Advertisement
ಇಷ್ಟೆಲ್ಲ ಪ್ರತಿಷ್ಠಿತರಾಗಿದ್ದ ದೇಸಾಯಿ ಅವರು ಇಂದಿರಾ ಅವರನ್ನು ಮದುವೆಯಾದದ್ದು 1936ರ ಜುಲೈ 2ರಂದು. ಸರಳ ಬದುಕಿನ ಅಗತ್ಯವನ್ನು ಅವರು ಹಿರಿಯರಿಗೆ ಮನ ಗಾಣಿಸಿದರು. ಧಾರವಾಡದಲ್ಲಿ ಮದುವೆ ನೋಂದಣಿ ಯಾಯಿತು. ಮದುವೆಗೆ ಆದ ಖರ್ಚು ನೋಂದಣಿ ಶುಲ್ಕ, ಊಟದ ಬಾಬ್ತು ಸೇರಿ ಒಟ್ಟು 13 ರೂ…
Related Articles
ಈಗ ಈ ಸರಳತೆ ದುರ್ಬಲವೆನಿಸಬಹುದು. ಕೊರೊನಾ ಸೋಂಕಿನ 2ನೇ ಅಲೆಯ ಅಬ್ಬರದ ಕಾಲಘಟ್ಟವಿದು. ಮೊದಲು ಕೇವಲ 40 ಜನರನ್ನು ಒಳಗೊಂಡಂತೆ ಮದುವೆಗಳನ್ನು ಕಲ್ಯಾಣ ಮಂಟಪಗಳಲ್ಲಿ ಆಚರಿಸಬಹುದು, ಅನಂತರ ಮನೆಗಳಲ್ಲಿ ಮಾತ್ರ ನಡೆಸಬಹುದು, ಬಳಿಕ ಈಗಾಗಲೇ ನಿಗದಿಯಾದ ಮದುವೆ ಹೊರತುಪಡಿಸಿ ಹೊಸ ಮದುವೆ ಮಾಡು ವಂತಿಲ್ಲ, ಮೆಹಂದಿಯಂತಹ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ ಎಂಬ ಕಾನೂನನ್ನು ಸರಕಾರ ಕಾಲಕಾಲಕ್ಕೆ ತಿದ್ದುಪಡಿ ಮಾಡಿ ಹೇಳುತ್ತಿದೆ. ಒಟ್ಟಾರೆ ಸರಕಾರ ಬೆಂಗಳೂರಿನಿಂದ ನಿಯಮಾವಳಿ ಪರಿಷ್ಕರಿಸಿ ಆದೇಶ ಹೊರಡಿಸುವುದು, ಇತ್ತ ಜಿಲ್ಲಾ ಮಟ್ಟದ ಅಧಿಕಾರಿಗಳು ಕೆಳಗಿನ ಅಧಿಕಾರಿಗಳಿಗೆ ಅವುಗಳ ಪಾಲನೆಗೆ ವರ್ಗಾ ಯಿಸುವುದು ನಡೆಯುತ್ತಲೇ ಇದೆ. ಕಲಿತವರು (ಕಲಿಯ ದವರು ಬಲು ಕಡಿಮೆ) ಆದೇಶಗಳನ್ನು ತಮ್ಮ ಕೈಲಾದ ಮಟ್ಟಿಗೆ ಉಲ್ಲಂ ಸುತ್ತಲೇ ಇದ್ದಾರೆ. ಇದರಿಂದಾಗಿ ಎಷ್ಟು ಜನರಿಂದ ಎಷ್ಟು ಜನರಿಗೆ ಕೊರೊನಾ ಸೋಂಕು ವರ್ಗಾವಣೆಯಾಯಿತೆಂದು ಹೇಳುವುದು ಕಷ್ಟ.
Advertisement
ಕೊರೊನಾ ಎರಡನೆಯ ಅಲೆ ಇನ್ನೇನು ಕೆಲವು ದಿನಗಳಲ್ಲಿ ಇಳಿಮುಖವಾದರೂ ವೈರಸ್ ನಾಶವಾಗು ವುದಿಲ್ಲ. 1800ರ ಆದಿಭಾಗದಲ್ಲಿದ್ದ ಕಾಲರಾ ಬ್ಯಾಕ್ಟೀರಿಯಾ ಇನ್ನೂ ಇದೆ. ಈಗ ಕೊರೊನಾದ ಹಿಂದೆಯೇ ವಿವಿಧ ಫಂಗಸ್ ಬಂದಂತೆ ಭವಿಷ್ಯದಲ್ಲಿ ತರಹೇವಾರಿ ಫಂಗಸ್‌ಗಳು ಹುಟ್ಟಿಕೊಳ್ಳಬಹುದು, ಅವು ಗಳಿಗೂ ನಮ್ಮಂತೆ ಸಂತಾನಭಾಗ್ಯವಿದೆಯಲ್ಲ? ಇದುವೇ ನಿಸರ್ಗದ ನಿಷ್ಪಕ್ಷಪಾತ ನೀತಿ. ಮನುಷ್ಯ ಜಾತಿಯಲ್ಲೂ ಕಾಲಘಟ್ಟ ಉರುಳಿದಂತೆ ನೈತಿಕತೆ, ಪ್ರಾಮಾಣಿಕತೆ, ಮುಗ್ಧತೆ ಇಳಿಮುಖವಾಗಿ ಭ್ರಷ್ಟಾಚಾರ, ಮೈಗಳ್ಳತನ, ಅಪ್ರಾಮಾಣಿಕತೆ, ಅಧಿಕಾರದಾಹ, ಸೋಗಲಾಡಿತನ, ಲಾಭಬುಡುಕತನ, ದುರಾಸೆ, ಅಸೂಯಾಪರತೆಯಂತಹ ಋಣಾತ್ಮಕ ಗುಣಗಳು ಹೆಚ್ಚಿದಂತೆ ವೈರಸ್, ಫಂಗಸ್‌ಗಳೂ ಬಲಿಷ್ಠವಾಗುತ್ತಿವೆ.
ಲಾಕ್‌ಡೌನ್ ಮುಗಿದಾಕ್ಷಣವೇ ಜನರು ಒಮ್ಮೆಲೆ ಆವೇಶಭರಿತರಾಗಿ ವರ್ತಿಸುತ್ತಾರೆ. ವೈರಸ್ ಇಂತಹ ಸಂದರ್ಭವನ್ನೇ ಕಾಯುತ್ತಿರುವುದು. ಮೈ ಮರೆತರೆ ಇದುವರೆಗೆ ಕೊರೊನಾ ಸೋಂಕು ಬಾರದೆ ಇರುವವರನ್ನು ಅಪ್ಪಿಕೊಳ್ಳಬಹುದು. “ಹೊಸ ಹೊಸ ಗಿರಾಕಿಗಳನ್ನೇ ಬುಟ್ಟಿಗೆ ಹಾಕಿಕೊಳ್ಳುವ’ ನೀತಿ ನಿಸರ್ಗದಲ್ಲಿಯೇ ಇದೆ ಎಂದು ಊಹಿಸಬಹುದು. ನಾವು ಮತ್ತು ನಮ್ಮ ಪೀಳಿಗೆ ಉಳಿಯಬೇಕೆನಿಸಿದರೆ ಮುಂದೆ ಅತೀ ಜಾಗರೂಕ ಹೆಜ್ಜೆಯನ್ನು ಇಡಲೇ ಬೇಕು. ಇದರಿಂದ ಅನುಕೂಲವೂ ಆಗಲಿದೆ. ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಬೀಳಲಿದೆ. ಎಷ್ಟೋ ಜನರಿಗೆ ಎಷ್ಟೋ ಜನರನ್ನು ಬದುಕಿಸಿದ ಪುಣ್ಯವೂ ಲಭಿಸಲಿದೆ. ಇನ್ನೂ ಹೆಚ್ಚುವರಿ ಪುಣ್ಯ ಬೇಕಾದರೆ ಮಾಡಬೇಕಾಗಿದ್ದ ಖರ್ಚನ್ನು ಅಗತ್ಯವುಳ್ಳವರಿಗೆ ಹಂಚಲೂಬಹುದು. ಇಷ್ಟು ದಿನ ನಾವು ಮಾಡಿದ್ದು ಅಗತ್ಯವಿಲ್ಲದವರಿಗೆ ನಮ್ಮ ಪ್ರತಿಷ್ಠೆ ತೋರಿಸಲು ಹಂಚಿದ್ದು, ಮಧುಮೇಹಿಗಳಿಗೆ ಸಿಹಿ ಭಕ್ಷ್ಯಗಳನ್ನು ಹಂಚಿದ್ದು, ಮುಂದೆ ಹಾಗಲ್ಲ… ತಿಂದದ್ದು ಜೀರ್ಣಗೊಳ್ಳುವ ಮುಗ್ಧರಿಗೆ ಹಂಚುವುದು…
– ಮಟಪಾಡಿ ಕುಮಾರಸ್ವಾಮಿ