Advertisement

ಪುನೀತ್ ಫ್ಯಾನ್ಸ್ ಗೆ ಸಿಹಿ ಸುದ್ದಿ|ಹ್ಯಾಟ್ರಿಕ್ ಬಾರಿಸಲು ಸಿದ್ಧರಾದ ಅಪ್ಪು-ಆನಂದರಾಮ್

07:38 PM Sep 18, 2021 | Team Udayavani |

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಸಿಹಿ ಸುದ್ದಿ ನೀಡಿದ್ದಾರೆ. ಅವರು ಅಪ್ಪು ಜೊತೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ.

Advertisement

ಪುನೀತ್ ಹಾಗೂ ಆನಂದರಾಮ್ ಅವರ ಕಾಂಬಿನೇಷನ್‍ನಲ್ಲಿ ಸಿದ್ಧವಾದ ‘ರಾಜಕುಮಾರ’ ಚಿತ್ರಕ್ಕೆ ಅಮೋಘ ಯಶಸ್ಸು ದೊರೆಯಿತು. ಸಿನಿ ಅಭಿಮಾನಿಗಳ ಹೃದಯ ಗೆಲ್ಲುವುದರ ಜೊತೆಗೆ ಗಲ್ಲಾಪೆಟ್ಟಿಗೆಯನ್ನೂ ತುಂಬಿಸಿ ಬ್ಲಾಕ್ ಬಸ್ಟರ್ ಸಿನಿಮಾಗಳ ಸಾಲಿಗೆ ಸೇರಿತು. ರಾಜಕುಮಾರ ನಂತರ ಎರಡನೇ ಬಾರಿಗೆ ಒಂದಾದ ಈ ತಾರಾ ಜೋಡಿ ‘ಯುವರತ್ನ’ ಹೆಸರಿನ ಅದ್ಭುತ ಸಿನಿಮಾ ನೀಡಿತು. ಕೋವಿಡ್ ಭೀತಿಯ ನಡುವೆಯೂ ತೆರೆ ಕಂಡ ಈ ಚಿತ್ರ ವಿಜಯದ ನಗೆ ಬೀರಿತು.

ಯುವರತ್ನದ ಬಳಿಕ ಆನಂದರಾಮ್ ಅವರ ಮುಂದಿನ ಸಿನಿಮಾದ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಅವರ ಮುಂದಿನ ಸಿನಿಮಾ ಯಾರ ಜೊತೆ ಎನ್ನುವ ಪ್ರಶ್ನೆ ಮೂಡಿತ್ತು. ಅದಕ್ಕೀಗ ಉತ್ತರ ನೀಡಿರುವ ಆನಂದರಾಮ್, ಮೂರನೇ ಬಾರಿ ಪುನೀತ್ ಜೊತೆ ಕೈ ಜೋಡಿಸಿದ್ದಾರೆ. ಇಂದು ಸಂಜೆ ತಮ್ಮ ಹೊಸ ಸಿನಿಮಾದ ಬಗ್ಗೆ ಮಾಹಿತಿ ನೀಡಿರುವ ಅವರು, ತಮ್ಮ ಹಾಗೂ ಅಪ್ಪು ಅವರ ಹೊಸ ಸಿನಿಮಾ ಮುಂದಿನ ವರ್ಷ ಸೆಟ್ಟೇರಲಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next