ಕೊಲಂಬೋ: ದ್ವೀಪರಾಷ್ಟ್ರ ಶ್ರೀಲಂಕಾದ ಮಾಜಿ ಆರಂಭಿಕ ಆಟಗಾರ ತಿಲಕರತ್ನೆ ದಿಲ್ಶನ್ ತನ್ನ ದಿಲ್ ಸ್ಕೂಪ್ ನಿಂದ ಪ್ರಸಿದ್ದರಾಗಿದ್ದವರು. ಆಫ್ ಸ್ಪಿನ್ ಬೌಲಿಂಗ್ ಕೂಡಾ ಮಾಡುತ್ತಿದ್ದ ದಿಲ್ಶನ್, ಲಂಕಾದ ದಿಗ್ಗಜ ಆಟಗಾರರಲ್ಲಿ ಓರ್ವ. ಸದ್ಯ ನಿವೃತ್ತಿ ಜೀವನದಲ್ಲಿರುವ ದಿಲ್ಶನ್ ತನ್ನ ಸಾರ್ವಕಾಲಿಕ ನೆಚ್ಚಿನ ಏಕದಿನ ತಂಡ ಪ್ರಕಟಿಸಿದ್ದಾರೆ.
ದಿಲ್ಶನ್ ಸಾರ್ವಕಾಲಿಕ ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯನೆಂದರೆ ಸಚಿನ್ ತೆಂಡೂಲ್ಕರ್. ತನ್ನ ತಂಡದ ಆರಂಭಿಕ ಆಟಗಾರರನ್ನಾಗಿ ಸನತ್ ಜಯಸೂರ್ಯ ಮತ್ತು ಸಚಿನ್ ತೆಂಡೂಲ್ಕರ್ ರನ್ನು ಆಯ್ಕೆ ಮಾಡಿದ್ದಾರೆ. ಜಯಸೂರ್ಯ ಸ್ಪೋಟಕ ಆಟಗಾರ ಆದರೆ ಸಚಿನ್ ಇನ್ನಿಂಗ್ಸ್ ಕಟ್ಟುತ್ತಾರೆ ಎಂದಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಬ್ರಿಯಾನ್ ಲಾರಾ, ನಾಲ್ಕನೇ ಸ್ಥಾನದಲ್ಲಿ ಮಹೇಲಾ ಜಯವರ್ಧನೆ ಮತ್ತು ಐದನೇ ಕ್ರಮಾಂಕದಲ್ಲಿ ರಿಕಿ ಪಾಂಟಿಂಗ್ ಆಡಲಿದ್ದಾರೆ, ವಿಕೆಟ್ ಕೀಪರ್ ಬ್ಯಾಟ್ಸಮನ್ ಆಗಿ ಎಬಿ ಡಿವಿಲಿಯರ್ಸ್, ಆಲ್ ರೌಂಡರ್ ಆಗಿ ಜಾಕ್ ಕ್ಯಾಲಿಸ್ ಆಡಲಿದ್ದಾರೆ.
ದಿಲ್ಶನ್ ತಂಡದಲ್ಲಿ ವೇಗಿಗಳಾಗಿ ವಾಸೀಂ ಅಕ್ರಮ್, ಕಟ್ನಿ ವಾಲ್ಶ್, ಆಡಿದರೆ ಸ್ಪಿನ್ನರ್ ಗಳಾಗಿ ಶೇನ್ ವಾರ್ನ್ ಮತ್ತು ಮುತ್ತಯ್ಯ ಮರಳೀಧರನ್ ರನ್ನು ಆಯ್ಕೆ ಮಾಡಿದ್ದಾರೆ.
ದಿಲ್ಶನ್11: ಸನತ್ ಜಯಸೂರ್ಯ, ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಮಹೇಲಾ ಜಯವರ್ಧನೆ, ರಿಕಿ ಪಾಂಟಿಂಗ್, ಜಾಕ್ ಕಾಲಿಸ್, ಎಬಿ ಡಿವಿಲಿಯರ್ಸ್, ವಾಸೀಂ ಅಕ್ರಮ್, ಕಟ್ನಿ ವಾಲ್ಷ್, ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್.