Advertisement

‘ದಿಲ್ ಮಾರ್’ಗೆ ನಾಯಕಿಯಾದ ಹಯಾತಿ

05:52 PM Apr 10, 2023 | Team Udayavani |

ನಿರ್ದೇಶಕ ಚಂದ್ರಮೌಳಿ “ದಿಲ್‌ಮಾರ್‌’ ಎಂಬ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಸಿನಿಮಾಕ್ಕೆದ ನಾಯಕಿಯ ಆಯ್ಕೆಯಾಗಿದೆ. ರವಿತೇಜಾ ನಟನೆಯ ಕಿಲಾಡಿ ಚಿತ್ರದಲ್ಲಿ ನಟಿಸಿದ್ದ ಬೋಲ್ಟ್ ಬ್ಯೂಟಿ ಡಿಂಪಲ್‌ ಹಯಾತಿ ನಾಯಕಿಯಾಗಿ ಆಯ್ಕೆಗಿದ್ದಾರೆ.

Advertisement

ಹೀರೋಯಿನ್‌ ಆಗಿ ಡಿಂಪಲ್‌ ಗೆ ಇದು ಮೊದಲ ಚಿತ್ರವಾಗಿದ್ದು, ಒಂದೊಳ್ಳೆ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಯುವ ಪ್ರತಿಭೆ ರಾಮ್‌ ನಾಯಕನಾಗಿ ಬಣ್ಣ ಹಚ್ಚಿದ್ದು, ಡೈಲಾಗ್‌ ಕಿಂಗ್‌ ಸಾಯಿ ಕುಮಾರ್‌ ವಿಲನ್‌ ಆಗಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿ ಬರುತ್ತಿರುವ “ದಿಲ್‌ ಮಾರ್‌’ ಸಿನಿಮಾದ ಶೂಟಿಂಗ್‌ ಕಂಪ್ಲೀಟ್‌ ಆಗಿದ್ದು, ಸದ್ಯದಲ್ಲಿಯೇ ಹಾಡು ಬಿಡುಗಡೆಯಾಗಲಿದೆ. ಇದಾದಾ ಬಳಿಕ ಟ್ರೇಲರ್‌ ರಿಲೀಸ್‌ ಮಾಡುವ ಮೂಲಕ ಪ್ರಮೋಷನ್ ಚಾಲನೆ ನೀಡಲಿದೆ ಚಿತ್ರತಂಡ.

“ಅರ್ಜುನ್‌ ರೆಡ್ಡಿ’ ಖ್ಯಾತಿಯ ರಾದನ್‌ ಸಿನಿಮಾಕ್ಕೆ ಸಂಗೀತ ನೀಡಿದ್ದು, ಕೆ ಮಹೇಶ್‌ ಮತ್ತು ನಾಗರಾಜ್‌ ಭದ್ರಾವತಿ ಬಂಡವಾಳ ಹೂಡಿರುವ ದಿಲ್‌ಮಾರ್‌ ಮೇ ಕೊನೆಯ ವಾರ ತೆರೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next