Advertisement

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನೇರ ಫೋನ್ ಇನ್‌ ಕಾರ್ಯಕ್ರಮ

06:17 PM Dec 13, 2019 | Team Udayavani |

ಮೂಡಲಗಿ: ತಾಲೂಕಿನ ಎಲ್ಲ ಪ್ರೌಢ ಶಾಲೆಗಳಿಂದ ಪರೀಕ್ಷಾ ಭಯ ನಿವಾರಿಸುವ ನಿಟ್ಟಿನಲ್ಲಿ ಅನೇಕ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು.

Advertisement

ಪಟ್ಟಣದ ಬಿಇಒ ಕಚೇರಿಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ನೇರ ಫೋನ್ ಇನ್  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಈ ಫೋನ್ ಇನ್‌ ಕಾರ್ಯಕ್ರಮದಿಂದಾಗಿ ವಿದ್ಯಾರ್ಥಿಗಳಲ್ಲಿರುವ 6 ವಿಷಯಗಳಲ್ಲಿನ ಸಂಶಯಗಳನ್ನು ನೂರಿತ ಸಂಪನ್ಮೂಲ ಶಿಕ್ಷಕರಿಂದ ಮಾಹಿತಿ ಪಡೆದುಕೊಳ್ಳುತ್ತಾರೆ.

ಮಕ್ಕಳು ಕೇಳುವ ಪ್ರತಿಯೊಂದು ಪ್ರಶ್ನೆಗಳನ್ನು ಹಾಗೂ ಅವುಗಳಿಗೆ ನೀಡಲಾದ ಸಂಭಾಷಣೆ ರೂಪದ ಉತ್ತರಗಳನ್ನು ಧ್ವನಿ ಮುದ್ರಿಸಿಕೊಂಡು ತಂತ್ರಜ್ಞಾನ ಬಳಸಿಕೊಂಡು ಮುಖ್ಯ ಶಿಕ್ಷಕರ ಹಾಗೂ ಶಿಕ್ಷಕರ ಮೂಲಕ ತಾಲೂಕಿನ ಎಲ್ಲ ವಿದ್ಯಾರ್ಥಿಗಳಿಗೂ ತಲುಪಿಸುವ ಕಾರ್ಯ ಮಾಡುವುದಾಗಿ ಹೇಳಿದರು. ಪಿ.ಎಚ್‌ ಒಂಟಿ, ಟಿ. ಕರಿಬಸವರಾಜು, ಎಸ್‌. ಕೆ ಶೇಖ, ತಳವಾರ, ಎಸ್‌.ಕೆ ವಾಲಿಮರದ, ಟಿ.ಟಿ. ಹೊಸಮನಿ, ಎಸ್‌.ಆರ್‌. ಬೆಳಗಲಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next