ಬಂಗಾರಪೇಟೆ: ಪುರಸಭೆ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಕ್ಷೇತ್ರ ವಿಂಗಡನೆ, ಮೀಸಲಾತಿ ಬದಲಾವಣೆಯಿಂದ ಸ್ವಕ್ಷೇತ್ರವನ್ನು ಕಳೆದುಕೊಂಡ ಕಾಂಗ್ರೆಸ್‌ನ ಸದಸ್ಯರು ಬೇರೆ ವಾರ್ಡ್‌ಗಳ ಮೇಲೆ ಕಣ್ಣಿಟ್ಟಿದ್ದು ಚುನಾವಣೆ ಕಣ ರಂಗೇರಿದೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಅವರ ಬಲಗೈ ಬಂಟ ಎಂಸಿಜೆ ವೇಲುಮುರುಗನ್ ದೇಶಿಹಳ್ಳಿ ವಾರ್ಡ್‌ನಿಂದ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ. ಪುರಸಭೆ ಮಾಜಿ ಅಧ್ಯಕ್ಷ ಡಿ.ಕುಮಾರ್, ಸಿ.ರಮೇಶ್, ಜಬೀನ್‌ತಾಜ್, ಮಾಜಿ ಉಪಾಧ್ಯಕ್ಷ ಕೇತಾನ್‌ರವಿ, ಅಸ್ಲಂಪಾಷ ಹಾಗೂ ಜೆಡಿಎಸ್‌ನಲ್ಲಿ ಎರಡು ಬಾರಿ ಸದಸ್ಯರಾಗಿದ್ದ ಭಾಗ್ಯಲಕ್ಷ್ಮಿ ಸಹ ಮೀಸಲಾತಿ ಬದಲಾವಣೆಯಿಂದಾಗಿ ಸ್ಪರ್ಧಿಸುತ್ತಿಲ್ಲ.
ಪತಿ ಬದಲಿಗೆ ಪತ್ನಿ, ಪತ್ನಿ ಬದಲಿಗೆ ಪತಿ: ಕಾಂಗ್ರೆಸ್ ಪಕ್ಷದಲ್ಲಿ ಪೈಪೋಟಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಹುತೇಕ ಮುಖಂಡರಿಗೆ ಈ ಬಾರಿ ಟಿಕೆಟ್ ಕೈತಪ್ಪುವುದು ಖಚಿತವಾಗಿದೆ. ಕೇತನ್‌ರವಿ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವುದರಿಂದ ವಿಜಯನಗರ ಪಶ್ಚಿಮ ವಾರ್ಡ್‌ನಿಂದ ಸ್ಪರ್ಧಿಸಲು ಚಿಂತನೆ ನಡೆಸುತ್ತಿದ್ದಾರೆ.
ಸಿ.ರಮೇಶ್ ಯಾವುದೇ ಕ್ಷೇತ್ರ ಇಲ್ಲದೇ ಇರುವುದರಿಂದ ಇವರ ಪತ್ನಿ ಪೊನ್ನಿ ಅವರನ್ನು ಗೌತಮನಗರ ವಾರ್ಡ್‌ನಿಂದ ಹಾಗೂ ಜೆಡಿಎಸ್ ಹಾಲಿ ಸದಸ್ಯೆ ಭಾಗ್ಯಲಕ್ಷ್ಮಿ ಬದಲಾಗಿ ಇವರ ಪತಿ ವೈ.ವಿ.ರಮೇಶ್ ಕುಪ್ಪುಸ್ವಾಮಿ ಮೊದಲಿಯಾರ್-1 ವಾರ್ಡ್‌ನಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಜನತಾದಳ ಒಮ್ಮೆ ಮಾತ್ರ ಪುರಸಭೆಯಲ್ಲಿ ಅಧಿಕಾರಕ್ಕೆ ಬಂದಿತ್ತು. ಉಳಿದಂತೆ ಕಾಂಗ್ರೆಸ್ ಪಕ್ಷದ್ದೇ ಕಾರುಬಾರು. ಕಾಂಗ್ರೆಸ್‌ನ 10ಕ್ಕೂ ಹೆಚ್ಚು ಹಾಲಿ ಸದಸ್ಯರು ಬೇರೇ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಜೆಡಿಎಸ್‌ನಲ್ಲಿದ್ದಾಗ 6 ಕ್ಷೇತ್ರಗಳಲ್ಲಿ ಆ ಪಕ್ಷ ಜಯಗಳಿಸಿತ್ತು. ಪ್ರಸ್ತುತ ಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸಂಘಟನೆ ಕೊರತೆ ಎದುರಿಸುತ್ತಿದ್ದು, ಸೂಕ್ತ ಅಭ್ಯರ್ಥಿಗಳಿಗೆ ಹುಡುಕಾಟ ನಡೆಸುತ್ತಿವೆ.
Related Articles
Advertisement
ಸೇs್ ಕಾಂಪೌಂಡ್-1ರ ವಾರ್ಡ್‌ನಲ್ಲಿ ಪ್ರಭಾವಿಗಳು ಹೆಚ್ಚಾಗಿರುವುದರಿಂದ ಸ್ಪರ್ಧಿಸಲು ಈ ಬಾರಿ ಹಾಲಿ ಸದಸ್ಯರಾದ ಸಾಧಿಕ್‌ಪಾಷ, ಅಸ್ಲಂಪಾಷ, ಮುಕ್ತಿಯಾರ್, ರಫಿಕ್ ತೀವ್ರ ಪೈಪೋಟಿ ನಡೆಸುತ್ತಿರುವುದರಿಂದ ಅಂತಿಮವಾಗಿ ಮುಕ್ತಿಯಾರ್‌ಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಖಚಿತ ಎನ್ನಲಾಗಿದೆ. ಸಾಧಿಕ್‌ಪಾಷ ಹಾಗೂ ಅಸ್ಲಂಪಾಷರಿಗೂ ಕೈ ಟಿಕೆಟ್ ಇಲ್ಲವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದ ಹಾಲಿ ಸದಸ್ಯ ಜಿ.ವೆಂಕಟೇಶಗೌಡರಿಗೂ ಟಿಕೆಟ್ ನಿರಾಕರಿಸಲಾಗಿದೆ ಎನ್ನಲಾಗಿದೆ.
ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಪುರಸಭೆಯಲ್ಲಿ ಆ ಪಕ್ಷದ ಆಕಾಂಕ್ಷಿಗಳ ಪಟ್ಟಿ ಆಂಜನೇಯನ ಬಾಲದಂತೆ ಉದ್ದವಾಗಿದ್ದರೂ ಅಂತಿಮವಾಗಿ ಪ್ರಭಾವಿಗಳಿಗೆ ಟಿಕೆಟ್ ಸಿಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಎರಡನೇ ಹಂತ ಕಾಂಗ್ರೆಸ್ ಮುಖಂಡರಿಗೆ ಕೈ ಟಿಕೆಟ್ ಕೈತಪ್ಪುವ ಭೀತಿ ಇದ್ದು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಇದರ ಸದುಪಯೋಗ ಪಡೆಯಲು ಮುಂದಾಗಿವೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ವಿಜಯನಗರ ಪೂರ್ವ, ಕೆಯುಡಿಎ ಮಾಜಿ ಅಧ್ಯಕ್ಷ ಶಂಶುದ್ದೀನ್‌ಬಾಬು ಸೇs್ಕಾಂಪೌಂಡ್, ಎಂ.ಗುಣಶೀಲನ್ ಕೆರೆಕೋಟಿ, ಗಂಗಮ್ಮ ವಿಜಯನಗರ ಉತ್ತರ, ಎನ್.ಭಾಗ್ಯಮ್ಮ ಗಂಗಮ್ಮನಪಾಳ್ಯ, ಮಾಜಿ ಉಪಾಧ್ಯಕ್ಷ ಅರುಣಾಚಲಂ ಮಣಿ ಕುಪ್ಪುಸ್ವಾಮಿ ಮೊದಲಿಯಾರ್-1, ಷಫಿ ವಿವೇಕಾನಂದನಗರ ಪೂರ್ವ, ಆರೋಕ್ಯರಾಜನ್ ದೇಶಿಹಳ್ಳಿ, ಸುಹೇಲ್ ನ್ಯೂಟೌನ್-2 ವಾರ್ಡ್‌ನಿಂದ ಸ್ಪರ್ಧಿಸಲಿದ್ದು, ಈ ಎಲ್ಲಾ ಮುಖಂಡರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವುದು ಬಹತೇಖ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಗಳು
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ವಿಜಯನಗರ ಪೂರ್ವ, ಕೆಯುಡಿಎ ಮಾಜಿ ಅಧ್ಯಕ್ಷ ಶಂಶುದ್ದೀನ್‌ಬಾಬು ಸೇs್ಕಾಂಪೌಂಡ್, ಎಂ.ಗುಣಶೀಲನ್ ಕೆರೆಕೋಟಿ, ಗಂಗಮ್ಮ ವಿಜಯನಗರ ಉತ್ತರ, ಎನ್.ಭಾಗ್ಯಮ್ಮ ಗಂಗಮ್ಮನಪಾಳ್ಯ, ಮಾಜಿ ಉಪಾಧ್ಯಕ್ಷ ಅರುಣಾಚಲಂ ಮಣಿ ಕುಪ್ಪುಸ್ವಾಮಿ ಮೊದಲಿಯಾರ್-1, ಷಫಿ ವಿವೇಕಾನಂದನಗರ ಪೂರ್ವ, ಆರೋಕ್ಯರಾಜನ್ ದೇಶಿಹಳ್ಳಿ, ಸುಹೇಲ್ ನ್ಯೂಟೌನ್-2 ವಾರ್ಡ್‌ನಿಂದ ಸ್ಪರ್ಧಿಸಲಿದ್ದು, ಈ ಎಲ್ಲಾ ಮುಖಂಡರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವುದು ಬಹತೇಖ ಎನ್ನಲಾಗಿದೆ.
ಎಂ.ಸಿ.ಮಂಜುನಾಥ್