Advertisement

Sirsi: ಅನಂತಕುಮಾರ್ ಹೇಳಿಕೆಯಿಂದ ಜಿಲ್ಲೆಯ ಜನ ತಲೆ ತಗ್ಗಿಸುವಂತಾಗಿದೆ: ದೊಡ್ಡೂರು ಟಾಂಗ್

02:22 PM Jan 15, 2024 | sudhir |

ಶಿರಸಿ: ವೇದ, ಸಂಸ್ಕೃತಿ‌ ಬಗ್ಗೆ ಮಾತನಾಡುವ ಹಿರಿಯ ರಾಜಕಾರಣಿ ಸಂಸದ ಅನಂತಕುಮಾರ ಹೆಗಡೆ ಅವರು ಸಿಎಂ ಸಿದ್ದರಾಮಯ್ಯ ಅವರ‌ ಬಗ್ಗೆ ಏಕ ವಚನ, ಅಸಂವಿಧಾನಿಕವಾಗಿ ಮಾತನಾಡಿದ್ದು ಜಿಲ್ಲೆಯ ಜನ ತಲೆ ತಗ್ಗಿಸುವಂತೆ ಆಗಿದೆ. ಇಂಥ ಜನಪ್ರತಿನಿಧಿಗಳು ಯಾವುದೇ ಪಕ್ಷದಲ್ಲಿ ಮುಜುಗರ ಎಂದು ಕಾಂಗ್ರೆಸ್ ವಕ್ತಾರ ದೀಪಕ್ ದೊಡ್ಡೂರು ಹೇಳಿದರು.

Advertisement

ಸೋಮವಾರ ನಗರದ ಸುಪ್ರಿಯಾ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸದ ಅನಂತಕುಮಾರ ಹೆಗಡೆ ಅವರು ರಾಷ್ಟ್ರ ಮಟ್ಟಕ್ಕೆ ಹೋದ ಬಳಿಕ ಜಿಲ್ಲೆಗೆ ಮಸಿ ಬಳಿಯುವಂತಾಗಿದೆ. ಅಗೌರವ ತೋರಿಸುವಂಥದ್ದು ಸಂಸದರಿಗೆ ಹೊಸತಲ್ಲ. ಜಿಲ್ಲೆಗೆ ಹಿಂದೆ ಪ್ರಧಾನಿಗಳು ಬಂದಾಗಲೂ‌ ಸಮಯ‌ ಕೊಡಲಿಲ್ಲ.‌ ಮೊನ್ನೆ‌ ಮೊನ್ನೆ ಗೂಡಿನಿಂದ ಹೊರ‌ ಬಂದು ಗೌರವಯುತ ಸಿಎಂ ಬಗ್ಗೆ ಏಕ ವಚನ‌ ಪದ‌ ಪ್ರಯೋಗ ಮಾಡಿದ್ದಾರೆ. ನಾಲ್ಕುವರೆ ವರ್ಷ ಜನರಿಗೆ ಧ್ವನಿಯಾಗದೆ ಜನರ ನಕಾರಾತ್ಮಕ ಹೇಳಿಕೆ ನೀಡಿದ್ದಾರೆ. ಇದ‌್ನು ಬಿಡಬೇಕು. ಈ‌ ಜಿಲ್ಲೆಯ ಜನ ಸಾಕಷ್ಟು ಅವಧಿಯ ತನಕ ಅನಂತರ ಹರಿಕತೆ ಕೇಳಿಯೂ ಆಯಿತು ಎಂದು ಹೇಳಿದರು. ಜನ ಪ್ರತಿನಿಧಿಗಳಾದವರು ಕೋಮು ಸೌಹಾರ್ದತೆ ಹೊಂದಿರಬೇಕು. ಆದರೆ, ಅನಂತರು ನಡೆ ಆತಂಕ ಉಂಟಾಗಿದೆ. ಅನಂತರು ಇತಿಹಾಸಕಾರರು, ಸಾಹಿತ್ಯಕ್ಕೆ ಮಹತ್ವ ಕೊಟ್ಟರೆ ಹೆಚ್ಚಿನ ಹೆಸರು ಅವರಿಗೆ ಬರುತ್ತಿತ್ತು ಎಂದೂ ಸಲಹೆ ಮಾಡಿದರು. ಸಂಸದರು ಅಬ್ಬರಿಸುವಂತದ್ದು ಕೋಮು ಸೌಹಾರ್ದ ಕೆಡಿಸಲು, ಅಭಿವೃದ್ದಿ ಬಗ್ಗೆ ಮಾತನಾಡುತ್ತಿಲ್ಲ. ಅಂಕೋಲಾ‌ ಹುಬ್ಬಳ್ಳಿ ರೈಲ್ವೆ, ರಸ್ತೆ ಅಭಿವೃದ್ದಿ ಆಗಿಲ್ಲ. ವಿಮಾನ ನಿಲ್ದಾನ ಬಂದಿಲ್ಲ.

ಸನಾತನ‌ ಧರ್ಮ ಬೆಳೆಸಬೇಕಾದ್ದು ಎಲ್ಲರ ಜವಬ್ದಾರಿ. ಅವರದ್ದು ಮಾತ್ರವಲ್ಲ. ಪೀಠಾಧಿಪತಿಗಳ‌ ಮಾರ್ಗದರ್ಶನದಲ್ಲಿ ಸನಾತನ ಧರ್ಮ ನಡೆಯುತ್ತದೆ. ಕೋಮು‌ ಸೌಹಾರ್ದತೆ ಕದಡುವವರು ಅವಶ್ಯಕತೆ ಇಲ್ಲ. ಬಿಜೆಪಿಗರು ಸಂಸದರನ್ನು ಹುಲಿ ಎನ್ನುತ್ತಾರೆ. ಅಂಥ ಹುಲಿಗಳು ಎನಿಸಿದವರು ನರಿ ಆಗಬಾರದು.ಎಳ್ಳು ಬೆಳ್ಳು ತಿಂದು ಒಳ್ಳೆ ಮಾತಾಡಿ ಎಂದು ಸಂಸದರು ಸಿಕ್ಕರೆ ಹೇಳ್ತೇವೆ ಎಂದೂ ಹೇಳಿದರು.

ಈ ವೇಳೆ ಜಗದೀಶ ಗೌಡ, ಗಣೇಶ ದಾವಣಗೆರೆ, ಬಸವರಾಜ ದೊಡ್ಮನಿ, ದುಷ್ಯಂತ ಗೌಡರು ಇದ್ದರು.

ಇದನ್ನೂ ಓದಿ: ಮುಂದಿನ ಸಿನಿಮಾಕ್ಕೆ ಲೋಕಲ್‌ ಹೈದನಾದ ಪ್ರಭಾಸ್: ʼThe Raja Saabʼ ಫಸ್ಟ್‌ ಲುಕ್‌ ಔಟ್

Advertisement
Advertisement

Udayavani is now on Telegram. Click here to join our channel and stay updated with the latest news.

Next