Advertisement

ದಿವ್ಯಾಂಗರ ಪ್ರಯಾಣಕ್ಕೆ ಹೊಸ ನಿಯಮ; ವಿಮಾನ ಪ್ರಯಾಣಕ್ಕೆ ಯಾವುದೇ ಕಂಪನಿ ಅಡ್ಡಿಪಡಿಸುವಂತಿಲ್ಲ

10:18 AM Jul 23, 2022 | Team Udayavani |

ನವದೆಹಲಿ: ಇಂಡಿಗೋ ಸಂಸ್ಥೆಯು ಇತ್ತೀಚೆಗೆ ತನ್ನ ವಿಮಾನದಲ್ಲಿ ವಿಕಲಾಂಗ ಚೇತನ ಮಗುವಿನ ಪ್ರಯಾಣಕ್ಕೆ ಅಡ್ಡಿಪಡಿಸಿದ ಪ್ರಕರಣದ ಬೆನ್ನಲ್ಲೇ ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತನ್ನ ನಿಯಮಗಳಲ್ಲಿ ತಿದ್ದುಪಡಿ ತಂದಿದೆ.

Advertisement

ದಿವ್ಯಾಂಗರು ವಿಮಾನದಲ್ಲಿ ಪ್ರಯಾಣ ಮಾಡಲು ಮುಂದಾದಾಗ ವಿಮಾನಯಾನ ಸೇವಾ ಕಂಪನಿಗಳು ಅವರನ್ನು ತಡೆಯುವಂತಿಲ್ಲ. ಒಂದು ವೇಳೆ ದಿವ್ಯಾಂಗರು ಪ್ರಯಾಣ ಮಾಡುವಂಥ ಸಂದರ್ಭದಲ್ಲಿ ಅವರ ಆರೋಗ್ಯ ಇನ್ನಷ್ಟು ಹೆದಗೆಡಬಹುದು ಎನಿಸಿದಲ್ಲಿ, ಅವರನ್ನು ವೈದ್ಯರಿಂದ ಪರೀಕ್ಷೆ ಮಾಡಿಸಬೇಕು. ಅವರಿಂದ ವರದಿ ಬಂದ ನಂತರವೇ ಏರ್‌ಲೈನ್‌ ನಿರ್ಧಾರ ಸೂಕ್ತ ತೆಗೆದುಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

“ಪ್ರಯಾಣಕ್ಕೆ ಅನುಮತಿ ನೀಡಲಾಗದು ಎಂಬಂಥ ಸಂದರ್ಭಗಳಲ್ಲಿ ಆ ನಿರ್ಧಾರವನ್ನು ಮೊದಲೇ ದಿವ್ಯಾಂಗರಿಗೆ ಅಥವಾ ಅವರ ಜತೆಯಲ್ಲಿರುವ ವಾರಸುದಾರರಿಗೆ ತಿಳಿಸಿ, ತಮ್ಮ ನಿರ್ಧಾರದ ಹಿಂದಿನ ಸೂಕ್ತ ಕಾರಣವನ್ನು ಲಿಖಿತ ರೂಪದಲ್ಲಿ ನೀಡಬೇಕು’ ಎಂದು ಡಿಜಿಸಿಎ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next