Advertisement

ಸೋದರರ ಸಾವು ದಿಲೀಪ್‌ಜೀಗೆ ತಿಳಿದಿಲ್ಲ!

01:23 AM Sep 05, 2020 | mahesh |

ಮುಂಬಯಿ: ಸಹೋದರರಿಬ್ಬರು ಕೋವಿಡ್ ಸೋಂಕಿಗೆ ಬಲಿಯಾದ ವಿಚಾರವನ್ನು ಬಾಲಿವುಡ್‌ ಹಿರಿಯ ನಟ ದಿಲೀಪ್‌ ಕುಮಾರ್‌ ಅವರಿಗೆ ಇನ್ನೂ ತಿಳಿಸಿಲ್ಲ ಎಂದು ಅವರ ಪತ್ನಿ ಸಾಯಿರಾ ಬಾನು ಹೇಳಿದ್ದಾರೆ.

Advertisement

ದಿಲೀಪ್‌ ಸಹೋದರರಾದ ಎಹ್ಸಾನ್‌ ಖಾನ್‌ ಮತ್ತು ಅಸ್ಲಾಂ ಖಾನ್‌ ಇಬ್ಬರೂ ಮುಂಬಯಿನ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ದಿಲೀಪ್‌ ಕುಮಾರ್‌ ಅವರ ಆರೋಗ್ಯವೂ ಕ್ಷೀಣಿಸಿ ರುವ ಕಾರಣ, ಸದ್ಯಕ್ಕೆ ಅವರಿಗೆ ನೋವಾ ಗು­ವಂಥ ಯಾವುದೇ ಸುದ್ದಿಯನ್ನೂ ತಲುಪಿಸುತ್ತಿಲ್ಲ. ಹಾಗಾಗಿ, ಸೋದರರ ಸಾವಿನ ಸುದ್ದಿಯನ್ನೂ ಅವರಿಗೆ ಹೇಳಿಲ್ಲ. ಅವರು ಅಮಿತಾಭ್‌ ಬಚ್ಚನ್‌ ಅವರ ಅಭಿಮಾನಿಯಾಗಿರುವುದರಿಂದ, ಅವರಿಗೆ ಕೋವಿಡ್ ತಗುಲಿದ ವಿಚಾರ ವನ್ನೂ ಹೇಳಿರಲಿಲ್ಲ. ಇದೇ ವೇಳೆ, 97 ವರ್ಷದ ದಿಲೀಪ್‌ ಆರೋಗ್ಯ ಕುರಿತು ಮಾಹಿತಿ ನೀಡಿದ ಅವರು, ನಿರ್ಜ ಲೀಕರಣ ದಿಂದಾಗಿ ಇತ್ತೀಚೆಗೆ ಅವರ ರಕ್ತದೊತ್ತಡದಲ್ಲಿ ಏರುಪೇರಾಗಿತ್ತು, ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next