Advertisement

Kabzaa 2 ಸೇರಿ ಒಂದೇ ದಿನ 5 ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಅನೌನ್ಸ್‌ ಮಾಡಿದ ಆರ್.ಚಂದ್ರು

11:02 AM Jan 24, 2024 | Team Udayavani |

ಬೆಂಗಳೂರು: ʼಕಬ್ಜʼ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾದಲ್ಲಿ ಛಾಪು ಮೂಡಿಸಿದ ಚಂದನವನದ ನಿರ್ದೇಶಕ ಆರ್.‌ ಚಂದ್ರು ಒಂದೇ ದಿನ ತನ್ನ‌ ಬ್ಯಾನರ್ ಅಡಿಯಲ್ಲಿ 5 ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಅನೌನ್ಸ್‌ ಮಾಡಿದ್ದಾರೆ.

Advertisement

ಮಂಗಳವಾರ(ಜ.23 ರಂದು) ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಿನಿರಂಗದ ಇತರೆ ಗಣ್ಯರ ಸಮ್ಮುಖದಲ್ಲಿ ಆರ್‌. ಚಂದ್ರು  ಆರ್.‌ ಸಿ ಸಂಸ್ಥೆಯಿಂದ ಸಿನಿಮಾಗಳನ್ನು ಅನೌನ್ಸ್‌ ಮಾಡಿದ್ದಾರೆ.

ʼಫಾದರ್ʼ, ʼಪಿಓಕೆʼ, ʼಶ್ರೀರಾಮಬಾಣ ಚರಿತೆʼ, ʼಡಾಗ್ʼ, ʼಕಬ್ಜ 2ʼ ಸಿನಿಮಾಗಳನ್ನು ಆರ್.ಚಂದ್ರು ಘೋಷಣೆ ಮಾಡಿದ್ದಾರೆ.

ಉಪ್ಪಿ, ಸುದೀಪ್‌ ಮಿಂಚಿದ್ದ ʼಕಬ್ಜʼ ಸಿನಿಮಾದ ಸೀಕ್ವೆಲ್‌ ಕೂಡ ಈ ಐದು ಸಿನಿಮಾಗಳಲ್ಲಿದ್ದು, ಬಾಲಿವುಡ್‌ ನಿರ್ಮಾಪಕ ಆನಂದ್‌ ಪಂಡಿತ್‌ ʼಕಬ್ಜ-2ʼ ಸಿನಿಮಾವನ್ನು ಅರ್ಪಿಸುತ್ತಿದ್ದು, ಅಲಂಕಾರ್‌  ಪಾಂಡಿಯನ್‌ ಅವರ ಸಹಯೋಗದೊಂದಿಗೆ ಸಿನಿಮಾ ಮೂಡಿ ಬರಲಿದೆ.

ʼಫಾದರ್‌ʼ ಎನ್ನುವ ಸಿನಿಮಾಕ್ಕೆ ರಾಜಾಮೋಹನ್‌ ನಿರ್ದೇಶನ ಮಾಡುತ್ತಿದ್ದು, ಆರ್.‌ ಚಂದ್ರು ನಿರ್ಮಾಣ ಮಾಡಲಿದ್ದಾರೆ. ʼಡಾಗ್‌ʼ, ಶ್ರೀರಾಮಬಾಣ ಚರಿತೆʼ ಎನ್ನುವ ಸಿನಿಮಾಕ್ಕೆ ಆರ್.‌ ಚಂದ್ರು ಬಂಡವಾಳ ಹಾಕುತ್ತಿದ್ದು, ನಿರ್ದೇಶಕರು ಯಾರೆನ್ನುವುದು ಇದುವರೆಗೆ ರಿವೀಲ್‌ ಮಾಡಿಲ್ಲ.

Advertisement

ʼಕಬ್ಜ‌ʼ ಬಳಿಕ ಆರ್.‌ ಚಂದ್ರು ʼಪಿಓಕೆʼ ಸಿನಿಮಾವನ್ನು‌ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದ ಪಾತ್ರವರ್ಗದ ಬಗ್ಗೆ ಕುತೂಹಲ ಹೆಚ್ಚಿದೆ.

ಆರ್.‌ ಚಂದ್ರು ಸಿನಿಮಾವನ್ನು ಮೆಚ್ಚುವ ಸಿನಿ ಪ್ರೇಕ್ಷಕರು ಐದು ಸಿನಿಮಾಗಳ ಘೋಷಣೆಯಿಂದ ಖುಷ್‌ ಆಗಿದ್ದಾರೆ.

ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಿರ್ಮಾಪಕ ಆನಂದ್‌ ಪಂಡಿತ್‌, ನಟ ಉಪೇಂದ್ರ, ಡಾರ್ಲಿಂಗ್‌ ಕೃಷ್ಣ,ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್‌, ನಿರ್ಮಾಪಕ ಜಾಕ್‌ ಮುಂಜು ಮುಂತಾದವರು ಭಾಗಿಯಾಗಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next