Advertisement

ಅಸ್ವತ್ಛತೆ ತಾಣ ಹುಲಸೂರ

02:05 PM Aug 02, 2018 | Team Udayavani |

ಬಸವಕಲ್ಯಾಣ: ನೂತನ ತಾಲೂಕು ಎಂದು ಘೋಷಣೆಯಾಗಿ ವರ್ಷ ಕಳೆಯುತ್ತ ಬಂದರೂ ಇಂದಿಗೂ ಹುಲಸೂರ ಕ್ಷೇತ್ರದ ಚರಂಡಿಗಳು ಮಾತ್ರ ಸ್ವತ್ಛತೆ ಕಂಡಿಲ್ಲ. ಹಾಗಾಗಿ ಸಾರ್ವಜನಿಕರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.

Advertisement

ಹುಲಸೂರ ಕ್ಷೇತ್ರದ ಮಹಾತ್ಮರ ವೃತ್ತಗಳ ಮತ್ತು ಪ್ರಮುಖ ರಸ್ತೆಗಳಲ್ಲಿರುವ ಚರಂಡಿಗಳು ಪ್ಲಾಸ್ಟಿಕ್‌ ಮತ್ತು ತ್ಯಾಜ್ಯ ತುಂಬಿಕೊಂಡಿವೆ ಹಾಗೂ ಕೆಲವು ಕಡೆ ಚರಂಡಿ ಇಲ್ಲದ ಕಾರಣ ರಸ್ತೆ ಮಧ್ಯದಿಂದ ನೀರು ಹರಿಯುತ್ತಿದೆ. 

ಆದರೂ ಸಂಬಂಧಿಸಿದ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಮಾತ್ರ ಹುಲಸೂರ ಕ್ಷೇತ್ರವನ್ನು ಸ್ವತ್ಛತೆ
ಮಾಡಲು ಮುಂದಾಗುತ್ತಿಲ್ಲ ಎಂಬುದಕ್ಕೆ ತುಂಬಿ ಹರಿಯುತ್ತಿರುವ ಚರಂಡಿಗಳೇ ಸಾಕ್ಷಿಯಾಗಿವೆ ಎಂದು ನಿವಾಸಿಗಳು ದೂರಿದ್ದಾರೆ.

ಚರಂಡಿಗಳ ಸಮಸ್ಯೆಯಿಂದ ವೃದ್ಧರಿಗೆ ಮತ್ತು ಮಕ್ಕಳಿಗೆ ಹಗಲಿನಲ್ಲಿ ತಿರುಗಾಡುವುದಕ್ಕೆ ಒಂದು ಸಮಸ್ಯೆ ಆದರೆ, ರಾತ್ರಿ ಸಮಯದಲ್ಲಿ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಇದರಿಂದ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡಬಹುದು ಎಂಬ ಭಯದಲ್ಲಿ ಜೀವನ ನಡೆಸುವುದು ಸಾರ್ವಜನಿಕರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ತಾಲೂಕು ಘೋಷಣೆ ನಂತರ ಹುಲಸೂರ ಕೇಂದ್ರ ಸ್ಥಳದಲ್ಲಿ ನಾಡ ತಹಶೀಲ್ದಾರ್‌ ಕಚೇರಿ ಆರಂಭವಾಗಿ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದ್ದರೂ ಹುಲಸೂರ ಕ್ಷೇತ್ರ ಮಾತ್ರ ಮೂಲಭೂತ ಸೌಕರ್ಯದ ಜತೆಗೆ ಸ್ವತ್ಛತೆಯಿಂದಲೂ ಮರೀಚಿಕೆಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಕೇಂದ್ರ ಮತ್ತು ರಾಜ್ಯ ಸರಕಾರ ಸ್ವತ್ಛತೆಗಾಗಿ ಸಾಕಷ್ಟು ಅನುದಾನ ನೀಡುತ್ತಿವೆ. ಹೀಗಿರುವಾಗ ನೂತನ ತಾಲೂಕು ಎಂದು ಘೋಷಣೆಯಾಗಿ ವರ್ಷ ಕಳೆಯುತ್ತ ಬಂದರೂ ಹುಲಸೂರ ಕ್ಷೇತ್ರ ಮಾತ್ರ ಅಸ್ವತ್ಛತೆ ತಾಣವಾಗಿ ಮಾರ್ಪಟ್ಟಿದೆ.

ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಕಡೆ ಗಮನಗರಿಸುವ ಮೂಲಕ ಚರಂಡಿ ಸ್ವತ್ಛತೆಗೆ ಮುಂದಾಗಬೇಕು ಎಂಬುದು ಜನರ ಒತ್ತಾಯವಾಗಿದೆ.  ಚರಂಡಿ ಸಮಸ್ಯೆ ಕುರಿತು ಸಿಇಒ ಮತ್ತು ತಹಶೀಲ್ದಾರ್‌ ಅವರು ಸಂಬಂಧಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಜನಸ್ಪಂದನ ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರು ಗಮನಕ್ಕೆ ತಂದಿದ್ದಾರೆ. ಆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. 
 ಸಂಜು ಭೈರೆ, ನಾಡ ತಹಶೀಲ್ದಾರ್‌ ಹುಲಸೂರ

ಹುಲಸೂರ ತಾಲೂಕು ಎಂದು ಘೋಷಣೆ ಮಾಡಲಾಗಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಮೂಲಭೂತ ಸೌಕರ್ಯ ಒದಗಿಸಿಕೊಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ
ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಬೇಕು.
 ಗಣೇಶ ಹಾರಕೂಡೆ, ಹುಲಸೂರ ಗ್ರಾಮಸ್ಥ

„ವೀರಾರೆಡ್ಡಿ ಆರ್‌. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next