Advertisement
ರಾಜ್ ಬಿ ಶೆಟ್ಟಿ ಚಂದನವನದಲ್ಲಿ ಈಗಾಗಲೇ ತಾನೊಬ್ಬ ನಿರ್ದೇಶಕ ಮಾತ್ರವಲ್ಲ ಅದ್ಭುತ ನಟ ಕೂಡ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಅವರ ನಟನಾ ಕೌಶಲ್ಯ ಮಾಲಿವುಡ್ ಮಂದಿಯನ್ನೂ ಫಿದಾ ಆಗಿಸಿದೆ. ಇತ್ತೀಚೆಗಷ್ಟೇ ಮಮ್ಮುಟ್ಟಿ ಅವರೊಂದಿಗೆ ʼಟರ್ಬೊʼ ಸಿನಿಮಾದಲ್ಲಿ ಖಡಕ್ ರೋಲ್ ನಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಗಳಿಸಿದ್ದರು.
Related Articles
Advertisement
“ಮೊದಲಿಗೆ ನಾವು ಸಿನಿಮಾ ಮಾಡಲು ಶುರು ಮಾಡಿದ್ದು ಮಂಗಳೂರಿನಿಂದ. ʼಒಂದು ಮೊಟ್ಟೆಯ ಕಥೆʼ ಸಿನಿಮಾ ಮಾಡುವಾಗ ನಮಗೆ ಒಳ್ಳೆಯ ಕಥೆಯನ್ನು ತುಂಬಾ ಜನರಿಗೆ ತಲುಪಿಸಬೇಕೆನ್ನುವ ಉದ್ದೇಶವಿತ್ತು. ‘ಮ್ಯಾಂಗೊ ಪಿಕಲ್ ಎಂಟರ್‌ಟೈನ್‌ಮೆಂಟ್’ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ನಾನು ಮತ್ತು ನನ್ನ ತಂಡ ಆ ಸಿನಿಮಾವನ್ನು ಮಾಡಿದ್ವೀವಿ. ಆ ಸಿನಿಮಾ ನಿರೀಕ್ಷೆಗೂ ಮೀರಿ ಹಿಟ್ ಕೊಟ್ಟಿತು. ಒಂದು ಒಳ್ಳೆಯ ಕಥೆಯನ್ನು ಹೇಳಬೇಕು. ಆ ಕಥೆಯನ್ನು ಪ್ರೇಕ್ಷಕರು ಒಪ್ಪುತ್ತಾರೆ ಎನ್ನುವುದು ನಾನು ಹಾಗೂ ನನ್ನ ತಂಡದ ಅಂದುಕೊಂಡಿರುವ ಸೂತ್ರ. ಅದೇ ನಿಟ್ಟಿನಲ್ಲಿ ಇನ್ನೊಂದು ಸಿನಿಮಾವನ್ನು ತರುತ್ತಿದ್ದೇವೆ. ‘ಮ್ಯಾಂಗೊ ಪಿಕಲ್ ಎಂಟರ್‌ಟೈನ್‌ಮೆಂಟ್’ ಇದನ್ನು ನಿರ್ಮಾಣ ಮಾಡುತ್ತಿದೆ. ಈ ಬ್ಯಾನರ್ ಎರಡನೇ ಸಿನಿಮಾ ಇದು. ಈ ಸಿನಿಮಾದ ಪೋಸ್ಟರ್ ನ್ನು ನಾಳೆ ಹಂಚಿಕೊಳ್ಳುತ್ತೇನೆ. ಈ ಸಿನಿಮಾ ನನ್ನ ವೃತ್ತಿ ಜೀವನದಲ್ಲಿ ನಾನು ತುಂಬಾ ಹೆಮ್ಮೆಪಡಬಹುದಾದ ಸಿನಿಮಾ ಆಗಿರಲಿದೆ. ಕಮರ್ಷಿಯಲಿ ಒಂದು ಕಥೆ ಹೇಳಿ ದುಡ್ಡು ಮಾಡುವುದಕ್ಕಿಂತ, ಒಂದೊಳ್ಳೆ ಸಿನಿಮಾ ಮಾಡುತ್ತೇವೆ. ಆ ಮೇಲೆ ಅದರ ಗುಣಮಟ್ಟವನ್ನು ಅದು ಕಮರ್ಷಿಯಲಿ ಎಷ್ಟು ದುಡ್ಡು ಮಾಡಬೇಕೆನ್ನುವುದನ್ನು ಪ್ರೇಕ್ಷಕರು ನಿರ್ಧಾರ ಮಾಡಬೇಕು ಅಂಥ ನಂಬಿದಂತಹ ಸಿನಿಮಾ ಅದು. ಅದರ ಹೆಸರು ಹಾಗೂ ಪೋಸ್ಟರ್ ನ್ನು ನಾಳೆ ಸಂಜೆ 4 ಗಂಟೆಗೆ ಅನೌನ್ಸ್ ಮಾಡುತ್ತಿದ್ದೇವೆ. ಈ ಸಿನಿಮಾವನ್ನು ನಾನು ಮತ್ತು ನನ್ನ ತಂಡ ಪ್ರಸ್ತುತ ಪಡಿಸುತ್ತಿದ್ದೇವೆ. ಎಂದಿನಂತೆ ಪ್ರೀತಿ, ಪ್ರೋತ್ಸಾಹ ಇರಲಿ” ಎಂದು ಹೇಳಿದ್ದಾರೆ.
ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವುದರ ಬಗ್ಗೆ ರಾಜ್ ಬಿ ಶೆಟ್ಟಿ ಗುಟ್ಟು ಬಿಟ್ಟುಕೊಟ್ಟಿಲ್ಲ.
ʼಒಂದು ಮೊಟ್ಟೆಯ ಕಥೆʼಯನ್ನು ಪವನ್ ಕುಮಾರ್ – ಸುಹಾನ್ ಪ್ರಸಾದ್ ನಿರ್ಮಾಣ ಮಾಡಿದ್ದರು. ರಾಜ್ ಬಿ ಶೆಟ್ಟಿ, ಉಷಾ ಭಂಡಾರಿ, ಶೈಲಶ್ರೀ, ಪ್ರಕಾಶ್ ತುಮಿನಾಡು, ಶ್ರೇಯಾ ಅಂಚನ್, ದೀಪಕ್ ರೈ ಪಾಣಾಜೆ, ವಿಜೆ ವಿನಿತ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದರು.