ಇನ್ನಷ್ಟು ಭರವಸೆ ಇಟ್ಟುಕೊಂಡಿದ್ದು, ಅದನ್ನು ನೆರವೇರಿಸುವುದರ ಜತೆಗೆ ಅವರ ಆಸೆ, ಆಶೋತ್ತರಗಳಿಗೆ ಧ್ವನಿಯಾಗುವಂತೆ ತನ್ನನ್ನು ಪ್ರೇರೇಪಿಸಿದೆ ಎಂದು ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಹರಿದಾಸ್ ಗಾಂಭೀರ್ ಹೇಳಿದರು.
Advertisement
ಅವರು ಧರಿತ್ರಿ ಕೃಷಿಕರ ಸಂಘ ಕನ್ಯಾಡಿ ಇದರ ವತಿಯಿಂದ ಕನ್ಯಾಡಿಯ ಸೇವಾನಿಕೇತನ ಸಭಾಭವನದಲ್ಲಿ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಚುನಾಯಿತರಾದ ನೂತನ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ನಡೆದ ಸಮ್ಮಾನ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು. ಧರಿತ್ರಿ ಕೃಷಿಕರ ಸಂಘ ಕನ್ಯಾಡಿಯ ಅಧ್ಯಕ್ಷ ವಿನಾಯಕ ರಾವ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್ ಪ್ರಸಾದ್ ಭಾಗವಹಿಸಿದ್ದರು.