Advertisement
ಪಟ್ಟಣದ ನಿವಾಸಿ ಧರ್ಮ ರಾಥೋಡ್, ಸರಕಾರಿ ಸೌಲಭ್ಯಗಳಿಂದ ವಂಚಿತವಾದ ಅಂಗವಿಕಲ. ಸ್ಥಳೀಯ ರೈಲು ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ ಸೇವೆ ನಿರ್ವಹಿಸುತ್ತಿದ್ದ ಈತ ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿ ಇದ್ದ ತಾತ್ಕಾಲಿಕ ಉದ್ಯೋಗವೂ ಕೈತಪ್ಪಿತು. ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿ ಮನೆ ನಿರ್ಮಿಸಿಕೊಳ್ಳಲು ಸಹಾಯಧನ ಲಭಿಸಲಿದೆ ಎಂಬ ಆಶಾಭಾವನೆಯಿಂದ ಉಳಿಸಿ ಅನುದಾನ ಬೀದಿಗೆ ಬಿದ್ದಿರುವ ಈ ವಿಕಲಾಂಗ ವ್ಯಕ್ತಿ, ಸಾಕಲು ಸಾದ್ಯವಾಗದೆ ಹೆಂಡರು ಮಕ್ಕಳನ್ನು ತವರಿಗೆ ಕಳುಹಿಸಿ ಗೋಳಾಡುತ್ತಿದ್ದಾನೆ. ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾನೆ.
Related Articles
Advertisement
ಈಗ ತ್ರೀಚಕ್ರ ವಾಹನದಿಂದಲೂ ವಂಚಿಸಿದ್ದೀರಿ. ನಾನು ಎಲ್ಲಿ ಹೋಗಿ ಸಾಯಲಿ? ನನಗೇಕೆ ಈ ಕಷ್ಟ? ನಾನು ಭೂಮಿ ಮೇಲೆ ಬದುಕಬಾರದೇ? ನಾನು ಮಾಡಿದ ಪಾಪವಾದರೂ ಏನು? ನಾನು ಅಂಕವಿಕಲನಲ್ಲವೇ? ಹೆಂಡರು ಮಕ್ಕಳಿಂದ ದೂರ ಇದ್ದು ದಿನವೂ ಸಾಯುತ್ತಿದ್ದೇನೆ. ಸೌಲಭ್ಯ ಕೊಡಿ ಅಥವ ಪುರಸಭೆ ಕಚೇರಿ ಮುಂದೇ ನನಗೆ ವಿಷ ಕೊಟ್ಟು ಸಾಯಿಸಿಬಿಡಿ. ಸಾಕಾಗಿದೆ ಈ ಜೀವನ ಎಂದು ಅವಲತ್ತುಕೊಂಡ ಪ್ರಸಂಗ ನಡೆದಿದೆ.
ಅಂಗವಿಕಲನ ಗೋಳಾಟ ತಿಳಿದು ಮೂಖವಿಸ್ಮಿತರಾದ ಪುರಸಭೆ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರು, ಧರ್ಮಸಿಂಗ್ ನನ್ನು ಸಮಾಧಾನಪಡಿಸಲು ಮುಂದಾದರು. ಯಾವುದಕ್ಕೂ ಜಗ್ಗದ ನೋಂದ ಅಂಗವಿಕಲ ಧರ್ಮಸಿಂಗ್, ನನಗೆ ನ್ಯಾಯ ಕೊಡಿ ಎಂದು ಪಟ್ಟು ಹಿಡಿದು ಏಕಾಂಗಿಯಾಗಿಯೇ ಪ್ರತಿಭಟಿಸಿ ಪುರಸಭೆ ಆಡಳಿತವನ್ನೇ ನಡುಗಿಸಿದ್ದಾನೆ.