು ಗುರುತಿಸಿಕೊಂಡು 30 ರೆಸ್ಕೂ ್ಯ ಸೆಂಟರ್‌ಗಳನ್ನು ಗೊತ್ತುಪಡಿಸಲಾಗಿದೆ. ಇದಕ್ಕೆ ಬೇಕಾದ ಅಗತ್ಯ ವ್ಯಕ್ತಿಗಳ ಪಟ್ಟಿ ತಯಾರಿಸಿಕೊಂಡು, ಬುಕ್‌ಲೆಟ್ ಮಾದರಿಯಲ್ಲಿ ಸಿದ್ಧಪಡಿಸಿ ಅದನ್ನು ಸಂಬಂಧ ಪಟ್ಟ ಕಚೇರಿಗಳಲ್ಲಿ ಜನರ ಅನುಕೂಲಕ್ಕಾಗಿ ಇರಿಸಲಾಗಿದೆ.
ನೆರೆ ಸಾಧ್ಯತೆ ಪ್ರದೇಶಗಳ 90 ಕುಟುಂಬಗಳ ಪಟ್ಟಿ ಸಿದ್ಧ
ತಾ| ವ್ಯಾಪ್ತಿಯಲ್ಲಿ ನೆರೆಯಿಂದಾಗಿ ಅಪಾಯ ಕ್ಕೀಡಾಗಬಹುದಾದ 90 ಕುಟುಂಬಗಳ ಬಗ್ಗೆ ವರದಿ ಸಿದ್ಧಪಡಿಸಲಾಗಿದೆ. 23 ಗಂಜಿ ಕೇಂದ್ರ, 7 ಮಂದಿ ಜನರೇಟರ್ ಮಾಲಕರು, 60 ಮಂದಿ ಈಜು ಗಾರರು, 20 ದೋಣಿ ಮಾಲಕರು, 22 ಮಂದಿ ಜೆಸಿಬಿ ಮಾಲಕರುಗಳನ್ನು ತುರ್ತು ಸಂದರ್ಭ ಬಳಸಿ ಕೊಳ್ಳಲು ಯೋಜನೆ ರೂಪಿಸಲಾಗಿದೆ.
ಕಂಟ್ರೋಲ್ ರೂಂ
ಮಳೆಗಾಲ ಸಂದರ್ಭದ ತುರ್ತು ಪರಿಸ್ಥಿತಿ ಎದುರಿಸಲು ಸಮಗ್ರ ವರದಿ, ಪಟ್ಟಿ ತಯಾರಿಸಲಾಗಿದೆ. ತೊಂದರೆ ಎದುರಾದರೆ ಸಾರ್ವಜನಿಕರು ಆಯಾ ಗ್ರಾಮಗಳಲ್ಲಿ ನಿಯೋಜಿಸಲ್ಪಟ್ಟಿರುವ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಗ್ರಾ.ಪಂ. ವ್ಯಾಪ್ತಿಯ ಜನರು ತಾ. ಕಚೇರಿ ಕಂಟ್ರೋಲ್ ರೂಂ
0820-2551444 ಹಾಗೂ ಪುರಸಭೆ ವ್ಯಾಪ್ತಿಯ ಜನರು ಪುರಸಭೆ ಕಂಟ್ರೋಲ್ ರೂಂ
0820-2551061ನ್ನು ಸಂಪರ್ಕಿಸಬಹುದಾಗಿದೆ.