ಹಾವೇರಿ: ರೈತರು ಉತ್ಪನ್ನ ಹೆಚ್ಚಿಸಲು ವೈಜ್ಞಾನಿಕ ಪದ್ಧತಿ ತಿಳಿದುಕೊಳ್ಳುವುದು ಅವಶ್ಯ. ಬೆಳೆಗಳಿಗೆ ಯಾವ ಸಂದರ್ಭದಲ್ಲಿ ಏನು ಬಳಕೆಮಾಡಬೇಕು,ಉತ್ಪಾದನೆ ಹೆಚ್ಚಿಸಿಕೊಳ್ಳಲು ಹಾಗೂ ರೈತರ ಬೆಳೆಗಳನೇರ ಮಾರಾಟ ಅಗತ್ಯವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಹೇಳಿದರು.
ದೇವಿಹೊಸೂರ ಗ್ರಾಮದ ಶ್ರೀ ಲಿಂಗರಾಜ ಶಿರಸಂಗಿ ಡಿಎಟಿಸಿಯಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಸ್ಕೊಡ್‌ವೆಸ್ ಒಕ್ಕೂಟದ ಪಾಲುದಾರರಾದ ಸೌಹಾರ್ದ ಇಂಟಿಗ್ರೇಟೆಡ್ ಫೈನಾನ್ಸಿಯಲ್ ಸರ್ವಿಸಸ್ ಸಹಯೋಗದಲ್ಲಿ ಏರ್ಪಡಿಸಿದ್ದ ಹಾವೇರಿ ಜಿಲ್ಲಾ ರೈತಉತ್ಪಾದಕರ ಸಂಸ್ಥೆಗಳ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಎರಡು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಹಾಗೂ 80 ಸಾವಿರ ಹೆಕ್ಟೇರ್‌ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತಿದೆ. ಬಿತ್ತನೆ ನಂತರಕಳೆನಾಶಕವಾಗಿ ಲಾಡಿಸ್‌ನ್ನು ರಸಗೊಬ್ಬರದೊಂದಿಗೆ ಬೆರೆಸಿ ಭೂಮಿಗೆ ನೀಡಲಾಗುತ್ತಿದೆ. ಇದರಿಂದ ಇಳುವರಿ ಕುಂಠಿತವಾಗುತ್ತದೆ ಹಾಗೂ ಮಣ್ಣಿನಫಲವತ್ತತೆ ಕಡಿಮೆಯಾಗುತ್ತದೆ. ಲಾಡಿಸ್ ಅನ್ನುಮರಳಿನೊಂದಿಗೆ ಬೆರಸಿ ನೀಡಬಹುದು. ಈತರಬೇತಿಯಲ್ಲಿ ಭಾಗವಹಿಸಿದ ರೈತರು ಇತರ ರೈತರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಆದಾಯ ಹೆಚ್ಚಿಸಲು, ಬಾಡಿಗೆ ಸೇವಾ ಆಧಾರಿತಪರಿಕರ ಕೇಂದ್ರ ಹಾಗೂ ಬೆಳೆ ವರ್ದಕಗಳ,ನೇರ ಮಾರುಕಟ್ಟೆ ಬಗ್ಗೆ ಹೋಬಳಿ ಮಟ್ಟದಲ್ಲಿರೈತರ ಗುಂಪುಗಳಿಗೆ ತರಬೇತಿ ನೀಡಲಾಗುತ್ತಿದೆ.ಎಪಿಎಂಸಿಗಳಲ್ಲಿ ಮಧ್ಯವರ್ತಿಗಳ ಹಾವಳಿತಪ್ಪಿಸಿ ರೈತರಿಗೆ ನೇರವಾಗಿ ಮಾರುಕಟ್ಟೆ ಹಾಗೂಮೌಲ್ಯವರ್ಧನೆಗೆ ಅವಕಾಶ ಕಲ್ಪಿಸಲಾಗಿದೆ.ಮುಸುಕಿನ ಜೋಳದಿಂದ ಪಶು ಹಾಗೂ ಕೋಳಿಗೆಆಹಾರ ತಯಾರಿಸಲಾಗುತ್ತಿದೆ. ರೈತರು ನೇರವಾಗಿತಯಾರಿಕಾ ಕಂಪನಿಗೆ ಮಾರಾಟ ಮಾಡಬಹುದು ಎಂದು ತಿಳಿಸಿದರು.
ಚಂದ್ರಕಾಂತ ಸಂಗೂರ ಅವರು ಸಿರಿಧಾನ್ಯಗಳನ್ನು ದೇಶದ ವಿವಿಧ ರಾಜ್ಯಗಳಿಗೆ ಹಾಗೂ ಲಂಡನ್, ಇಂಗ್ಲೆಂಡ್ ದೇಶಗಳಿಗೆ ರಫು¤ಮಾಡುತ್ತಿದ್ದಾರೆ. ರೈತರುಮನಸ್ಸು ಮಾಡಿದರೆ ಸಾಧನೆ ಮಾಡಬಹುದು.ನಮ್ಮ ಅವಶ್ಯಕತೆ, ಉತ್ಪಾದನೆ, ಆದಾಯ ಹೆಚ್ಚಿಸುವ,ಜೀವನಮಟ್ಟ ಸುಧಾರಿಸುವ ವಿಚಾರ ಹೊಂದಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮನೋಹರ ಮಸ್ಕಿ ಸಂಪನ್ಮೂಲವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕೃಷಿ ಇಲಾಖೆಹಾವೇರಿ ಕೃಷಿ ಉಪನಿರ್ದೇಶಕರಾದ ಕರಿಯಲ್ಲಪ್ಪ,ರಾಣಿಬೆನ್ನೂರಿನ ಕೃಷಿ ಉಪನಿರ್ದೇಶಕ ಸ್ಪೂರ್ತಿ,ಸಹಾಯಕ ಕೃಷಿ ನಿರ್ದೇಶಕ ವಿಜಯ, ಪೂರ್ಣ ಪ್ರಜ್ಞ ಬೆಳ್ಳೂರ ಇತರರು ಇದ್ದರು.
ಎಪಿಎಂಸಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ನೇರ ಮಾರುಕಟ್ಟೆ ಹಾಗೂಮೌಲ್ಯವರ್ಧನೆಗೆ ಅವಕಾಶ ಕಲ್ಪಿಸಲಾಗಿದೆ.ಮುಸುಕಿನ ಜೋಳದಿಂದ ಪಶು ಹಾಗೂ ಕೋಳಿಗೆಆಹಾರ ತಯಾರಿಸಲಾಗುತ್ತಿದೆ. ರೈತರು ನೇರವಾಗಿ ತಯಾರಿಕಾ ಕಂಪನಿಗೆ ಮಾರಾಟ ಮಾಡಬಹುದು.
–ಮಂಜುನಾಥ, ಜಂಟಿ ಕೃಷಿ ನಿರ್ದೇಶಕರು ಹಾವೇರಿ