Advertisement
ಬೆಂಗಳೂರಿನ ಮುರಳಿ ಕೃಷ್ಣ ಬ್ರಹ್ಮಾನಂದಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ| ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿತು.
Related Articles
Advertisement
ಐಸಿಸ್ ಉಗ್ರ ಸಂಘಟನೆ ಸಂಪರ್ಕ ಜಾಮೀನು ನಿರಾಕರಣೆಬೆಂಗಳೂರು: ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಪ್ರಕರಣದ ಆರೋಪಿ ಮೊಹಮ್ಮದ್ ಜೈದ್‌ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಇದೇ ವೇಳೆ ಮತ್ತೂಬ್ಬ ಅರೋಪಿ ಸಲೀಂ ಖಾನ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಜಾಮೀನು ಅರ್ಜಿ ತಿರಸ್ಕರಿದ್ದ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿಗಳಾದ ಸಲೀಂ ಖಾನ್ ಹಾಗೂ ಮೊಹಮ್ಮದ್ ಜೈದ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾ| ಎಸ್. ರಾಚಯ್ಯ ಅವರಿದ್ದ ವಿಭಾಗೀಯ ನ್ಯಾಯಪೀಠ, ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿ ಒಬ್ಬ ಆರೋಪಿಗೆ ಜಾಮೀನು ನಿರಾಕರಿಸಿ, ಮತ್ತೂಬ್ಬ ಆರೋಪಿಗೆ ಆರೋಪಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಅಲ್ ಹಿಂದ್ ಸಂಘಟನೆ ಸದಸ್ಯನಾಗಿದ್ದ ಮೊಹಮ್ಮದ್ ಜೈದ್ ಭಾರತದಲ್ಲಿ ಐಸಿಸ್ ಚಟುವಟಿಕೆಗಳನ್ನು ವಿಸ್ತರಿಸಲು ಪ್ರಮುಖ ಆರೋಪಿ ಮಹಬೂಬ್ ಪಾಷಾಗೆ ಸಹಕಾರ ನೀಡಿದ್ದ, ಹಲವು ಗುಪ್ತ ಸಭೆಗಳಲ್ಲಿ ಭಾಗಿಯಾಗಿದ್ದ ಎಂಬ ಚಾರ್ಜ್‌ಶೀಟ್‌ನ ಅಂಶಗಳನ್ನು ಆಧರಿಸಿ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಎನ್‌ಐಎ ಪರ ಪಿ. ಪ್ರಸನ್ನಕುಮಾರ್ ಹಾಗೂ ಅರ್ಜಿದಾರರ ಪರ ಎಸ್. ಬಾಲಕೃಷ್ಣನ್ ವಾದ ಮಂಡಿಸಿದ್ದರು.