Advertisement
ಇದೇ ಮೊದಲ ಬಾರಿಗೆ ಕಷ್ಟಕರ ಹ್ಯಾಂಡ್‌ಫ್ರಂಟ್ 540 ವಾಲ್ಟ್ ವಿಭಾಗದಲ್ಲಿ ಸ್ಪರ್ಧಿಸಿ ಪೈನಲ್ ಸುತ್ತಿಗೆ ಪ್ರವೇಶಿಸಿದ ದೀಪಾ ಅವರಿಗೆ ಫೈನಲ್‌ನ ಮೊದಲ ಪ್ರಯತ್ನದ ಲ್ಯಾಂಡಿಂಗ್ ವೇಳೆ ಗಂಟು ನೋವು ಕಾಣಿಸಿಕೊಂಡಿದೆ. ಈ ಸಮಸ್ಯೆಯಿಂದಾಗಿ ಎರಡನೇ ಪ್ರಯತ್ನವನ್ನೇ ಮಾಡದೆ ತಮ್ಮ ಆಟವನ್ನು ಕೊನೆಗೊಳಿಸಿದ್ದಾರೆ.
“ಫೈನಲ್‌ಗೂ ಮೊದಲೇ ದೀಪಾಗೆ ಗಂಟು ನೋವು ಕಾಣಿಸಿಕೊಂಡಿತ್ತು. ಆದರೆ ವೈದ್ಯಕೀಯ ಚಿಕಿತ್ಸೆ ಪಡೆದು ಅಭ್ಯಾಸದಲ್ಲಿ ನಿರತರಾದರು. ವಾಲ್ಟ್ ಸ್ಪರ್ಧೆಯ ಫೈನಲ್‌ನ ಮೊದಲ ಪ್ರಯತ್ನದ ಲ್ಯಾಂಡಿಂಗ್ ವೇಳೆ ಗಂಟು ನೋವು ಜೋರಾದ ಕಾರಣ ಸ್ಪರ್ಧೆಯಲ್ಲಿ ಮುಂದುವರಿ ಯಲು ಸಾಧ್ಯವಾಗಲಿಲ್ಲ. ಹೀಗಾಗಿ ಕೂಟದಿಂದ ಹೊರಬಂದಿದ್ದಾರೆ. ಇದರೊಂದಿಗೆ ಮುಂದಿನ ವಾರದ ದೋಹಾ ವಿಶ್ವಕಪ್‌ನಲ್ಲೂ ಅವರು ಭಾಗವಹಿಸುತ್ತಿಲ್ಲ. ಭಾರತಕ್ಕೆ ಮರಳಿ ಚಿಕಿತ್ಸೆ ತೆಗೆದುಕೊಂಡು ಇದೇ ವರ್ಷ ನಡೆಯಲಿರುವ ಏಶ್ಯನ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ಗೆ ತಯಾರಿ ನಡೆಸಲಿದ್ದಾರೆ’ ಎಂದು ಭಾರತೀಯ ಜಿಮ್ನಾಸ್ಟಿಕ್ ಫೆಡರೇಶನ್ ಉಪಾಧ್ಯಕ್ಷ ರಿಯಾಜ್ ಭಾಟಿ ಹೇಳಿದ್ದಾರೆ. ಜೂನ್‌ನಲ್ಲಿ ಮಂಗೋಲಿಯಾದಲ್ಲಿ ಏಶ್ಯನ್ ಚಾಂಪಿಯನ್‌ಶಿಪ್ ಹಾಗೂ ಅಕ್ಟೋಬರ್‌ನಲ್ಲಿ ಜರ್ಮನಿಯಲ್ಲಿ ವಿಶ್ವ ಚಾಂಪಿಯನ್‌ಶಿಪ್ ನಡೆಯಲಿದ್ದು, ದೀಪಾ ಈ ಕೂಟಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಪ್ರಯತ್ನಿಸಬೇಕಾಗಿದೆ. ಬ್ಯಾಲೆನ್ಸ್ ಬೀಮ್‌ನಲ್ಲಿ ವಿಫಲ
ಶುಕ್ರವಾರ ನಡೆದ ಬ್ಯಾಲೆನ್ಸ್ ಬೀಮ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ 20ನೇ ಸ್ಥಾನ ಸಂಪಾದಿಸಿ ಫೈನಲ್ ಪ್ರವೇಶಿಸುವಲ್ಲಿ ದೀಪಾ ವಿಫಲಾರಾಗಿದ್ದರು. 25 ಕ್ರೀಡಾಪಟುಗಳ ಈ ಅರ್ಹತಾ ಸುತ್ತಿನಲ್ಲಿ ದೀಪಾ 10.633 ಅಂಕವನ್ನಷ್ಟೇ ಗಳಿಸಿದರು.