Advertisement

ಕೊನೆಗೂ ʼಕಾಗೆ ಬಂಗಾರʼದ ಕಥೆ ಹೇಳಲು ರೆಡಿಯಾದ ಸೂರಿ: ವಿರಾಟ್‌ಗೆ ವಿಜಯ್‌ ಪುತ್ರಿ ನಾಯಕಿ

12:45 PM May 14, 2024 | Team Udayavani |

ಬೆಂಗಳೂರು: ನಿರ್ದೇಶಕ ಸುಕ್ಕ ಸೂರಿ ಕಳೆದ ಕೆಲ ವರ್ಷಗಳಿಂದ ಮಾಡಬೇಕೆಂದು ಅಂದುಕೊಂಡಿದ್ದ ಬಹು ನಿರೀಕ್ಷಿತ ʼಕಾಗೆ ಬಂಗಾರʼ ಸಿನಿಮಾದ ಬಗ್ಗೆ ಕೊನೆಗೂ ಪಾಸಿಟಿವ್‌ ಸುದ್ದಿಯೊಂದು ಹೊರಬಿದ್ದಿದೆ.

Advertisement

ʼಕೆಂಡ ಸಂಪಿಗೆʼ ಸಿನಿಮಾವನ್ನು ನೋಡಿದವರಿಗೆ ʼಕಾಗೆ ಬಂಗಾರʼದ ನೆನಪು ಇದ್ದೇ ಇರುತ್ತದೆ. ಇದೇ ಟೈಟಲ್‌ ನ್ನು ಇಟ್ಟುಕೊಂಡು ಸೂರಿ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿರುವುದು ನಿನ್ನೆ ಮೊನ್ನೆಯಿಂದಲ್ಲ. 2015 ರಿಂದಲೇ ಸೂರಿ ʼಕಾಗೆ ಬಂಗಾರʼ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿತ್ತು.

ಅಧಿಕೃತವಾಗಿ ಈ ಸಿನಿಮಾದಲ್ಲಿ ಪ್ರಶಾಂತ್‌ ಸಿದ್ಧಿ ಅವರು ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಕಾರಣಾಂತರಗಳಿಂದ ʼಕಾಗೆ ಬಂಗಾರʼ ಸೂರಿ ಅವರ ಇತರೆ ಸಿನಿಮಾಗಳ ನಡುವೆಯಲ್ಲಿ ನಿಂತು ಹೋಗಿತ್ತು.

ʼಪಾಪ್‌ಕಾರ್ನ್ ಮಂಕಿ ಟೈಗರ್ʼ  ಚಿತ್ರದಲ್ಲೂ ಸೂರಿ ʼಕಾಗೆ ಬಂಗಾರʼದ ಸುಳಿವು ನೀಡಿದ್ದರು. ಇದೀಗ ಬಂದಿರುವ ಲೇಟೆಸ್ಟ್‌ ಮಾಹಿತಿಯ ಪ್ರಕಾರ ಸೂರಿ ʼಕಾಗೆ ಬಂಗಾರʼ ಮಾಡಲು ಸಿದ್ಧರಾಗಿದ್ದಾರೆ. ಬಹು ಸಮಯದಿಂದ ಪೇಡಿಂಗ್‌ ನಲ್ಲಿಟ್ಟಿದ್ದ ಬಹು ನಿರೀಕ್ಷಿತ ಸಿನಿಮಾ ಆರಂಭಕ್ಕೆ ಸೂರಿ ಯೋಜನೆಯನ್ನು ಹಾಕಿಕೊಂಡಿದ್ದಾರೆ.

‘ಕಾಗೆ ಬಂಗಾರʼ ದಲ್ಲಿ ಈಗಾಗಲೇ ʼಕಿಸ್‌ʼ ಮೂಲಕ ಮನಗೆದ್ದು ʼರಾಯಲ್‌ ಆಗಿ ಮಿಂಚಲು ಹೊರಟಿರುವ ನಟ ವಿರಾಟ್‌ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಈ ಸಿನಿಮಾದ ಮೂಲಕ ದುನಿಯಾ ವಿಜಯ್ ಅವರ ಮಗಳು ರಿತನ್ಯಾ ವಿಜಯ್ ಅವರು ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿತನ್ಯಾ ಈಗಾಗಲೇ ಜಡೇಶಾ ಕೆ ಹಂಪಿ ಅವರ ಪ್ರಾಜೆಕ್ಟ್‌ ನಲ್ಲಿ ಕಾಣಿಸಿಕೊಳ್ಳುವ ತಯಾರಿಯಲ್ಲಿದ್ದಾರೆ.

Advertisement

ಈ ಸಿನಿಮಾವನ್ನು ಜಯಣ್ಣ ಫಿಲ್ಮ್ಸ್ ನಿರ್ಮಾಣ ಮಾಡಲಿದ್ದು, ಇದೇ ಜೂನ್‌ ತಿಂಗಳಿನಿಂದ ಸಿನಿಮಾದ ಚಿತ್ರೀಕರಣ ಆರಂಭಗೊಳ್ಳಲಿದೆ ಎಂದು ʼಸಿನಿಮಾ ಎಕ್ಸ್‌ ಪ್ರೆಸ್‌ʼ ವರದಿ ಮಾಡಿದೆ.

“ನಾವು ದೊಡ್ಡ ಯೋಜನೆಯಲ್ಲಿ ಸಹಕರಿಸಲು ಬಯಸಿದ್ದ ವೇಳೆಯಲ್ಲಿ ಪರಿಪೂರ್ಣವೆಂದು ಭಾವಿಸಿದ ಸಬ್ಜೆಕ್ಟ್‌ ನ್ನು ಸೂರಿ ತಂದಿದ್ದಾರೆ” ಎಂದು ಜಯಣ್ಣ ʼಸಿನಿಮಾ ಎಕ್ಸ್‌ ಪ್ರೆಸ್‌ʼ ಗೆ ಹೇಳಿದ್ದಾರೆ.

“ಪ್ರೇಕ್ಷಕರು ʼಕಾಗೆ ಬಂಗಾರʼಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈಗ ಅದನ್ನು ನಾವು ತೆರೆಮೇಲೆ ತರಲು ಸಿದ್ದರಾಗಿದ್ದೇವೆ. ನನ್ನನ್ನು ಪ್ರತಿ ಬಾರಿ ಸಂದರ್ಶಿಸಿದಾಗ, ʼಕಾಗೆ ಬಂಗಾರʼದ ಬಗ್ಗೆ ನನ್ನನ್ನು ಕೇಳಲಾಗುತ್ತಿತ್ತು.  ನಾನು ಯಾವಾಗಲೂ ಹೇಳುತ್ತಿದ್ದೆ, ‘ಚಿನ್ನದಂತಹ ನಿರ್ಮಾಪಕ ಸಿಕ್ಕಾಗ ಮಾತ್ರ ʼಕಾಗೆ ಬಂಗಾರʼ ಮಾಡುತ್ತೇನೆಂದು. ಜಯಣ್ಣ ನನ್ನ ʼಕಾಗೆ ಬಂಗಾರʼದ ದೃಷ್ಟಿಕೋನವನ್ನು ಅರಿತಿದ್ದಾರೆ. ವಿರಾಟ್ ನಮ್ಮ ಸಿನಿಮಾದ ನಾಯಕನಾಗಿದ್ದು, ರಿತನ್ಯ ವಿಜಯ್ ನಾಯಕಿಯಾಗಿ ನಟಿಸಲಿದ್ದಾರೆ” ಎಂದು ಸೂರಿ ಹೇಳಿದ್ದಾರೆ.

ʼಕಾಗೆ ಬಂಗಾರʼ ವರ್ತಮಾನದ ಕಥೆಯನ್ನೊಳಗೊಳ್ಳಲಿದೆ. ಇದಕ್ಕೆ ಹಿನ್ನಲೆ ಇರುವುದಿಲ್ಲ. ʼಕಾಗೆ ಬಂಗಾರʼ ʼಕೆಂಡಸಂಪಿಗೆʼ ಮತ್ತು ʼಪಾಪ್‌ಕಾರ್ನ್ ಮಂಕಿ ಟೈಗರ್ʼ ಎರಡರಲ್ಲೂ ನೇತು ಬಿಟ್ಟಿರುವ ಸಡಿಲವಾದ ತುದಿಗಳ ಭಾಗವನ್ನು ಸಂಪರ್ಕಿಸುತ್ತದೆ ಎಂದು ಹೇಳಿದ್ದಾರೆ.

ಈ ಚಿತ್ರಕ್ಕೆ ಹೆಚ್ಚಿನ ಬಜೆಟ್ ಬೇಕಾಗಿದ್ದು, ವ್ಯಾಪಕವಾದ ಸೆಟ್ ವರ್ಕ್ ಜೊತೆಗೆ ಅಮೋಘ ದೃಶ್ಯದ ಅನುಭವ ನೀಡಲಿದೆ. ಹಲವಾರು ಪ್ರಮುಖ ನಟರು ಶೀಘ್ರದಲ್ಲೇ ಯೋಜನೆಗೆ ಸೇರಿಕೊಳ್ಳುತ್ತಾರೆ. ಅವರೆಲ್ಲ ತಂಡ ಸೇರಿಕೊಂಡ ಬಳಿಕವಷ್ಟೇ ಸಿನಿಮಾವನ್ನು ಘೋಷಿಸಲಾಗುತ್ತದೆ ಎಂದರು.

ಜಯಣ್ಣ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ಜಯಣ್ಣ ಮತ್ತು ಬೋಗೇಂದ್ರ ನಿರ್ಮಾಣ ಮಾಡಲಿದ್ದು, ಚಿತ್ರವನ್ನು ಸೂರಿ ಮತ್ತು ಅಮ್ರಿ ಮತ್ತು ಸುರೇಂದ್ರನಾಥ್ ಅವರೊಂದಿಗೆ ಬರೆಯಲಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.‌

Advertisement

Udayavani is now on Telegram. Click here to join our channel and stay updated with the latest news.

Next