Advertisement

ಆಶಯದ ಬದುಕಲ್ಲಿ ನಿರಾಶೆ ಅನಿರೀಕ್ಷಿತ

11:37 PM Feb 09, 2020 | Sriram |

ಆಶಯಗಳನ್ನು ಬಯಸುವ ಬದುಕಿನಲ್ಲಿ ನಿರಾಶೆಗಳು ಅನಿರೀಕ್ಷಿತ ಅತಿಥಿಗಳಾಗಿ ನೆಮ್ಮದಿಯ ಗೂಡನ್ನು ಕೆಡವಿ ಬಿಡುತ್ತವೆ. ಖುಷಿಯಾಗಿ ಇರುವ ವ್ಯಕ್ತಿ ಖುಷಿಯನ್ನೇ ಶಾಶ್ವತವಾಗಿಸುವ ಕೋರಿಕೆಯನ್ನು ಬೇಡಿಕೊಳ್ಳುವ ಹಾಗಿನ ಬದುಕು ಎಲ್ಲರಿಗೂ ಫ‌ಲಿಸದು.

Advertisement

ನಾವೆಲ್ಲಾ ಹದಿಹರೆಯದ ಹಂತದಲ್ಲಿ ಬೆಳದು ನಿಂತಾಗ ಬದುಕಿನ ಭವಿಷ್ಯಕ್ಕೆ ಒಂದು ಸ್ಪಷ್ಟ ರೂಪ ಕೊಟ್ಟು, ತಾನೇನು ಆಗಬೇಕು, ತಾನೇನು ಕಲಿಯಬೇಕು, ತಾನು ಹೇಗೆ ಬೆಳೆಯಬೇಕು, ಯಾರ ಮಾತು ಕೇಳಬೇಕು ಹೀಗೆ ಎಲ್ಲವನ್ನು ನಮ್ಮ ಸ್ವಂತಿಕೆ ಯೋಚನೆಯಿಂದ ನಿರ್ಧರಿಸುವ ಮಟ್ಟಿಗೆ ಬೆಳೆದು ಬಿಡುತ್ತೇವೆ. ಆದರೆ ಈ ಹಂತದಲ್ಲಿ ನಮ್ಮ ಅಪ್ಪ ಅಮ್ಮನ ಆಸರೆಯಂತೆ, ಅವರ ಇಚ್ಛೆಯಂತೆ, ಅವರ ಕನಸಿನ ದಾರಿಯಲ್ಲಿ ನಡೆಯಲು ಹಿಂಜರಿಯುತ್ತೇವೆ. ನಾನು ಮಾಡಿದ್ದೇ ಸರಿ, ನನ್ನ ತೀರ್ಮಾನವೇ ಸೂಕ್ತ ಎಂಬ ವಾದವೇ ನಮ್ಮನ್ನು ಕೆಲವೊಮ್ಮೆ ದಾರಿ ತಪ್ಪಿಸಿಬೀಡುತ್ತದೆ.

ಹದಿಹರೆಯದ ವಯಸ್ಸೇ ಹಾಗೆ. ದೂರದಿಂದ ಕಂಡದ್ದು ಅದ್ಭುತ. ಹತ್ತಿರ ಹೋದಷ್ಟು ಆಕರ್ಷಣೆಯಾಗಿ ಹೊಳೆಯುತ್ತದೆ. ಅದೇ ಆಕರ್ಷಣೆ ಹೊಳಪು ಬದುಕಿನೂದ್ದಕ್ಕೂ ಹಾಗೆಯೇ ಇರಬೇಕೆನ್ನುವ ಮನಸ್ಸು. ಮೂಗಿನ ತುದಿ ಕೆಂಡದಂತೆ ಕೆಂಪು, ಕೋಪ ನೆತ್ತಿಯ ಮೇಲೆ, ಈ ಹಂತದಲ್ಲಿ ಒಳಿಗೆ ಹೇಳುವ ಬುದ್ಧಿ ಮಾತು, ಅನುಭವದ ಆಧಾರದಲ್ಲಿ ಹೇಳುವ ಪಿಸು ಮಾತು ಯಾವುದು ಹದಿಹರೆಯದಲ್ಲಿ ಹಬೆಯಾಡುವ ಭಾವನೆಗಳಿಗೆ ಕೇಳದು.

ಹದಿಹರೆಯ ಎಂಬುದು ಉತ್ಸಾಹಗಳು ನಿರಂತರವಾಗಿ ಹರಿಯುವ ಘಟ್ಟ. ಈ ಘಟ್ಟದಲ್ಲಿ ಕೆಲವರು ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ನೂರಾರು ದಾರಿ, ಅಡ್ಡ ದಾರಿಗಳನ್ನು ಹಿಡಿದು ಬದುಕನ್ನು ಕೂಪಕ್ಕೆ ದೂಡಿಕೊಳ್ಳುವ ದುಡುಕುತನ ಹೀಗೆ ಏನಾದರೂ ಮಾಡಿ ಸಾಧಿಸಲು ಹಾಗೂ ಏನೂ ಇಲ್ಲದೇ ಸುಮ್ಮನೆ ಕೂತು ರೋಧಿಸಲು ಇರುವ ಏಕೈಕ ಹಂತವೇ ಈ ಹದಿಹರೆಯ ಎಂಬ ಮಾಯೆ.

ನಾಯಕ ಆಗುವುದು
ಒಬ್ಬ ವ್ಯಕ್ತಿ ಸೂಫಿ ಗುರುಗಳ ಬಳಿಗೆ ತೆರಳಿದ್ದ. ಅಲ್ಲಿ ಹಲವಾರು ಪ್ರತಿಮೆಗಳಿದ್ದವು. ಅವುಗಳಲ್ಲಿ ಕೆಲವು ಪ್ರತಿಮೆಗಳ ಕಿವಿಗಳು ಜೋಡಣೆಯಾಗಿದ್ದರೆ ಕೆಲವು ದೇಹಗಳು ಅಂಟಿಕೊಂಡಿದ್ದವು. ಆದರೆ ಅಲ್ಲಿ ಏಕ ಪ್ರತಿಮೆಗಳು ಇರಲೇ ಇಲ್ಲ. ಹೋದ ವ್ಯಕ್ತಿಗೆ ಅನುಮಾನ ಶುರುವಾಯಿತು. ಅವನು ಗುರುಗಳ ಬಳಿ ತೆರಳಿ ಈ ಪ್ರತಿಮೆಗಳೆಲ್ಲ ಏಕೆ ಒಂದಕ್ಕೊಂದು ಅಂಟಿಕೊಂಡಿವೆ. ಇಲ್ಲಿ ಏಕ ಪ್ರತಿಮೆಗಳು ಯಾಕೆ ಇಲ್ಲ ಎಂದು ಪ್ರಶ್ನಿಸಿದ ಅದಕ್ಕೆ ಗುರುಗಳು ಇವುಗಳೆಲ್ಲ. ಸಾಮಾನ್ಯ ಮನುಷ್ಯರ ಸ್ವಭಾವ ರೂಪಕಗಳು. ಮನುಷ್ಯರು ಸಾಧಾರಣವಾಗಿ ಗುಂಪಿನಲ್ಲೇ ವಾಸಿಸಲು ಇಷ್ಟಪಡುತ್ತಾರೆ. ಪರಸ್ಪರ ದೂರುಗಳು ಹೇಳಿಕೊಂಡು ಬದುಕುತ್ತಿದ್ದಾರೆ ಎಂಬುದನ್ನು ಈ ಪ್ರತಿಮೆಗಳು ಹೇಳುತ್ತವೆ. ನಾಯಕರಾದಾಗ ಮಾತ್ರ ಮನುಷ್ಯರು ಒಬ್ಬಂಟಿಗರಾಗಿರುತ್ತಾರೆ. ಅವರಲ್ಲಿ ಒಬ್ಬನೇ ಜಗವನ್ನು ಎದುರಿಸುವ ಧೈರ್ಯ ಬರುತ್ತದೆ ಎಂದು ಹೇಳಿದರು. ಇಲ್ಲಿ ಬಂದವರೆಲ್ಲ ಆ ಪಾಠವನ್ನು ಕೇಳಿ ನಾಯಕರಾಗಿ ಮುನುಗ್ಗುವ ಸತತ ಪ್ರಯತ್ನಿಸಬೇಕೆನ್ನುವುದೇ ನನ್ನ ಪ್ರಾರ್ಥನೆ ಎಂದರು.

Advertisement

- ಸುಹಾನ್‌ ಶೇಕ್‌

Advertisement

Udayavani is now on Telegram. Click here to join our channel and stay updated with the latest news.

Next