ಪಣಜಿ(ಮಡಗಾಂವ): ಡಾ. ರಾಮ ಮನೋಹರ್ ಲೋಹಿಯಾ, ಡಾ. ಜ್ಯೂಲಿಯೊ ಮಿನೆಜಿಸ್ ಸೇರಿದಂತೆ ಹಲವು ಜನ ಸ್ವಾತಂತ್ರ್ಯ ಹೋರಾಟಗಾರರು ಗೋವಾ ರಾಜ್ಯವನ್ನು ಸ್ವಾತಂತ್ರ್ಯಗೊಳಿಸಲು ತಮ್ಮ ಜೀವವನ್ನೇ ಪಣಕ್ಕಿಟ್ಟರು. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಗೋವಾದ ಸ್ವಾತಂತ್ರ್ಯ ಸಂಗ್ರಾಮದ ಗುರುತನ್ನು ರಕ್ಷಿಸಲು ಧಾನ್ಯತೆ ನೀಡಿದ್ದರು. ಅವರು ಕಂಡಿದ್ದ ಸ್ವಾತಂತ್ರ್ಯ ಮತ್ತು ಸ್ವಾಭಿಮಾನಿ ಗೋವಾದ ಸ್ವಪ್ನವನ್ನು ಪೂರ್ಣಗೊಳಿಸುವುದು ನಮ್ಮ ಆಧ್ಯ ಕರ್ತವ್ಯವಾಗಿದೆ ಕಾಂಗ್ರೇಸ್ ಗೋವಾ ಪ್ರಭಾರಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇದನ್ನೂ ಓದಿ : ಸಿಎಂ ಯಡಿಯೂರಪ್ಪಗೆ ಬೆಂಬಲ ನೀಡಿದ ಅಖಿಲ ಭಾರತ ವೀರಶೈವ ಮಹಾಸಭಾ
75 ನೇಯ ಗೋವಾ ಕ್ರಾಂತಿ ದಿನದ ಅಂಗವಾಗಿ ಮಡಗಾಂವನ ಲೋಹಿಯಾ ಮೈದಾನದಲ್ಲಿ ಗೋವಾ ಕಾಂಗ್ರೇಸ್ ಪಕ್ಷದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಹುತಾತ್ಮರ ಸ್ಮಾರಕಕ್ಕೆ ಮತ್ತು ಡಾ. ರಾ ಮನೋಹರ್ ಲೋಹಿಯಾ ರವರ ಪುತ್ಥಳಿಗೆ ಗೌರವ ಸಲ್ಲಿಸಿ ಮಾತನಾಡಿದ ಗುಂಡೂರಾವ್, ಸ್ವಾಭಿಮಾನಿ ಗೋವಾ ವನ್ನು ಸಾಕಾರಗೊಳಿಸುವುದು ನಮ್ಮ ಪ್ರಧಾನ ಗುರಿ ಡಾ. ರಾಮ ಮನೋಹರ್ ಲೋಹಿಯಾ, ಡಾ. ಜ್ಯೂಲಿಯೊ ಮಿನೆಜಿಸ್ ಸ್ವಪ್ನವನ್ನು ಈಡೇರಿಸುದೇ ನಮ್ಮ ಸದಾಶಯ 2022 ರ ವಿಧಾನಸಭಾ ಚುನಾವಣೆಯಲ್ಲಿ ಗೋವಾದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದ ನಂತರ ಪರಿಸರಕ್ಕೆ ಹಾನಿ ಉಂಟುಮಾಡುವ ಎಲ್ಲ ಯೋಜನೆಗಳನ್ನು ರದ್ಧುಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೋವಾ ರಾಜ್ಯ ಸ್ವಾತಂತ್ರ್ಯ ಸಂಗ್ರಾಮದ ಇಂದಿನ ಐತಿಹಾಸಿಕ ದಿನದಂದು ನಾವು ಗೋವನ್ನರ ಧ್ವನಿಯಾಗಿ ಶ್ರದ್ಧೆಯಿಂದ ಕೆಲಸ ಮಾಡುತ್ತೇವೆ ಎಂಬ ಪ್ರತಿಜ್ಞೆ ಮಾಡುತ್ತಿದ್ದೇವೆ. ಗೋವಾದ ಸಮೃದ್ಧ ಪರಂಪರೆ, ಗೋವಾದ ಸಮೃದ್ಧಿಗಾಗಿ ಜವಾಬ್ದಾರಿಯುತವಾಗಿ ನಾವು ಕೆಲಸ ಮಾಡಬೇಕಿದೆ. ಕಾಂಗ್ರೇಸ್ ಪಕ್ಷವು ಗೋವಾದ ಜನಸಾಮಾನ್ಯರ ಪಕ್ಷವಾಗಿದೆ. ಜನತೆಯ ಸುಖದುಖಃದಲ್ಲಿ ನಾವು ಭಾಗಿಯಾಗುತ್ತೇವೆ. ನಮ್ಮ ಪಕ್ಷವು ಜನಸಾಮಾನ್ಯರ ಪಕ್ಷವಾಗಿದ್ದು ಪ್ರತಿಯೊಬ್ಬ ನಾಗರೀಕರ ಭಾವನೆಗಳನ್ನೂ ನಾವು ಆದರಿಸುತ್ತೇವೆ ಎಂದು ನುಡಿದರು.
ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ವಾಮನ್ ಪ್ರಭುಗಾಂವಕರ್, ಗೋಪಾಲ ಚಿತಾರಿ, ಗೋವಾ ಪ್ರದೇಶ ಕಾಂಗ್ರೇಸ್ ಅಧ್ಯಕ್ಷ ಗಿರೀಶ್ ಚೋಡಣಕರ್, ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್, ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಟಿಎಂಸಿ ಶಾಸಕ ರಾಯ್ ಅನರ್ಹಗೊಳಿಸುವಂತೆ ಪಶ್ಚಿಮಬಂಗಾಳ ಸ್ಪೀಕರ್ ಗೆ ಬಿಜೆಪಿ ಮನವಿ