Advertisement

ದರ್ಶನ್ ತಾಯಿ ನನಗೆ ಕೈ ತುತ್ತು ನೀಡಿದ್ದರು

12:21 PM Jul 18, 2021 | Team Udayavani |

ಬೆಂಗಳೂರು: ಕರಿಯ ಸಿನಿಮಾ ಸಂದರ್ಭದಲ್ಲಿ ಅವರ ಮನೆಗೆ ಹೋಗಿದ್ದೆ. ದರ್ಶನ್ ತಾಯಿ ನನಗೆ ಕೈ ತುತ್ತು ನೀಡಿದ್ದರು ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ‌.

Advertisement

ಇಂದ್ರಜಿತ್ ಲಂಕೇಶ್ ಹಾಗೂ ನಿರ್ಮಾಪಕ ಉಮಾಪತಿ ವಿರುದ್ಧ ಆಕ್ರೋಶದಿಂದ ಮಾತನಾಡುತ್ತಿದ್ದ ವೇಳೆ ದರ್ಶನ್ ಅವರು ಪ್ರೇಮ್ ಅವರಿಗೆ ಪುಡುಂಗ್ ಎನ್ನುವ ಪದ ಬಳಸಿದ್ದರು. ಇದನ್ನು ಖಂಡಿಸಿ ಪ್ರೇಮ್ ಫೇಸ್ ಬುಕ್ ನಲ್ಲಿ ಪೋಸ್ಟ್‌ ಹಾಕಿ ಅಸಮಾಧಾನ ಹೊರಹಾಕಿದ್ದರು. ಇದೀಗ ತಮ್ಮ ಪೋಸ್ಟ್‌ ಕುರಿತು ಸ್ಪಷ್ಟನೆ ನೀಡಿದ್ದಾರೆ.

ದರ್ಶನ್ ನನಗೆ, ರಕ್ಷಿತಾಗೆ ಆತ್ಮೀಯರು. ಆದರೆ ಅವರು ನಿನ್ನೆ ನಿರ್ದೇಶಕರ ಬಗ್ಗೆ ಹಾಗೆ ಹೇಳಿದ್ದು ಸರಿಯಲ್ಲ. ಅದು ನನಗೆ ನೋವುಂಟು ಮಾಡಿತ್ತು. ಆ ವಿಚಾರಕ್ಕಷ್ಟೇ ನಾನು ಪೋಸ್ಟ್ ಹಾಕಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next