Advertisement

ನೇರ ತೆರಿಗೆ ಖೋತಾ: ತನಿಖೆಗೆ ಆದೇಶ

05:51 AM Mar 29, 2019 | Team Udayavani |

ಹೊಸದಿಲ್ಲಿ: ಪ್ರಸಕ್ತ ವರ್ಷದ ನೇರ ತೆರಿಗೆಯ ಸಂಗ್ರಹವು ನಿರೀಕ್ಷಿತ ಮಟ್ಟಕ್ಕಿಂತ ಶೇ. 15ರಷ್ಟು ಕುಸಿದಿದ್ದು, ಆ ಕುರಿತು ತನಿಖೆ ನಡೆಸ ಬೇಕೆಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ), ಆದಾಯ ತೆರಿಗೆ ಇಲಾಖೆಗೆ ಆದೇಶಿಸಿದೆ. ಮಾ. 26ರಂದು ಸಿಬಿಡಿಟಿ ಸದಸ್ಯ ನೀನಾ ಕುಮಾರ್‌ ಆದಾಯ ತೆರಿಗೆ ಇಲಾಖೆಗೆ ಪತ್ರವೊಂದನ್ನು ಬರೆದಿದ್ದಾರೆ. ಪತ್ರದಲ್ಲಿ, “ಮಾ.23ರವರೆಗೆ ಒಟ್ಟಾರೆ 12 ಲಕ್ಷ ಕೋಟಿ ರೂ.ಗಳ ನೇರ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಆದರೆ, 10,21,251 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ನಿರೀಕ್ಷಿತ ಗುರಿಗೆ ಹೋಲಿಸಿದರೆ ಶೇ. 85.1ರಷ್ಟು ಮಾತ್ರ ತೆರಿಗೆ ಸಂಗ್ರಹವಾಗಿದೆ. ಖೋತಾ ಆಗಿರುವ ತೆರಿಗೆಯ ತನಿಖೆ ನಡೆಸಬೇಕು’ ಎಂದು ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next