Advertisement

ನೇರ ತೆರಿಗೆ ಸಂಗ್ರಹ ಪ್ರಮಾಣ 5% ರಷ್ಟು ಏರಿಕೆ

09:59 AM Dec 03, 2019 | Team Udayavani |

ಹೊಸದಿಲ್ಲಿ: ನವೆಂಬರ್‌ ತನಕದ ಒಟ್ಟು ನೇರ ತೆರಿಗೆ ಸಂಗ್ರಹವು ಶೇ. 5ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಆದಾಯ ಸಂಗ್ರಹಣೆಯ ಮೇಲೆ ಕಾರ್ಪೊರೇಟ್‌ ತೆರಿಗೆ ಕಡಿತ ಯಾವುದೇ ಪರಿಣಾಮವನ್ನುಂಟು ಮಾಡಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

Advertisement

ಲೋಕಸಭೆಯಲ್ಲಿ 2019ರ ತೆರಿಗೆ ಕಾನೂನು ತಿದ್ದುಪಡಿ ಮಸೂದೆ ಕುರಿತ ಚರ್ಚೆಗೆ ಉತ್ತರಿಸಿದ ಸಚಿವರು, ನೇರ ತೆರಿಗೆ ಸಂಗ್ರಹದಲ್ಲಿ ಯಾವುದೇ ಇಳಿಕೆಯಾಗಿಲ್ಲ. ವಾಸ್ತವವಾಗಿ, ಈ ಹಣಕಾಸು ವರ್ಷದ ನವೆಂಬರ್‌ ವರೆಗೆ ಒಟ್ಟು ನೇರ ತೆರಿಗೆ ಸಂಗ್ರಹದಲ್ಲಿ ಶೇಕಡಾ 5ರಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ.

ಕಾರ್ಪೊರೇಟ್‌ ತೆರಿಗೆಯನ್ನು ಕಡಿಮೆ ಮಾಡುವುದರ ಮುಖ್ಯ ಉದ್ದೇಶ ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಹೂಡಿಕೆಯನ್ನು ಆಕರ್ಷಿಸುವ ಗುರಿಯಾಗಿತ್ತು. ಕಾರ್ಪೊರೇಟ್‌ ತೆರಿಗೆ ದರ ಕಡಿತದ ಬಗ್ಗೆ ಹೂಡಿಕೆ ಮಾಡಲು ಹಲವು ದೇಶೀಯ ಮತ್ತು ಜಾಗತಿಕ ಸಂಸ್ಥೆಗಳು ಆಸಕ್ತಿ ವ್ಯಕ್ತಪಡಿಸಿವೆ ಎಂದು ಸಚಿವರು ಹೇಳಿದ್ದಾರೆ.

ವಿತ್ತೀಯ ಬೆಳವಣಿಗೆ ಇಳಿಮುಖವಾಗುತ್ತಿರುವುದಕ್ಕೆ ವಿಪಕ್ಷಗಳ ಟೀಕೆ ಕೇಳಲು ಸರಕಾರ ಸಿದ್ಧವಿಲ್ಲೆ ಎಂಬ ಆರೋಪವನ್ನೂ ಅವರು ತಳ್ಳಿ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next