Advertisement
ಏ.21ರಂದು ಸಂಜೆ 4:00ಕ್ಕೆ ಮಾಲಿಗೌಡರ ಮನೆಯಿಂದ ಕುಂಭಮೇಳ ಹಾಗೂ ಪೊಲೀಸ್ ಗೌಡರ ಮನೆಯಿಂದ ತೇರಿನ ಕಳಸ ಮತ್ತು ಅಣ್ಣೆಪ್ಪಗೌಡರ ಮನೆಯಿಂದ ಮಾಯೆಮರ್ತಪ ದಿವಟಿಗೆ, ಪುರವಂತರ ಆಟದೊಂದಿಗೆ ಸಕಲ ಮಂಗಲ ವಾದ್ಯಗಳೊಂದಿಗೆ ದೇವಾಲಯಕ್ಕೆ ತಲುಪುವುದು.
Related Articles
Advertisement
ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಅತ್ಯಂತ ವೈಭವದ ಗೋಪುರ ನಿರ್ಮಿಸಲಾಗಿದೆ. ಇಲ್ಲಿ ಉದ್ಬವ ಲಿಂಗವಾಗಿ ಹೊಂದಿರುವ ಶಂಭುಲಿಂಗೇಶ್ವರ ದೇವಸ್ಥಾನ ಪ್ರಸಿದ್ಧ ಪಡೆದಿದೆ. ಪೂಜೆ ಬಾವಿ, ಸ್ನಾನದ ಬಾವಿ, ತೀರ್ಥದ ಬಾವಿ, 60 ಲಿಂಗದ ಪರುಷ ಸ್ನಾನದ ಬಾವಿ, ಹೂವಿನ ಬಾವಿ, ಗಂಗಾ ಸ್ಥಳದ ಬಾವಿ, ಮನುಕುಲದ ಷಡುಣಗಳ ಶುದ್ಧಿಕರಣದ ಬಾವಿಗಳಿವೆ.
ಪೂರ್ವಾಭಿಮುಖವಾಗಿರುವ ಗುಡಿ ಆವರಣದಲ್ಲಿ 12 ಜ್ಯೋತಿ ರ್ಲಿಂಗಗಳಿವೆ. ಮಲ್ಲಿಕಾರ್ಜುನ ದೇವಾಲಯ, ಶ್ರೀ ವೀರಭದ್ರೇಶ್ವರ ದೇವಾಲಯ, ಭ್ರಮರಾಂಭೆ, ಕಾಳಿಕಾ ದೇವಾಲಯವಿದೆ. ಪಂಚಮುಖೀ ಪರಮೇಶ್ವರ ತ್ರಿಮೂರ್ತಿ ಲಿಂಗಗಳಿವೆ. ಮಲ್ಲಿಕಾರ್ಜುನ ಹಾಗೂ ಭ್ರಮರಾಂಬಿಕೆ ಹೊಂದಿರುವ 360 ಲಿಂಗಗಳು ಇರುವುದರಿಂದಲೇ ಇದು ಸಾಕ್ಷಾತ್ ಶ್ರೀಶೈಲ ಚಿಕ್ಕ ಕ್ಷೇತ್ರ ಎಂದು ಹೇಳಲಾಗುತ್ತಿದೆ.
ಇಲ್ಲಿ ಅನೇಕ ಶಾಸನಗಳನ್ನು ನೋಡಬಹುದಾಗಿದೆ. ನೂರಾರು ವರ್ಷಗಳ ಹಿಂದಿನ ರಥದ ಕಲ್ಲಿನ ಚಕ್ರಗಳು ಶಕ್ತಿಯುತವಾಗಿವೆ. ಹಿಂದೆ ರಥಕ್ಕೆ ಇದ್ದ ಬಿದರಿನ ತಡಕಿ ತೆಗೆದು 1985ರಲ್ಲಿ ಕಬ್ಬಿಣದ ತಡಕಿ ತಯಾರಿಸಿ ಅಲಂಕೃತಗೊಳಿಸಲಾಗಿದೆ. ಗ್ರಾಮಸ್ಥರು ಸೇರಿ ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡಿದ್ದು, ದೇವಸ್ಥಾನ ಕಟ್ಟಡಗಳ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದೆ.