Advertisement

ನಿರ್ದೇಶಕ ಸಂತೋಷ್ ಆನಂದರಾಮ್ ಮನೆಗೆ ಬಂತು ಹೊಸ ಕಾರು

01:12 PM Aug 31, 2021 | Team Udayavani |

ಬೆಂಗಳೂರು: ಸ್ಯಾಂಡಲ್ ವುಡ್ ಪ್ರತಿಭಾವಂತ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೊಸ ಕಾರು ಖರೀದಿಸಿದ್ದಾರೆ.

Advertisement

ಸಂತೋಷ್ ಆನಂದ್ ರಾಮ್ ಅವರು ದುಬಾರಿ ಕಾರು ಬಿಎಂಡಬ್ಲ್ಯೂ 520ಡಿ ತಮ್ಮದಾಗಿಸಿಕೊಂಡಿದ್ದಾರೆ. ಕುಟುಂಬದ ಜೊತೆ ಕಾರು ಖರೀದಿಸಿದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಂದೆ-ತಾಯಿ ಪತ್ನಿ ಮತ್ತು ಮುದ್ದಾದ ಮಗು ಸೇರಿದಂತೆ ಇಡೀ ಕುಟುಂಬ ಜೊತೆಯಲ್ಲಿದೆ. ಫೋಟೋ ಜೊತೆಗೆ ಬಿಎಂಡಬ್ಲ್ಯೂ 520ಡಿಗೆ ಮನೆಗೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ.

 

Advertisement

ಇನ್ನು ಸಂತೋಷ್ ಆನಂದ್ ರಾಮ್, ರಾಕಿಂಗ್ ಸ್ಟಾರ್ ಯಶ್ ನಟನೆಯ ಮಿಸ್ಟರ್ ಅಂಡ್ ಮಿಸಸ್ ‘ರಾಮಾಚಾರಿ’ ಸಿನಿಮಾ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡರು. ಬಳಿಕ ಪವರ್ ಸ್ಟಾರ್ ಜೊತೆ ‘ರಾಜಕುಮಾರ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿತ್ತು. ಈ ಸಿನಿಮಾ ಬಳಿಕ ಸಂತೋಷ್ ಆನಂದ್ ಮತ್ತೆ ಪುನೀತ್ ರಾಜ್ ಕುಮಾರ್ ಜೊತೆ ‘ಯವರತ್ನ’ ಸಿನಿಮಾ ಮಾಡಿದರು. ಈ ವರ್ಷ ತೆರೆಗೆ ಬಂದ ಈ ಚಿತ್ರವೂ ಕೂಡ ಬಿಗ್ ಹಿಟ್ ಆಯಿತು. ಸಂತೋಷ್ ಆನಂದ್ ರಾಮ್ ಅವರು ನಿರ್ದೇಶಿಸಿದ ಮೂರು ಚಿತ್ರಗಳು ದೊಡ್ಡ ಯಶಸ್ಸು ಕಂಡು ದಾಖಲೆ ಬರೆದವು.

Advertisement

Udayavani is now on Telegram. Click here to join our channel and stay updated with the latest news.

Next