Advertisement

ನೇರ ತೆರಿಗೆ ಖೋತಾ: ತನಿಖೆಗೆ ಆದೇಶ

11:47 AM Mar 29, 2019 | Lakshmi GovindaRaju |

ನವದೆಹಲಿ: ಪ್ರಸಕ್ತ ವರ್ಷದ ನೇರ ತೆರಿಗೆಯ ಸಂಗ್ರಹವು ನಿರೀಕ್ಷಿತ ಮಟ್ಟಕ್ಕಿಂತ ಶೇ.15ರಷ್ಟು ಕುಸಿದಿದ್ದು, ಆ ಕುರಿತಂತೆ ತನಿಖೆ ನಡೆಸಬೇಕೆಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ), ಆದಾಯ ತೆರಿಗೆ ಇಲಾಖೆಗೆ ಆದೇಶಿಸಿದೆ.

Advertisement

ಮಾ. 26ರಂದು ಸಿಬಿಡಿಟಿ ಸದಸ್ಯ ನೀನಾ ಕುಮಾರ್‌ ಈ ಕುರಿತಂತೆ ಆದಾಯ ತೆರಿಗೆ ಇಲಾಖೆಗೆ ಪತ್ರವೊಂದನ್ನು ಬರೆದಿದ್ದಾರೆ. ಪತ್ರದಲ್ಲಿ, “ಮಾ.23ರವರೆಗೆ ಒಟ್ಟಾರೆ 12,000 ಕೋಟಿ ರೂ.ಗಳ ನೇರ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು.

ಆದರೆ, 10,21,251 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ನಿರೀಕ್ಷಿತ ಗುರಿಗೆ ಹೋಲಿಸಿದರೆ ಶೇ. 85.1ರಷ್ಟು ಮಾತ್ರ ತೆರಿಗೆ ಸಂಗ್ರಹವಾಗಿದೆ. ಖೋತಾ ಆಗಿರುವ ತೆರಿಗೆಯ ತನಿಖೆ ನಡೆಸಬೇಕು’ ಎಂದು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next