Advertisement

ಮಲ್ಟಿಪ್ಲೆಕ್ಸ್‌ಗೆ ಧಿಕ್ಕಾರ ಕೂಗಿದ ಪ್ರೇಮ್‌

03:03 PM Oct 11, 2018 | |

ಕೆಲವು ದಿನಗಳ ಹಿಂದಷ್ಟೇ ಪ್ರೇಮ್‌, ಮಲ್ಟಿಪ್ಲೆಕ್ಸ್‌ಗಳು ನಿರ್ಮಾಪಕರಿಗೆ ಕೊಡುತ್ತಿರುವ ಶೇಕಡವಾರುವನ್ನು ಹೆಚ್ಚಿಸಬೇಕು. ಈ ಮೂಲಕ ಕನ್ನಡ ನಿರ್ಮಾಪಕರಿಗೆ ಸಹಾಯವಾಗಬೇಕೆಂದು ಹೇಳಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದ್ದರು. ಪ್ರಸ್ತುತ ಮಲ್ಟಿಪ್ಲೆಕ್ಸ್‌ ಶೇ 50:50 ಅನುಪಾತದಲ್ಲಿ ಕನ್ನಡ ಸಿನಿಮಾಗಳ ಪ್ರದರ್ಶನ ಮಾಡುತ್ತಿವೆ. ಕಲೆಕ್ಷನ್‌ನ ಒಟ್ಟು ಹಣದಲ್ಲಿ ಕೇವಲ ಶೇ 50 ಅಷ್ಟೇ ನಿರ್ಮಾಪಕರಿಗೆ ಸೇರುತ್ತಿದೆ. ಪ್ರೇಮ್‌ ಈ ಧೋರಣೆಯನ್ನು ವಿರೋಧಿಸಿ, ಕಲೆಕ್ಷನ್‌ನ ಅರ್ಧಕ್ಕರ್ಧ ಹಣವನ್ನು ಮಲ್ಟಿಪ್ಲೆಕ್ಸ್‌ ಪಡೆದರೆ ಇದರಿಂದ ನಿರ್ಮಾಪಕನಿಗೆ ಕಷ್ಟವಾಗುತ್ತಿದೆ. ಹಾಗಾಗಿ, ಕನ್ನಡ ಸಿನಿಮಾ ವಿಷಯದಲ್ಲಿ ಮಲ್ಟಿಪ್ಲೆಕ್ಸ್‌ಗಳು ತಮ್ಮ ಧೋರಣೆಯನ್ನು ಬದಲಿಸಬೇಕು ಎಂದು ಕೇಳಿಕೊಂಡಿದ್ದರು. ಆದರೆ, ಮಲ್ಟಿಪ್ಲೆಕ್ಸ್‌ಗಳು ಮಾತ್ರ ಈ ಬಗ್ಗೆ ಆಸಕ್ತಿ ವಹಿಸಿಲ್ಲ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಎಂದಿದ್ದ ಮಲ್ಟಿಪ್ಲೆಕ್ಸ್‌ಗಳು ಈಗ ಈ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಆದರೆ, ಇಲ್ಲಿನ ಲೋಕಲ್‌ ಮಾಲ್‌ಗ‌ಳು ಮಾತ್ರ ನಿರ್ಮಾಪಕರಿಗೆ ಹೆಚ್ಚಿನ ಹಣ ನೀಡಲು ಒಪ್ಪಿಕೊಂಡಿವೆ. ಮಲ್ಟಿಪ್ಲೆಕ್ಸ್‌ಗಳು ಮಾತ್ರ ಈ ಬಗ್ಗೆ ಮುಂದೆ ಬಾರದಿರುವುದು ಪ್ರೇಮ್‌ ಸಿಟ್ಟಿಗೆ ಕಾರಣವಾಗಿದೆ.

Advertisement

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ಪ್ರೇಮ್‌, “ಮಲ್ಟಿಪ್ಲೆಕ್ಸ್‌ಗಳು ಕನ್ನಡ ಸಿನಿಮಾ, ಕನ್ನಡ ನಿರ್ಮಾಪಕರ ವಿರೋಧಿಯಾಗಿವೆ. ಬೇರೆ ಭಾಷೆಯ ಸಿನಿಮಾಗಳಿಗೆ ಶೇ 55 ಕೊಡುವ ಮಲ್ಟಿಪ್ಲೆಕ್ಸ್‌ಗಳು ಕನ್ನಡ ನಿರ್ಮಾಪಕರಿಗೆ ಶೇ 50 ಕೊಡುತ್ತಿದೆ. ಈ ಮಹಾಮೋಸಕ್ಕೆ ನನ್ನ ಧಿಕ್ಕಾರ. ಈ ಧೋರಣೆಯಿಂದ ಇದರಿಂದ ನಿರ್ಮಾಪಕರಿಗೆ ತೊಂದರೆಯಾಗುತ್ತದೆ. ಈ ಬಗ್ಗೆ ಮಾತನಾಡಿ, ಹೆಚ್ಚಿನ ಶೇಕಡವಾರು ನೀಡಬೇಕೆಂದು ಕೇಳಿಕೊಂಡರೂ ಅದಕ್ಕೆ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ಇಲ್ಲಿ ಲೋಕಲ್‌ ಮಾಲ್‌ನ ಮಾಲೀಕರು ಹೆಚ್ಚಿನ ಶೇಕಡವಾರು ಕೊಡಲು ಮುಂದಾಗಿದ್ದಾರೆ. ಮಲ್ಟಿಪ್ಲೆಕ್ಸ್‌ನ ಈ ಧೋರಣೆ ವಿರುದ್ಧ ಮಂಡಳಿ ಕ್ರಮ ಕೈಗೊಂಡು, ನಿರ್ಮಾಪಕರಿಗೆ ನೆರವಾಗಬೇಕು’ ಎಂಬುದು ಪ್ರೇಮ್‌ ಮಾತು. 

Advertisement

Udayavani is now on Telegram. Click here to join our channel and stay updated with the latest news.

Next