Advertisement

ಕೇಂಬ್ರಿಡ್ಜ್ ವಿವಿಯಿಂದಲೂ ಲಸಿಕೆ

11:22 PM Aug 27, 2020 | mahesh |

ಹೊಸದಿಲ್ಲಿ/ಪುಣೆ/ಲಂಡನ್‌: ಕೋವಿಡ್ ತಡೆಗಟ್ಟುವಂಥ ಲಸಿಕೆಯೊಂದನ್ನು ತಾನು ತಯಾರಿಸಿರುವುದಾಗಿ ಆಕ್ಸ್‌ ಫ‌ರ್ಡ್‌ ವಿವಿ ಘೋಷಿಸಿದ ಬೆನ್ನಲ್ಲೇ ಕೇಂಬ್ರಿಡ್ಜ್ ವಿವಿ ವತಿಯಿಂದ ಎಲ್ಲಾ ರೀತಿಯ ಕೋವಿಡ್ ವೈರಸ್‌ಗಳಿಂದ ಉಂಟಾಗುವ ಸೋಂಕುಗಳನ್ನು ನಿರೋಧಿಸುವಂಥ ಲಸಿಕೆ ಕಂಡುಹುಡುಕುವ ಪ್ರಯತ್ನ ಆರಂಭಿಸಿರುವುದಾಗಿ ಹೇಳಿದೆ. ಅದಕ್ಕಾಗಿ ಕ್ಲಿನಿಕಲ್‌ ಟ್ರಯಲ್‌ಗ‌ಳನ್ನೂ ಶುರು ಮಾಡಲಾಗಿದೆ. ಅದಕ್ಕೆ “ಡಿಐಒಎಸ್‌- ಕೊವ್ಯಾಕ್ಸ್‌2′ (DIOS-CoVax2) ಎಂದು ಹೆಸರು ಇರಿಸಲಾಗಿದೆ.

Advertisement

ಪುಣೆಯಲ್ಲಿ ಐವರ ಮೇಲೆ ಪ್ರಯೋಗ: ಪುಣೆಯಲ್ಲಿರುವ ಸೆರ ಮ್‌ ಇನ್ಸ್ಟಿಟ್ಯೂಟ್‌ ಆಫ್ ಇಂಡಿಯಾ ನೇತೃತ್ವದಲ್ಲಿ ಆಕ್ಸ್‌ಫ‌ರ್ಡ್‌ ವಿವಿ ಲಸಿಕೆಯ ಪ್ರಯೋಗ ಮುಂದುವರಿದೆ. 48 ವರ್ಷದ ವೈದ್ಯರು, ಸಂಶೋಧನೆ ಕೈಗೊಂಡಿರುವ ವಿದ್ಯಾರ್ಥಿ ಸೇರಿದಂತೆ ಐವರು ಪ್ರಯೋಗಕ್ಕೆ ಒಳಗಾಗಲು ಮುಂದಾಗಿದ್ದಾರೆ.

ದಾಖಲೆಯ ಕೇಸುಗಳು: ಇದೇ ವೇಳೆ ಭಾರತದಲ್ಲಿ ಬುಧವಾರದಿಂದ ಗುರುವಾರದ ಅವಧಿಯಲ್ಲಿ 75, 760 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ.

ಮೂಲ ನಿವಾಸಿಗಳಿಗೆ ಸೋಂಕು ಸವಾಲು
ಅಂಡಮಾನ್‌, ನಿಕೋಬಾರ್‌ ದ್ವೀಪ ಸಮೂಹ ದಲ್ಲಿರುವ ಗ್ರೇಟ್‌ ಅಂಡಮಾನ್‌ ಬುಡಕಟ್ಟು ಸಮುದಾಯದವರಿಗೆ ಸೋಂಕು ತಗುಲಿದೆ. ಒಟ್ಟು ಹತ್ತು ಮಂದಿಗೆ ಸೋಂಕು ದೃಢ ಪಟ್ಟಿದೆ. ಅಂಡಮಾನ್‌ನ ಸ್ಟ್ರೈಟ್‌ ಐಲ್ಯಾಂಡ್‌ನ‌ಲ್ಲಿ ಒಟ್ಟು 50 ಮಂದಿ ಆದಿವಾಸಿಗಳಿದ್ದಾರೆ. ಕೇಂದ್ರ ಸರಕಾರದ ವತಿಯಿಂದಲೇ ಅವರಿಗೆ ಆಹಾರ, ಔಷಧ ಪೂರೈಕೆ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next