ನವದೆಹಲಿ : ಬಾಲಿವುಡ್ ನಲ್ಲಿ ರಾಜ್ -ಸಿಮ್ರಾನ್ ಜೋಡಿಯಾಗಿ ಸೂಪರ್ ಹಿಟ್ ಆಗಿದ್ದ ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ ಚಿತ್ರ ತೆರೆಕಂಡು ಅಕ್ಟೋಬರ್ 20, ಮಂಗಳವಾರದಂದು 25 ವರ್ಷಗಳನ್ನು ಪೊರೈಸಿದೆ. ಈ ಸಂದರ್ಭದಲ್ಲಿ ರಾಜ್ -ಸಿಮ್ರಾನ್ ಪ್ರೇಮ ಕಥೆಯನ್ನು ಮತ್ತೊಮ್ಮೆ ತೆರೆಯ ಮೇಲೆ ತರುವ ಯೋಜನೆಯೊಂದು ರೂಪುಗೊಂಡಿದೆ.
1995 ಅಕ್ಟೋಬರ್ 20 ಬಾಲಿವುಡ್ ಎಂದೂ ಮರೆಯದ ದಿನ. ಅಂದು ಶಾರುಖ್ ಖಾನ್ ಹಾಗೂ ಕಾಜೂಲ್ ಜೋಡಿಯ ಸೂಪರ್ ಹಿಟ್ ಪ್ರೇಮ ಕಥಾ ಹಂದರವುಳ್ಳ ಚಿತ್ರ ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ ಸಿನಿಮಾ ಬಿಡುಗಡೆಯಾದ ದಿನ. ಬಿಡುಗಡೆಯಾದ ದಿನದಿಂದ ಇಂದಿನವರೆಗೂ ಚಿತ್ರ ಪ್ರತ್ಯೇಕ ಅಭಿಮಾನವನ್ನು ಪ್ರೇಕಕ್ಷರ ಹೃದಯದಲ್ಲಿ ಗಳಿಸಿ ಉಳಿಸಿಕೊಂಡಿದೆ. ಮೊನ್ನೆ ಅಕ್ಟೋಬರ್ 20 ಮಂಗಳವಾರದಂದು ದಿಲ್ ವಾಲೆ ದುಲ್ಹನಿಯಾ ಲೇಜಾಯೆಂಗೆ ಚಿತ್ರ ಬಿಡುಗಡೆಯಾಗಿ 25 ವರ್ಷಗಳನ್ನು ಪೊರೈಸಿದೆ. ಈ ಸಂಭ್ರಮ ಸಡಗರದ ನಡುವೆ ಚಿತ್ರವನ್ನು ಮತ್ತೆ ದೊಡ್ಡ ಪರೆದಯಲ್ಲಿ ತೆರೆಯ ಮೇಲೆ ತರುವ ಸುದ್ದಿಯೊಂದು ಅಧಿಕೃತವಾಗಿ ಹೊರಬಿದ್ದಿದೆ.
ಖ್ಯಾತ ಚಲನಚಿತ್ರ ವಿಮರ್ಶಕ ತರಣ್ ಆದರ್ಶ್ ಆದಿತ್ಯ ಚೋಪ್ರಾ ನಿರ್ದೇಶನದ ಡಿಡಿಎಲ್ ಜೆ ಚಿತ್ರ ಬಿಡುಗಡೆಯಾಗಿ 25 ವರ್ಷದ ಪೊರೈಸಿದ ಹಿನ್ನಲೆಯಲ್ಲಿ ಮತ್ತೆ ಚಿತ್ರ ವಿಶ್ವದದ್ಯಾಂತ ಬಿಡುಗಡೆಯಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.ವಿಶ್ವದ 18 ದೇಶಗಳಲ್ಲಿ ಡಿಡಿಎಲ್ ಜೆ ಪ್ರೇಮ ಕಥೆಯ ಸೊಬಗು ತೆರೆಯ ಮೇಲೆ ಕಾಣಲಿದೆ.
ಎಲ್ಲೆಲ್ಲಿ ಬಿಡಯಗಡೆಯಾಗಲಿದೆ ಡಿಡಿಎಲ್ ಎಜೆ : ಜರ್ಮನಿ, ಯುಎಇ, ಸೌದಿ ಅರೇಬಿಯಾ, ಕತಾರ್, ಯುಎಸ್ಎ, ಯುಕೆ, ಕೆನಡಾ, ಮಾರಿಷಸ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಫಿಜಿ, ನಾರ್ವೆ, ಸ್ವೀಡನ್, ಸ್ಪೇನ್, ಸ್ವಿಟ್ಜರ್ಲೆಂಡ್, ಎಸ್ಟೋನಿಯಾ ಮತ್ತು ಫಿನ್ ಲ್ಯಾಂಡ್ ದೇಶದ ದೊಡ್ಡ ಪರೆದೆಯಲ್ಲಿ ರಾಜ್ -ಸಿಮ್ರಾನ್ ಪ್ರೀತಿಯ ಕಥೆ 25 ವರ್ಷಗಳ ಬಳಿಕ ಮತ್ತೆ ತೆರೆ ಕಾಣಲಿದೆ.
ಈಗಲೂ ಶೋ: ರಾಜ್ ಮತ್ತು ಸಿಮ್ರಾನ್ ಎಂಬ ಇಬ್ಬರು ಎನ್‌ಆರ್‌ಐ ಯುವಜೋಡಿ ಯುರೋಪ್ ಪ್ರವಾಸದಲ್ಲಿದ್ದಾಗ, ಪರಸ್ಪರ ಪ್ರೀತಿ ಸುವ ಕಥೆ ಚಿತ್ರದ್ದು. ಯಶ್ ಚೋಪ್ರಾ ನಿರ್ಮಾಣ, ಆದಿತ್ಯ ಚೋಪ್ರಾ ಚೊಚ್ಚಲ ನಿರ್ದೇಶನದ ಡಿಡಿಎಲ್‌ಜೆ 25 ವರ್ಷಗಳ ಬಳಿಕ ಈಗಲೂ ಮುಂಬೈನ “ಮರಾಠಾ’ ಚಿತ್ರ ಮಂದಿರದಲ್ಲಿ ಮಾರ್ನಿಂಗ್ ಶೋನಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಉತ್ತಮ ನಟ, ನಟಿ, ನಿರ್ದೇಶಕ ಸೇರಿದಂತೆ 10 ವಿಭಾಗಗಳಲ್ಲಿ ಫಿಲ್ಮ್ಫೇರ್ ಪ್ರಶಸ್ತಿ ಪಡೆದುಕೊಂಡಿತ್ತು.