ಬೆಂಗಳೂರು: ಕೇಂದ್ರ ಸರ್ಕಾರವು ಸಂತೆಯಲ್ಲಿ ವ್ಯಾಪಾರ ಮಾಡಿದಂತೆ ದೇಶದ ಆಸ್ತಿ ಮಾರಾಟ ಮಾಡುತ್ತಿದೆ. ದೇಶದ ಆರ್ಥಿಕತೆ ಮತ್ತೆ 30 ವರ್ಷಗಳ ಹಿಂದಕ್ಕೆ ಸರಿದಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿ ಅಧಿಕಾರ ಹಿಡಿದ ಕ್ಷಣದಿಂದ ಉದಾರೀಕರಣದ ಆಶಯ ಮಣ್ಣು ಪಾಲಾಗಿ ಹೋಗಿದೆ ಎಂದು ಹೇಳಿದ್ದಾರೆ.
ಮೋದಿಯವರು ಬಾಲ್ಯದಲ್ಲಿ ಚಹಾ ಮಾರುತ್ತಿದ್ದರು ಎಂದು ಬಿಜೆಪಿಯವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ, ಅವರು ಪ್ರಧಾನಿಯಾಗಿ ದೇಶ ಮಾರುತ್ತಿದ್ದಾರೆ. ಸಾರ್ವಜನಿಕ ಆಸ್ತಿ ಮಾರಿ ದೇಶ ಉಳಿಗಮಾನ್ಯ ಸ್ಥಿತಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಸೆ.5, 6ರಂದು ರಾಜ್ಯದ ಹಲವೆಡೆ ಹೈಅಲರ್ಟ್
ಆರ್ಥಿಕ ಸಂಕಷ್ಟ, ಉದ್ಯೋಗ ನಷ್ಟ, ಜಿಡಿಪಿ ಕುಸಿತ, ಏರಿದ ಹಸಿವಿನ ಸೂಷ್ಯಂಕ ದೇಶಕ್ಕೆ ಬಿಜೆಪಿ ಕೊಟ್ಟ ಅನಿಷ್ಟ ಕೊಡುಗೆಗಳು ಎಂದು ಟೀಕಿಸಿದ್ದಾರೆ.