ಗಂಗಾವತಿ: ತಾಲೂಕಿನ ಹಿರೇಬೆಣಕಲ್ ವ್ಯಾಪ್ತಿಯ ಮೋರ್ಯರ ಗುಡ್ಡ ಪ್ರದೇಶದಲ್ಲಿರುವ ಅಪರೂಪದ ಶಿಲಾಯುಗದ ಜನರ ಶಿಲಾಸಮಾಧಿಗಳು ಕಣ್ಮರೆಯಾಗುವ ಸ್ಥಿತಿಗೆ ಬಂದಿವೆ.ಶಿಲಾಯುಗ ಕಾಲದ ನೂರಾರು ಶಿಲಾಸಮಾಧಿಗಳು ಇಲ್ಲಿದ್ದು, ನಿಧಿಗಳ್ಳರು ಶಿಲಾಸಮಾಧಿಗಳನ್ನು ಅಗೆಯುವ ಮೂಲಕ ಸಮಾಧಿಗಳನ್ನು ವಿಕಾರಗೊಳಿಸುತ್ತಿದ್ದಾರೆ. ದೇಶ ವಿದೇಶದ ಜನರುಇಲ್ಲಿಗೆ ಇತಿಹಾಸ ಅಧ್ಯಯನ ಹಾಗೂ ವೀಕ್ಷಣೆಗೆಆಗಮಿಸುತ್ತಾರೆ. ಇವುಗಳ ಸಂರಕ್ಷಣೆ ಅಥವಾಇಲ್ಲಿಗೆ ಹೋಗಲು ದಾರಿ ಸೇರಿದಂತೆ ಮೂಲ ಸೌಕರ್ಯ ಒದಗಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ವಿಶ್ವವಿಖ್ಯಾತವಾಗಬೇಕಿದ್ದ ಶಿಲಾಯುಗದ ಶಿಲಾಸಮಾಧಿ ಸ್ಥಳಗಳು ತೀವ್ರ ನಿರ್ಲಕ್ಷ್ಯಕ್ಕೊಳಗಾಗಿದೆ.
ನಾಗರಿಕತೆ ಆರಂಭಕ್ಕೂ ಮುಂಚೆಯೇ ಮನುಷ್ಯ ಅರಣ್ಯದಲ್ಲಿ ಒಂದು ಕಡೆ ವಾಸ ಮಾಡುವ ಯುಗದಲ್ಲಿ ತಾಲೂಕಿನ ಹಿರೇಬೆಣಕಲ್ ಮೋರ್ಯರ ಬೆಟ್ಟ ಸೇರಿ ಮಲ್ಲಾಪೂರ ರಾಂಪೂರ ಕಡೆಬಾಗಿಲು ಏಳು ಗುಡ್ಡಪ್ರದೇಶದಲ್ಲಿ ವಾಸವಾಗಿದ್ದ. ತಾನು ವಾಸವಾಗಿದ್ದಗುಡ್ಡದ ಗುಹೆಗಳಲ್ಲಿ ಅಂದಿನ ಬದುಕನ್ನು ಬಿಂಬಿಸುವವಿವಿಧ ಬಗೆ ಗುಹಾಂತರ ರೇಖಾ ಚಿತ್ರಗಳನ್ನುರಚಿಸಿದ್ದರ ಕುರಿತು ಇಂದಿಗೂ ಇಲ್ಲಿಯ ಬೆಟ್ಟಗಳಗುಹೆಗಳಲ್ಲಿ ಚಿತ್ರಗಳನ್ನು ಕಾಣಬಹುದಾಗಿದೆ.ಹಿರೇಬೆಣಕಲ್ ಮೋರ್ಯರ ಬೆಟ್ಟದಲ್ಲಿ ಶಿಲಾಯುಗದ ಜನರು ನಿರ್ಮಿಸಿದ ಶಿಲಾಸಮಾಧಿ ಗಳೆಂದು ಕರೆಯಲ್ಪಡುವ ಶಿಲಾ ಗೋಡೆ ಗಳಿದ್ದು,ಇವುಗಳ ಮಧ್ಯೆ ದೊಡ್ಡ ಗಾತ್ರದ ರಂಧ್ರಗಳಿವೆ.ಕೆಲವು ಶಿಲಾಸಮಾಧಿಗಳನ್ನು ಬಂಡೆಗಳನ್ನು ನಿಲ್ಲಿಸಿ ಮೇಲ್ಭಾಗದಲ್ಲಿ ಬಂಡೆ ಹಾಕಿ ಮುಚ್ಚಲಾಗಿದೆ. ಈಮುಚ್ಚಿದ ಶಿಲಾಸಮಾ ಧಿಗಳನ್ನು ನಿ ಧಿಗಳ್ಳರು ಹೊಡೆದುಹಾಕುತ್ತಿದ್ದು, ಈಗಾಗಲೇ ಸುಮಾರು ಹತ್ತಕ್ಕೂ ಹೆಚ್ಚು ಸಮಾಧಿ ಗಳನ್ನು ನಾಶ ಮಾಡಲಾಗಿದೆ.
ದಿವ್ಯ ನಿರ್ಲಕ್ಷ್ಯ: ಮನುಷ್ಯನ ಬೆಳವಣಿಗೆ ಮೇಲೆ ಬೆಳಕು ಚೆಲ್ಲುವ ಹಿರೇಬೆಣಕಲ್ ಮೋರ್ಯರ ಗುಡ್ಡದ ಶಿಲಾಸಮಾ ಧಿಗಳನ್ನು ಮುಂದಿನ ಪೀಳಿಗೆಗೆಸಂರಕ್ಷಿಸಬೇಕಿದೆ. ಈ ಸ್ಥಳದ ಮಹತ್ವ ತಿಳಿದಿದ್ದರೂ ಇಲಾಖೆಗಳು ಈ ಸ್ಥಳ ಸಂರಕ್ಷಣೆ ಮಾಡುವ ಕುರಿತು ಗಮನ ಹರಿಸುತ್ತಿಲ್ಲ. ಸಂಘ ಸಂಸ್ಥೆಗಳು ಹಿರೇಬೆಣಕಲ್ ಗ್ರಾಮಸ್ಥರು ಮತ್ತು ಇತಿಹಾಸತಜ್ಞರು ಸಂಶೋಧಕರು ಶಿಲಾಯುಗದ ಶಿಲಾಸಮಾಧಿಗಳ ಸಂರಕ್ಷಣೆ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಗಮನಕ್ಕೆ ಅನೇಕ ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆ ಸರಕಾರಇಲ್ಲಿಗೆ ಹೋಗಲು ಸಿಸಿ ರಸ್ತೆ ನಿರ್ಮಿಸಲು ಸುಮಾರು 30 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದು, ಈ ಹಣ ಕಡತಗಳಲ್ಲಿ ಮಾತ್ರ ಖರ್ಚಾಗಿದೆ. ರಸ್ತೆ ಮಾತ್ರನಿರ್ಮಾಣವಾಗಿಲ್ಲ. ತಾಲೂಕಿನಲ್ಲಿರುವ ಇಂತಹಅಪರೂಪದ ಸ್ಥಳಗಳ ಹೆಸರಿನಲ್ಲಿ ಅನುದಾನ ಬಂದಿದ್ದರೂ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ.
ಗಂಗಾವತಿಯ ಹಿರೇಬೆಣಕಲ್ಲಿನ ಮೋರ್ಯರ ಬೆಟ್ಟದ ಬೃಹತ್‌ಶಿಲಾಸಮಾಧಿ ನೆಲೆ ಕೇಂದ್ರ ಸರ್ಕಾರದ ಭಾರತೀಯ ಪುರಾತತ್ತ್ವ ಸರ್ವೇಕ್ಷಣಾಇಲಾಖೆಯ ಹಂಪಿ ವೃತ್ತದ ಸುಪರ್ದಿಯಲ್ಲಿದೆ. ಆದರೆ ನೆಲೆ ಅರಣ್ಯ ಪ್ರದೇಶದಲ್ಲಿರುವುದರಿಂದ ಅದರ ರಕ್ಷಣೆ ಸಾಧ್ಯವಾಗುತ್ತಿಲ್ಲ. ಪರಿಣಾಮ ನಿಧಿಗಳ್ಳರು ಸಮಾಧಿಗಳನ್ನು ಆಗಾಗಅಗೆದು ಬಂಡೆಗಳನ್ನು ಒಡೆದು ಹಾಕಿ ನಿಧಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ಇದೇ ರೀತಿಯಾದರೆ ಮುಂದೊಂದು ದಿನ ಇಲ್ಲಿ ನೋಡಲು ಕೂಡಾ ಒಂದು ಸಮಾಧಿ ಉಳಿಯಲಾರದು. ದಕ್ಷಿಣ ಭಾರತದಲ್ಲೇ ಅಪರೂಪವಾದ ಈ ಸಮಾಧಿ ಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು.
-ಡಾ|ಶರಣಬಸಪ್ಪ ಕೋಲ್ಕಾರ, ಇತಿಹಾಸ ತಜ್ಞ.
-ಕೆ.ನಿಂಗಜ್ಜ