Advertisement
ಪಣಜಿಯ ಕಾಂಗ್ರೇಸ್ ಕಾರ್ಯಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು- ಗುಜರಾತ್‍ನ ಗೌತಮ್ ಅದಾನಿಯವರ ಖಾಸಗಿ ಮುದ್ರಾ ಬಂದರ ಈ ಬಂದರಿನಲ್ಲಿ 3,000 ಕಿಲೊ ಮಾದಕ ಪದಾರ್ಥವನ್ನು ಸೆರೆಹಿಡಿಯಲಾಯಿತು. ಆದರೆ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹಮಂತ್ರಿ ಅಮಿತ್ ಶಾ ರವರು ಸೇರಿದಂತೆ ಬಿಜೆಪಿಯ ಯಾವ ನಾಯಕರೂ ಕೂಡ ಚಕಾರವೆತ್ತಲಿಲ್ಲ. ಇದರಿಂದಾಗಿ ಬಿಜೆಪಿಯ ಕೆಲ ನಾಯಕರು ಮಾದಕ ಪದಾರ್ಥಗಳ ವ್ಯವಹಾರಗಳಲ್ಲಿ ತೊಡಗಿದೆಯೇ ಎಂದು ಕಾಂಗ್ರೇಸ್ ಪಕ್ಷಕ್ಕೆ ಸಂಶಯವಿದೆ. ಇದರಿಂದಾಗಿ ಈ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದ ಇಬ್ಬರು ನ್ಯಾಯಮೂರ್ತಿಗಳ ತನಿಖಾ ಸಮೀತಿಯನ್ನು ನೇಮಿಸಿ ಈ ಮಾದಕ ಪದಾರ್ಥದ ತನಿಖೆ ನಡೆಸಬೇಕು ಎಂದು ಗೋವಾ ಕಾಂಗ್ರೇಸ್ ಪ್ರಭಾರಿ ದಿನೇಶ್ ಗುಂಡೂರಾವ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್, ಕಾಂಗ್ರೇಸ್ ಪ್ರದೇಶಾಧ್ಯಕ್ಷ ಗಿರೀಶ್ ಚೋಡಣಕರ್ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ :ಸಿದ್ದರಾಮಯ್ಯನವರಿಗೆ ಜೆಡಿಎಸ್ ಮನೆಯೊಳಗೆ ಇಣುಕಿ ನೋಡುವ ಚಾಳಿ ಯಾಕೆ: ಸಿ.ಟಿ.ರವಿ